newsfirstkannada.com

Budget 2024: ಕಳೆದ ವರ್ಷ ಇಳಕಲ್ ಸೀರೆ.. ಈ ಬಾರಿ ನಿರ್ಮಲಾ ಸೀತಾರಾಮನ್​ ಧರಿಸಿದ ಸ್ಯಾರಿ ಎಲ್ಲಿಯದ್ದು ಗೊತ್ತಾ?

Share :

Published February 1, 2024 at 12:15pm

Update February 1, 2024 at 1:15pm

    ರಾಮನ ಬಣ್ಣವನ್ನು ಹೊಂದಿರುವ ಸೀರೆ ಧರಿಸಿದ ನಿರ್ಮಲಾ ಸೀತಾರಾಮನ್​

    ಕಳೆದ ವರ್ಷ ‘ಇಳಕಲ್​’ ರೇಷ್ಮೆ ಸೀರೆ ಧರಿಸಿದ್ದ ಹಣಕಾಸು ಸಚಿವೆ

    ಈ ಬಾರಿಯ ಬಜೆಟ್​ಗಾಗಿ ಧರಿಸಿದ್ದ ಸೀರೆ ಯಾವ ರಾಜ್ಯದ್ದು ಗೊತ್ತಾ?

ಕಳೆದ ವರ್ಷ ಬಜೆಟ್ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್ ಧಾರವಾಡ ಮೂಲದ ಸೀರೆಯನ್ನು ಧರಿಸುವ ಮೂಲಕ 2023ರ ಬಜೆಟ್ ಮಂಡಿಸಿದ್ದರು. ಆದರೆ ಈ ವರ್ಷ ವಿಶೇಷವಾದ ಸೀರೆಯನ್ನು ಹಣಕಾಸು ಸಚಿವೆ ಧರಿಸಿದ್ದಾರೆ. ಅಂದಹಾಗೆಯೇ ಈ ಬಾರಿ ಧರಿಸಿರುವ ಸೀರೆ ಯಾವ ರಾಜ್ಯದ್ದು ಗೊತ್ತಾ?

ನಿರ್ಮಲಾ ಸೀತಾರಾಮನ್​ ‘ಟಸ್ಸಾರ್’​ ಕೈಮಗ್ಗದಿಂದ ನೈದಿರುವ ನೀಲಿ ಮತ್ತು ಬಿಳಿಯ ಬಣ್ಣ ಸೀರೆಯನ್ನು ಈ ಬಾರಿಯ ಬಜೆಟ್​​ ಮಂಡನೆಗೆಗಾಗಿ ಧರಿಸಿದ್ದಾರೆ. ಈ ಮಲ್ಬೆರಿ ಬಣ್ಣದ ಸೀರೆಯು ‘ಬೆಂಗಲ್​ ಕಾಂತ’ ವಿನ್ಯಾಸವನ್ನು ಹೊಂದಿದ್ದು, ತಮಿಳುನಾಡಿನ ಸೀರೆ ಇದಾಗಿದೆ. ಅಲ್ಲಿ ಇದನ್ನು ‘ ರಾಮನ ನೀಲಿ’ ಎಂದು ಕರೆಯುತ್ತಾರೆ​. ಉತ್ತರ ಪ್ರದೇಶದಲ್ಲಿ ನಿರ್ಮಾಣವಾದ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಯದಲ್ಲಿ ಈ ಸೀರೆಯು ಹೆಚ್ಚು ಜನಪ್ರಿಯತೆ ಗಳಿಸಿತು.

2023ರಲ್ಲಿ ಧಾರವಾಡದ ಸೀರೆ ಧರಿಸಿದ್ದ ನಿರ್ಮಲಾ ಸೀತಾರಾಮನ್​

ಕಳೆದ ವರ್ಷ ನಿರ್ಮಲಾ ಸೀತಾರಾಮನ್​​ ಕರ್ನಾಟಕ ಬಾಗಲಕೋಟೆ ಮೂಲದ ಕೈಯಿಂದ ನೇಯ್ದ ‘ಇಳಕಲ್​’ ರೇಷ್ಮೆ ಸೀರೆಯನ್ನು ಧರಿಸಿದ್ದರು. ಈ ಸೀರೆ 800 ಗ್ರಾಂ ತೂಕವಿದ್ದು, ಧಾರವಾಡದ ಆರತಿ ಹಿರೇಮಠ ಒಡೆತನದ ‘ಆರತಿ ಕ್ರಾಫ್ಟ್​’ ವಿನ್ಯಾಸಗೊಳಿಸಿತ್ತು.

2022ರಲ್ಲಿ ಧರಿಸಿದ ಸೀರೆಯ ವಿಶೇಷತೆ

ಇನ್ನು 2022ರಲ್ಲಿ ಹಣಕಾಸು ಸಚಿವೆ ಕಿತ್ತಳೆ ಬಣ್ಣ ಕೆಂಪು-ಕಂದು ಬಣ್ಣದ ರೇಷ್ಮೆ ಸೀರೆಯನ್ನು ಧರಿಸಿದ್ದರು.

2021ರಲ್ಲಿ ಯಾವ ಸೀರೆ ಧರಿಸಿದ್ದರು?

2021ರ ಬಜೆಟ್​ ಮಂಡನೆ ವೇಳೆ ಕೆಂಪು ಬಣ್ಣದ ಸೀರೆಯನ್ನು ಧರಿಸಿದ್ದಾರೆ. ಇದು ಬಿಳಿಯ ಬಣ್ಣ ಬಾರ್ಡರ್​ ಒಳಗೊಂಡಿತ್ತು.

2019ರಲ್ಲಿ ಧರಿಸಿದ್ದ ಸೀರೆ ಯಾವುದು?

2019ರಲ್ಲಿ ಹಳದಿ ಬಣ್ಣದ ಸೀರೆಯನ್ನು ಧರಿಸಿ ಬಜೆಟ್​ ಮಂಡನೆ ಮಾಡಿದ್ದರು. ಇದನ್ನು ಮಂಗಳಕರವೆಂದು ಪರಿಗಣಿಸಲಾಗಿತ್ತು. ಅದೇ ವರ್ಷ ಗುಲಾಬಿ ಬಣ್ಣದ ಮಂಗಳಗಿರಿ ಸೀರೆ ಎಂದು ಧರಿಸಿ ಬಜೆಟ್​ ಮಂಡಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Budget 2024: ಕಳೆದ ವರ್ಷ ಇಳಕಲ್ ಸೀರೆ.. ಈ ಬಾರಿ ನಿರ್ಮಲಾ ಸೀತಾರಾಮನ್​ ಧರಿಸಿದ ಸ್ಯಾರಿ ಎಲ್ಲಿಯದ್ದು ಗೊತ್ತಾ?

https://newsfirstlive.com/wp-content/uploads/2024/02/Nirmala-Sitaraman-1.jpg

Load More