newsfirstkannada.com

ಹುಟ್ಟೂರಿನ ಶಿಕ್ಷಕ.. ಹಿಂದುಳಿದ ವರ್ಗಗಳ ಹಿತರಕ್ಷಕ.. 2 ವರ್ಷ ಜೈಲು ವಾಸ; ಈ ‘ಭಾರತ ರತ್ನ’ ಯಾರು..?

Share :

Published January 24, 2024 at 8:53am

Update January 24, 2024 at 9:56am

    ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್​ಗೆ ಭಾರತ ರತ್ನ ಗೌರವ

    ಮರಣೋತ್ತರ ಭಾರತ ರತ್ನ ಪ್ರಶಸ್ತಿಗೆ ಮೋದಿ ಸರ್ಕಾರ ಗುರುತಿಸಿದ್ದೇಗೆ?

    ಕರ್ಪೂರಿ ಠಾಕೂರ್ ಅವರಿಗೆ ಭಾರತರತ್ನ ಘೋಷಿಸಲು ಇವೆ ಕಾರಣಗಳು

ಹಿಂದೂಳಿದ ವರ್ಗಗಳ ಜನನಾಯಕ ಎಂದೇ ಖ್ಯಾತಿ ಪಡೆದಿದ್ದ ಬಿಹಾರದ ಮಾಜಿ ಮುಖ್ಯಮಂತ್ರಿ ದಿವಂಗತ ಕರ್ಪೂರಿ ಠಾಕೂರ್​ ಅವರಿಗೆ ಮರಣೋತ್ತರವಾಗಿ ಪ್ರತಿಷ್ಠಿತ ಭಾರತ ರತ್ನ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಘೋಷಣೆ ಮಾಡಿದ್ದಾರೆ. ಠಾಕೂರ್ ಅವರ 100ನೇ ಜನ್ಮ ವರ್ಷಾಚರಣೆಗೂ ಮೊದಲೇ ಭಾರತ ರತ್ನ ನೀಡಿ ಗೌರವಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ದೇಶದ ಅತ್ಯುನ್ನತ ಗೌರವ ‘ಭಾರತ ರತ್ನ’ ಗೌರವಕ್ಕೆ ಪಾತ್ರರಾಗುತ್ತಿರುವ ಕರ್ಪೂರಿ ಠಾಕೂರ್​ ಯಾರು? ಇವರ ಸಾಧನೆಗಳೇನು? ಈ ಪ್ರತಿಷ್ಠಿತ ಪ್ರಶಸ್ತಿ ಘೋಷಣೆ ಮಾಡಬೇಕಾದರೆ ಠಾಕೂರ್ ಮಹತ್ತರ ಕಾರ್ಯಗಳೇನು, ಮುಖ್ಯಮಂತ್ರಿ ಆಗಿ ಏನೆಲ್ಲ ಸಾಧನೆ ಮಾಡಿದ್ದಾರೆ. ಕರ್ಪೂರಿ ಠಾಕೂರ್​ರವರಿಗೆ ಭಾರತ ರತ್ನ ನೀಡಬೇಕು ಎಂದು ಜನತಾ ದಳ ಯುನೈಟೆಡ್ (ಜೆಡಿಯು) ಕೇಂದ್ರವನ್ನು ಒತ್ತಾಯಿಸಿದ್ದಕ್ಕೆ ಈ ಘೋಷಣೆ ಆಗಿದೆಯಾ ಎಂಬ ವಿವರ ಇಲ್ಲಿದೆ. 

ಕರ್ಪೂರಿ ಠಾಕೂರ್​ರವರನ್ನು ರಾಜಕಾರಣಿ ಎನ್ನುವುದಕ್ಕಿಂತ ಅವರೊಬ್ಬ ಧೀಮಂತ ಜನನಾಯಕ ಎಂದೇ ಖ್ಯಾತಿ ಪಡೆದಿದ್ದಾರೆ. ಬಿಹಾರದ ನೈ (ಸವಿತಾ ಸಮಾಜ)ಕ್ಕೆ ಸೇರಿದ್ದ ಇವರು 2 ಬಾರಿ ಮುಖ್ಯಮಂತ್ರಿ ಆಗಿದ್ದರು. ಸಾಮಾಜಿಕ ನ್ಯಾಯದ ಸಮಾನಾರ್ಥಕ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಐತಿಹಾಸಿಕ ನಿರ್ಧಾರ ಕೈಗೊಂಡ ನೈಜ ಸಮಾಜವಾದಿ ನಾಯಕ. ಶಿಕ್ಷಕರಾಗಿದ್ದಾಗಲೇ ವಿಧಾನಸಭೆಯ ಸದಸ್ಯರಾಗಿದ್ದರು. ಹೀಗಾಗಿಯೇ ಬಿಹಾರದ 11ನೇ ಸಿಎಂ ಆಗಿ 1970 ಡಿಸೆಂಬರ್​​ನಿಂದ 1971 ಜೂನ್​ವರೆಗೆ ಮೊದಲ ಬಾರಿಗೆ ಆಡಳಿತ ನಿರ್ವಹಿಸಿದ್ದರು. ಬಳಿಕ 2ನೇ ಬಾರಿ ಸಿಎಂ ಹುದ್ದೆಗೆ ಏರಿದ್ದ ಇವರು 1977 ಜೂನ್​​ನಿಂದ 1979 ಏಪ್ರಿಲ್​ವರೆಗೆ ಆಡಳಿತ ಮಾಡಿದರು. ಆ ಕಾಲದಲ್ಲೇ ಮದ್ಯ ನಿಷೇಧ ಮಾಡಿದ್ದ ಗಡಸುತನ ಮಹಾನ್ ನಾಯಕ ಕರ್ಪೂರಿ ಠಾಕೂರ್​.

ಇದನ್ನೂ ಓದಿ: Breaking News: ಕರ್ಪೂರಿ ಠಾಕೂರ್​​ಗೆ ಮರಣೋತ್ತರ ‘ಭಾರತ ರತ್ನ’ ಘೋಷಣೆ

ಬಿಹಾರದ ಸಮಸ್ತಿಪುರ್ ಜಿಲ್ಲೆಯ ಪಿತೌಂಜಿಯಾ (ಈಗ ಕರ್ಪುರಿ) ಗ್ರಾಮದಲ್ಲಿ ಗೋಕುಲ್ ಠಾಕೂರ್ ಮತ್ತು ರಾಮದುಲಾರಿ ದೇವಿ ದಂಪತಿಗೆ 1924 ಜನವರಿ 24 ರಂದು ಕರ್ಪೂರಿ ಜನಿಸಿದರು. ವಿದ್ಯಾಭ್ಯಾಸವನ್ನು ಮುಗಿಸಿದ ಇವರು, ಮಹಾತ್ಮಗಾಂಧಿ ಮತ್ತು ಸತ್ಯನಾರಾಯಣ ಸಿನ್ಹಾರಿಂದ ಪ್ರಭಾವಿತರಾಗಿದ್ದರು. ಹೀಗಾಗಿಯೇ ಇವರು ಆಲ್​ ಇಂಡಿಯಾ ಸ್ಟುಡೆಂಟ್​ ಫೆಡರೇಶನ್​ಗೆ ಸೇರ್ಪಡೆಗೊಂಡರು. ಮಹಾತ್ಮ ಗಾಂಧಿಯವರ ಕ್ವಿಟ್​ ಇಂಡಿಯಾ ಮೂಮೆಂಟ್​​ಗೆ ಸೇರಿಕೊಳ್ಳಲು ಪದವಿ ಕಾಲೇಜನ್ನು ತೊರೆದರು. ಈ ಚಳವಳಿಯಲ್ಲಿ ಭಾಗವಹಿಸಿದ್ದರಿಂದ ಬ್ರಿಟಿಷ್​ ಆಡಳಿತದಲ್ಲಿ 26 ತಿಂಗಳು ಜೈಲು ವಾಸ ಅನುಭವಿಸಿದ್ದರು.

ಭಾರತ ಸ್ವಾತಂತ್ರ್ಯ ಬಳಿಕ ಹುಟ್ಟೂರಿನ ಶಿಕ್ಷಕ

ಭಾರತ ಸ್ವಾತಂತ್ರ್ಯ ಬಳಿಕ ಠಾಕೂರ್ ಹುಟ್ಟೂರಿನ ಶಾಲೆಯಲ್ಲಿ ಶಿಕ್ಷಕರಾಗಿ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಶಿಕ್ಷಕರಾಗಿಯೇ 1952ರಲ್ಲಿ ಸಮಾಜವಾದಿ ಪಕ್ಷದಿಂದ ತಜ್ಪುರ್​ ಕ್ಷೇತ್ರದ ಶಾಸಕರಾಗಿ ಆಯ್ಕೆ ಆದರು. 1960ರಲ್ಲಿ ಕೇಂದ್ರ ಸರ್ಕಾರಿ ನೌಕರರ ಸಾರ್ವತ್ರಿಕ ಮುಷ್ಕರದ ಸಮಯದಲ್ಲಿ P&T ನೌಕರರ ಪರ ಮುಂದಾಳತ್ವ ವಹಿಸಿದ್ದಕ್ಕೆ ಅರೆಸ್ಟ್ ಮಾಡಲಾಗಿತ್ತು. ಬಳಿಕ 1970ರಲ್ಲಿ ಟೆಲ್ಕೊ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗಾಗಿ 28 ದಿನ ಆಮರಣಾಂತ ಉಪವಾಸ ಕೈಗೊಂಡಿದ್ದರು.

ಇಂಗ್ಲಿಷ್​ ಭಾಷೆಯನ್ನು ವಿರೋಧಿಸುತ್ತಿದ್ದ ಇವರು, ಬಿಹಾರದ ಶಿಕ್ಷಣ ಸಚಿವರಾದ ಮೇಲೆ ಶಾಲೆಗಳಲ್ಲಿ ಕಡ್ಡಾಯ ವಿಷಯದಿಂದ ಇಂಗ್ಲಿಷ್ ತೆಗೆದರು. ಸಚಿವರಾದ ಮೇಲೆ ಉಪಮುಖ್ಯಮಂತ್ರಿಯಾಗಿಯು ಕೆಲಸ ಮಾಡಿದರು. ಇವರ ಕಾರ್ಯವೈಖರಿಯಿಂದ 1970ರಲ್ಲಿ ಬಿಹಾರದ ಮೊದಲ ಕಾಂಗ್ರೆಸ್ಸೇತರ ಸಮಾಜವಾದಿ ಸಿಎಂ ಆದರು. ನಂತರ ರಾಜ್ಯದಲ್ಲಿ ಸಂಪೂರ್ಣ ಮದ್ಯಪಾನ ನಿಷೇಧ ಮಾಡಿದರು. ಜಯ ಪ್ರಕಾಶ್ ನಾರಾಯಣ್ ಅವರಿಗೆ ಠಾಕೂರ್ ಹತ್ತಿರದಲ್ಲಿದ್ದರಿಂದ ತುರ್ತುಪರಿಸ್ಥಿತಿ ವೇಳೆ ಸಂಪೂರ್ಣ ಬೆಂಬಲ ಕೊಟ್ಟಿದ್ದರು.

ಸಿಎಂ ಸ್ಥಾನಕ್ಕೆ ಕಂಟಕವಾಯಿತಾ ಮುಂಗೇರಿ ಲಾಲ್ ಆಯೋಗದ ವರದಿ?

1977ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್​ ಜನತಾ ಪಕ್ಷ ಭಾರೀ ಅಂತರದಲ್ಲಿ ಸೋಲಿಸಿತು. ಜನತಾ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಸಿಎಂ ಯಾರಾಗಬೇಕು ಅಂತಾ ಪಕ್ಷದಲ್ಲಿ ಪ್ರಶ್ನೆ ಮೂಡಿತು. ಈ ವೇಳೆ ಪಕ್ಷದ ಅಧ್ಯಕ್ಷರಾಗಿದ್ದ ಸತ್ಯೇಂದ್ರ ನಾರಾಯಣ್ ಸಿನ್ಹಾ ವಿರುದ್ಧ ಶಾಸಕಾಂಗ ಪಕ್ಷದ ಚುನಾವಣೆಯಲ್ಲಿ 144 ಮತಗಳಲ್ಲಿ 84 ಮತಗಳಿಂದ ಗೆದ್ದು ಕರ್ಪೂರಿ ಠಾಕೂರ್ 2ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾದರು. ಈ ವೇಳೆ ಇವರು ಹಿಂದುಳಿದ ಜಾತಿಗಳಿಗೆ ಸರ್ಕಾರಿ ಉದ್ಯೋಗದ ಮೀಸಲಾತಿ ನೀಡಲು ಮುಂಗೇರಿ ಲಾಲ್ ಆಯೋಗದ ವರದಿ ಜಾರಿಗೆ ತಂದಿದ್ದರಿಂದ ಪಕ್ಷದಲ್ಲಿ ಆಂತರಿಕ ಕಲಹ ಏರ್ಪಟ್ಟಿತು. ಹೀಗಾಗಿಯೇ ಏಪ್ರಿಲ್ 1979 ರಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಸರ್ಕಾರಿ ಉದ್ಯೋಗಗಳಲ್ಲಿ ಹಿಂದುಳಿದ ವರ್ಗಗಳಿಗೆ ಬಿಹಾರದಲ್ಲಿ ಶೇ.26ರಷ್ಟು ಮೀಸಲಾತಿ ನೀಡಿದ್ದರು. ಈ ಮೀಸಲಾತಿ ವ್ಯವಸ್ಥೆಯಲ್ಲಿ ಇತರೆ ಹಿಂದುಳಿದ ವರ್ಗಕ್ಕೆ ಶೇ.12, ಹೆಚ್ಚಿನ ಹಿಂದುಳಿದ ವರ್ಗಕ್ಕೆ ಶೇ.8, ಮಹಿಳೆಯರಿಗೆ ಶೇ.3 ಮತ್ತು ಮೇಲ್ವರ್ಗದ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.3 ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಸಿಕ್ಕಿತ್ತು. ಠಾಕೂರ್‌ರನ್ನು ಬಡವರ ಪರವಾಗಿದ್ದರಿಂದ ಜನನಾಯಕ ಎಂದು ಖ್ಯಾತಿ ಪಡೆದರು.

ಮೋದಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಜೆಡಿಯು

ಠಾಕೂರ್ ಅವರು ರಾಜೀನಾಮೆ ನೀಡಿದ ಬಳಿಕ ಜನಾತ ಪಕ್ಷ ಇಬ್ಭಾಗವಾಯಿತು. ಇದರಲ್ಲಿ ಚರಣ್ ಸಿಂಗ್ ಬಣವನ್ನು ಕರ್ಪೂರಿ ಬೆಂಬಲಿಸಿ1980ರ ಚುನಾವಣೆಯಲ್ಲಿ ಜನತಾ ಪಕ್ಷದ (ಜಾತ್ಯತೀತ) ಅಭ್ಯರ್ಥಿಯಾಗಿ ಸಮಸ್ತಿಪುರ್ ಕ್ಷೇತ್ರದಿಂದ ಶಾಸಕರಾದರು. ಮತ್ತೆ ಪಕ್ಷದ ಹೆಸರನ್ನು ಭಾರತೀಯ ಲೋಕದಳ ಎಂದು ಬದಲಾಯಿಸಿತು. 1985ರ ಚುನಾವಣೆಯಲ್ಲಿ ಸೋನ್ಬರ್ಸಾ ಕ್ಷೇತ್ರದಿಂದ ಲೋಕದಳ ಅಭ್ಯರ್ಥಿಯಾಗಿ ಮತ್ತೆ ವಿಧಾನ ಸಭೆಗೆ ಆಯ್ಕೆಯಾದರು. ಶಾಸಕರಾಗಿದ್ದಾಗಲೇ ಕರ್ಪೂರಿ ಠಾಕೂರ್ ಅವರು ನಿಧನರಾದರು.

ಬಿಹಾರ್ ಸಿಎಂ ನಿತೀಶ್ ಕುಮಾರ್​​ರಿಂದ ಕರ್ಪೂರಿ ಠಾಕೂರು ಅವರಿಗೆ ನಮನ

ಈ ಎಲ್ಲ ಸಮಾಜಮುಖಿ ಕಾರ್ಯಳನ್ನು ಪರಿಗಣಿಸಿ ಬಹಳ ದಿನಗಳಿಂದ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಜನತಾ ದಳ ಯುನೈಟೆಡ್ (ಜೆಡಿಯು) ಒತ್ತಾಯಿಸುತ್ತಿತ್ತು. ಇದನ್ನು ಗಣನೆಗೆ ತೆಗೆದುಕೊಂಡಿರುವ ಕೇಂದ್ರವು ಅವರ ಸಾಮಾಜಿಕ, ರಾಜಕೀಯ ಹಾಗೂ ಅವರ ನೀಡಿದ ಕೊಡುಗೆಯನ್ನು ಪರಿಗಣಿಸಿ ದೇಶದ ಅತ್ಯುನ್ನತ, ಮಹತ್ತರವಾದ ಪ್ರಶಸ್ತಿ ನೀಡಲು ಮುತುವರ್ಜಿ ವಹಿಸಿದೆ. ಹೀಗಾಗಿ ಮೋದಿ ಸರ್ಕಾರಕ್ಕೆ ಜೆಡಿಯು ಪಕ್ಷ ಕೃತಜ್ಞತೆ ಸಲ್ಲಿಸಿದೆ.

ವಿಶೇಷ ವರದಿ: ಭೀಮಪ್ಪ, ಡಿಜಿಟಲ್ ಡೆಸ್ಕ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹುಟ್ಟೂರಿನ ಶಿಕ್ಷಕ.. ಹಿಂದುಳಿದ ವರ್ಗಗಳ ಹಿತರಕ್ಷಕ.. 2 ವರ್ಷ ಜೈಲು ವಾಸ; ಈ ‘ಭಾರತ ರತ್ನ’ ಯಾರು..?

https://newsfirstlive.com/wp-content/uploads/2024/01/Karpoori_Thakur_NEW.jpg

Load More