newsfirstkannada.com

ಸಿಕ್ಕ, ಸಿಕ್ಕ ಪುರುಷರಿಗೆ ಹಿಗ್ಗಾಮುಗ್ಗ ಹೊಡಿಯೋ ನಾರಿಯರ ‘ಲಾತ್ಮಾರ್’ ಹಬ್ಬ; ಏನಿದರ ವಿಶೇಷ?

Share :

Published March 20, 2024 at 3:27pm

Update March 20, 2024 at 3:35pm

    ವಿಶ್ವದಾದ್ಯಂತ ಸಾಕಷ್ಟು ಜನಪ್ರಿಯವಾಗಿದೆ ‘ಲಾತ್ಮಾರ್’ ಹೋಳಿ ಹಬ್ಬ

    ಈ ಹೋಳಿಯಾಟ ನೋಡಲು ದೂರದ ಊರಿನಿಂದ ಜನರು ಬರ್ತಾರೆ

    ‘ಲತ್ಮಾರ್’ ಹೋಳಿಯಾಟಕ್ಕೂ ದ್ವಾಪರಯುಗದ ಕೃಷ್ಣ ರಾಧೆಗೂ ಸಂಬಂಧವಿದೆ

ಲಕ್ನೋ: ಭಾರತದಲ್ಲಿ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತೆ. ಅದರಲ್ಲೂ ಬರ್ಸಾನಾದ ಪ್ರಸಿದ್ಧ ‘ಲಾತ್ಮಾರ್’ ಹೋಳಿ ವಿಶ್ವದಾದ್ಯಂತ ಸಾಕಷ್ಟು ಜನಪ್ರಿಯವಾಗಿದೆ. ಹೋಳಿಯಾಟ ನೋಡಲು ದೂರದ ಊರಿನಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಮಥುರಾದ ಬರ್ಸಾನಾಗೆ ಬರುತ್ತಾರೆ.

ಇದನ್ನು ಓದಿ: ‘ತಾಯಿ ಹೃದಯದ ಕುಮಾರಸ್ವಾಮಿ ಹೃದಯ ಚಿಕಿತ್ಸೆ ಯಶಸ್ವಿಯಾಗಲಿ’- ದೇವರ ಮೊರೆ ಹೋದ ಅಭಿಮಾನಿಗಳು

ಮಥುರಾದ ಪ್ರಖ್ಯಾತ ‘ಲತ್ಮಾರ್’ ಹೋಳಿಯಾಟಕ್ಕೂ ಹಾಗೂ ರಾಧೆ ಕೃಷ್ಣಗೂ ಸಂಬಂಧವಿದೆ ಎಂದು ಹೇಳಲಾಗುತ್ತದೆ. ಹೀಗಾಗಿ ಲಾತ್ಮಾರ್ ಹೋಳಿ ಸಾಕಷ್ಟು ಜನಪ್ರಿಯವಾಗಿದೆ. ಹೋಳಿಯಾಟ  ಆಡಲು ನಂದಗ್ರಾಮದ ಪುರುಷರು ಲಾತ್ಮಾರ್ ಹೋಳಿ ಆಡಲು ಬರ್ಸಾನಾಗೆ ಬರುತ್ತಾರೆ. ಮಹಿಳೆಯರು ಪುರುಷರ ಮೇಲೆ ಕೋಲುಗಳಿಂದ ದಾಳಿ ಮಾಡುತ್ತಾರೆ. ಆಗ ಪುರುಷರು ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಾರೆ. ಹೀಗೆ ಆಡುತ್ತಾ ಕ್ರಿಯೆಗೆ ಪ್ರತಿಕ್ರಿಯಿಸುತ್ತಾ ಮೋಜು ಮಸ್ತಿಯಲ್ಲಿ ತೊಡಗಿಕೊಳ್ಳುತ್ತಾರೆ.

ವಾರದ ಆಚರಣೆಗಾಗಿ ಇಡೀ ‘ಮೇಳ’ ಪ್ರದೇಶವನ್ನು 5 ಮತ್ತು12 ವಲಯಗಳಾಗಿ ವಿಂಗಡಿಸಲಾಗಿದೆ. ಇದು ಮಾರ್ಚ್ 25ರಂದು ಹೋಳಿಯೊಂದಿಗೆ ಮುಕ್ತಾಯಗೊಳ್ಳುತ್ತದೆ. ಇದರ ಜತೆಗೆ ಸಂಚಾರ ದಟ್ಟಣೆಯನ್ನು ತಪ್ಪಿಸಲು, ಬರ್ಸಾನಾದಲ್ಲಿ 78 ತಡೆಗೋಡೆಗಳು ಮತ್ತು 45 ಪಾರ್ಕಿಂಗ್ ಸ್ಲಾಟ್‌ಗಳನ್ನು ಸ್ಥಾಪಿಸಲಾಗಿದೆ. ಈ ಉತ್ಸವಕ್ಕಾಗಿ ಜನರನ್ನು ನಂದಗಾಂವ್ ಅಥವಾ ಬರ್ಸಾನಾಗೆ ಸಾಗಿಸಲು ಜಿಲ್ಲಾಡಳಿತವು 150 ಬಸ್‌ಗಳನ್ನು ನಿಯೋಜಿಸಿತ್ತು. ಬರ್ಸಾನಾ ಮತ್ತು ನಂದಗಾಂವ್ ಹೋಳಿ ಹಬ್ಬವನ್ನು ಆಚರಣೆ ಮಾಡಿರೋ ಫೋಟೋಗಳು ಸಾಮಾಜಿಕ ಜಾಲತಾಣಲ್ಲಿ ವೈರಲ್​ ಆಗಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಕ್ಕ, ಸಿಕ್ಕ ಪುರುಷರಿಗೆ ಹಿಗ್ಗಾಮುಗ್ಗ ಹೊಡಿಯೋ ನಾರಿಯರ ‘ಲಾತ್ಮಾರ್’ ಹಬ್ಬ; ಏನಿದರ ವಿಶೇಷ?

https://newsfirstlive.com/wp-content/uploads/2024/03/holi-festival.jpg

Load More