VIDEO: ಶಿರೂರಿನಲ್ಲಿ ನಾಪತ್ತೆಯಾದ ಲಾರಿ ಚಾಲಕ ಅರ್ಜುನ್​ ಕೊನೆಯ ವಿಡಿಯೋ ಇಲ್ಲಿದೆ

author-image
AS Harshith
Updated On
ಶಿರೂರು ಗುಡ್ಡಕ್ಕೆ ಬಂದ ಪೋಕ್​ಲೈನ್: ಏನಿದರ ಸಾಮರ್ಥ್ಯ? ಇಲ್ಲಿದೆ ಮಾಹಿತಿ
Advertisment
  • ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾದ ಲಾರಿ ಚಾಲಕ
  • ಕೋಯಿಕ್ಕೋಡ್ ಮೂಲದ ಅರ್ಜುನ್ ನಾಪತ್ತೆಯಾಗಿ ಇಂದಿಗೆ 10 ದಿನ
  • ಸ್ನೇಹಿತರ ಜೊತೆಗಿರುವ ಅರ್ಜುನ್​ ರೀಲ್ಸ್​ ವಿಡಿಯೋ ವೈರಲ್​​

ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾದ ಲಾರಿ ಚಾಲಕ ಅರ್ಜುನ್ ಕೊನೆಯ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲೂ ವಿಡಿಯೋ ಹರಿದಾಡುತ್ತಿದೆ.

ಕೇರಳದ ಕೋಯಿಕ್ಕೋಡ್ ಕಂಡ್ಯಕ್ಕಲ್ ಮೂಲದ ಅರ್ಜುನ್​ (30) ​​ ಲಾರಿ ಮೂಲಕ ಟಿಂಬರ್​ ಸಾಗಿಸುತ್ತಿದ್ದರು. ಲಾರಿ ಚಲಾಯಿಸುವ ವೇಳೆ ಶಿರೂರು ಬಳಿ ಲಾರಿ ನಿಲ್ಲಿಸಿದ್ದಾರೆ. ಆದರೆ ಮಳೆಗೆ ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡೆ ಕುಸಿದಿದೆ ಪರಿಣಾಮ ಲಾರಿ ಜೊತೆಗೆ ಅರ್ಜುನ್​ ನಾಪತ್ತೆಯಾಗಿದ್ದಾರೆ.

ಅರ್ಜುನ್ ಗೆ ಜುಲೈ 15ರಂದು ರಾತ್ರಿ 2.47 ಕ್ಕೆ ಮತ್ತೊಂದು ಲಾರಿ ಚಾಲಕ ಕರೆ ಮಾಡಿದ್ದನು. 3.45 ರ ವೇಳೆಗೆ ನಿದ್ದೆ ಬರುತ್ತಿದೆ ಎಂದು ಶಿರೂರಿನಲ್ಲಿ ಲಾರಿ ನಿಲ್ಲಿಸಿ ಅರ್ಜುನ್ ಮಲಗಿದ್ದಾರೆ. ಆದರೆ ಜುಲೈ 16ರಂದು ಬೆಳಗ್ಗೆ 8:30 ಸುಮಾರಿಗೆ ಗುಡ್ಡ ಕುಸಿದಿದೆ. ಸದ್ಯ ಅರ್ಜುನ್ ಲಾರಿ ನದಿಯೊಳಗೆ ಸಿಲುಕಿದೆ ಎಂದು ತಿಳಿದುಬಂದಿದೆ. ಗಂಗಾವಳಿ ನದಿಯಲ್ಲಿ ಲಾರಿ ತೆಗೆಯಲು ಕಾರ್ಯಾಚರಣೆ ನಡೆಯುತ್ತಿದೆ.

ಅರ್ಜುನ್​ ಕೊನೆಯ ವಿಡಿಯೋ

ಅರ್ಜುನ್​​ ಜೋಯಿಡಾದ ರಾಮನಗರದಲ್ಲಿ ಸ್ನೇಹಿತರ ಜೊತೆ ಇದ್ದ ವಿಡಿಯೋ ವೈರಲ್ ಆಗಿದೆ. ಟಿಂಬರ್ ತುಂಬಲು ರಾಮನಗರಕ್ಕೆ ಅರ್ಜುನ್ ಬಂದಿದ್ದರು. ಈ ವೇಳೆ ಕಾಡಿನಲ್ಲಿ ಅಡುಗೆ ಮಾಡುವಾಗ ಸ್ನೇಹಿತರು ರೀಲ್ಸ್ ಮಾಡಿದ್ದರು. ಎರಡು ಲಾರಿಯಲ್ಲಿ ಟಿಂಬರ್ ತೆಗೆದುಕೊಂಡು ಹೋಗಲು ಕೇರಳದಿಂದ ಬಂದಿದ್ದರು. ಸದ್ಯ ಅರ್ಜುನ್​ ಕೊನೆಯ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment