newsfirstkannada.com

ಸಲ್ಮಾನ್ ಖಾನ್​ ಹತ್ಯೆಗೆ ಭಯಾನಕ ಸಂಚು; ಶಾಟರ್‌ಗಳ ಕೈಗೆ ಪಾಕಿಸ್ತಾನದಿಂದ AK-47, AK-92 ಗನ್‌?

Share :

Published June 1, 2024 at 3:23pm

    ಕಾರಿನಲ್ಲಿಯೇ AK-47 ​ಗನ್​ ಬಳಸಿ ಹತ್ಯೆ ಮಾಡಲು ಸಿದ್ಧತೆ ನಡೆಸುತ್ತಿದ್ದ ಹಂತಕರು

    ನಟನನ್ನು ಹತ್ಯೆ ಮಾಡಲು M16, ಎಕೆ47 ಹಾಗೂ ಎಕೆ-92 ರೈಫಲ್​ಗಳನ್ನು ಖರೀದಿ

    ಪೊಲೀಸ್ ಅಧಿಕಾರಿಗಳ ತನಿಖೆ ವೇಳೆ ಆಘಾತಕಾರಿ ಮಾಹಿತಿ ಬಿಚ್ಚಿ ಬಂಧಿತ ಆರೋಪಿ

ಮುಂಬೈ: ಮೊನ್ನೆಯಷ್ಟೇ ಬಾಲಿವುಡ್​ ನಟ ಸಲ್ಮಾನ್​ ಖಾನ್ ನಿವಾಸದ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಆ ಬಳಿಕ ಗುಂಡಿನ ದಾಳಿ ಕೇಸ್​​ ತನಿಖೆಯನ್ನು ಮುಂಬೈ ಪೊಲೀಸರು ತೀವ್ರಗೊಳಿಸಿ ಗುಜರಾತ್​ನಲ್ಲಿ ಇಬ್ಬರನ್ನು ಬಂಧಿಸಿದ್ದರು. ವಿಕ್ಕಿ ಗುಪ್ತ (24), ಸಾಗರ್ ಪಾಲ್ (21) ಬಂಧಿತ ಆರೋಪಿಗಳು ಎಂದು ಗುರುತಿಸಿಲಾಗಿದೆ.

ಇದನ್ನೂ ಓದಿ: ಎಣ್ಣೆ ಹೊಡೆದು ಸ್ಟಾರ್​ ಹೀರೋಯಿನ್​ ಜತೆ ಬಾಲಯ್ಯ ಅಸಭ್ಯ ವರ್ತನೆ.. ಈ ಬಗ್ಗೆ ನಟಿ ಅಂಜಲಿ ಏನಂದ್ರು?

ಆದರೆ ಇದೀಗ ನಟ ಸಲ್ಮಾನ್ ಖಾನ್ ಅವರನ್ನು ಫಾರ್ಮ್ ಹೌಸ್‌ ಬಳಿ ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಹೌದು, ಮಹಾರಾಷ್ಟ್ರದ ಪನ್ವೇಲ್​ನಲ್ಲಿರುವ ಸಲ್ಮಾನ್ ಖಾನ್ ಅವರ ಫಾರ್ಮ್ ಹೌಸ್‌ ಬಳಿ ಕಾರಿನಲ್ಲಿಯೇ ಎಕೆ-47 ರೈಫಲ್​ಗಳನ್ನು ಬಳಸಿ ಹತ್ಯೆ ಮಾಡಲು ಗ್ಯಾಂಗ್​ಸ್ಟರ್ ಲಾರೆನ್ಸ್​ ಬಿಷ್ಣೋಯ್ ತಂಡವು ಸಂಚು ರೂಪಿಸಿತ್ತು ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ಸದ್ಯ ಈ ಸಂಬಂಧ ನಾಲ್ವರು ಶೂಟರ್​ಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಧನಂಜಯ್ ತಾಪ್ಪಿಂಗ್ ಅಲಿಯಾಸ್ ಅಜಯ್ ಕಶ್ಯಪ್, ಗೌರವ ಭಾಟಿಯಾ ಅಲಿಯಾಸ್ ನಹಿ, ವಾಪ್ಪಿ ಖಾನ್ ಅಲಿಯಾಸ್ ವಾಸೀಂ ಚಿಕ್ನಾ ಹಾಗೂ ರಿಝಾನ್ ಖಾನ್ ಅಲಿಯಾಸ್ ಜಾವೇದ್ ಖಾನ್ ಎಂದು ಗುರುತಿಸಲಾಗಿದೆ.

ಈ ನಾಲ್ಕು ಮಂದಿ ಶೂಟರ್​ಗಳು ಸಲ್ಮಾನ್ ಖಾನ್ ಅವರ ಫಾರ್ಮ್ ಹೌಸ್ ಹಾಗೂ ಗುಂಡು ಹಾರಿಸಲಿರುವ ಸ್ಥಳದ ಪರಿಶೀಲನೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ. ಸಲ್ಮಾನ್ ಖಾನ್ ಮೇಲೆ ಎಕೆ-47 ರೈಫಲ್ ಗಳಲ್ಲದೆ ಇತರ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸುವಂತೆ ನಾಲ್ವರು ಶೂಟರ್​ಗಳಿಗೆ ಸೂಚನೆ ನೀಡಿರುವ ವಿಡಿಯೊಗಳನ್ನು ಆರೋಪಿಗಳ ಮೊಬೈಲ್​ನಲ್ಲಿ ಪತ್ತೆಯಾಗಿದೆ. ಹೀಗಾಗಿ ಆರೋಪಿಗಳ ಬಳಿಯ ಫೋನ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನು ಬಂಧಿತ ಆರೋಪಿಗಳ ವಿಚಾರಣೆಯ ವೇಳೆ ಅಜಯ್ ಕಶ್ಯಪ್, ಎಂ16, ಎಕೆ47 ಹಾಗೂ ಎಕೆ-92 ರೈಫಲ್​ಗಳನ್ನು ಖರೀದಿಸಲು ಪಾಕಿಸ್ತಾನದಲ್ಲಿರುವ ದೋಗಾ ಎಂಬ ಶಸ್ತ್ರಾಸ್ತ್ರ ವ್ಯಾಪಾರಿಯ ಸಂಪರ್ಕದಲ್ಲಿದ್ದೆ ಎಂದು ಬಹಿರಂಗಪಡಿಸಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಲ್ಮಾನ್ ಖಾನ್​ ಹತ್ಯೆಗೆ ಭಯಾನಕ ಸಂಚು; ಶಾಟರ್‌ಗಳ ಕೈಗೆ ಪಾಕಿಸ್ತಾನದಿಂದ AK-47, AK-92 ಗನ್‌?

https://newsfirstlive.com/wp-content/uploads/2024/06/sallu.jpg

Load More