/newsfirstlive-kannada/media/post_attachments/wp-content/uploads/2024/10/SALMAN-KHAN.jpg)
ಮುಂಬೈ NCP ನಾಯಕ ಬಾಬಾ ಸಿದ್ದಿಕಿ ಹತ್ಯೆ ಬಳಿಕ ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಭದ್ರತೆ ಹೆಚ್ಚಾಗಿದೆ. ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಮನೆ, ಅಪಾರ್ಟ್ಮೆಂಟ್ ಹೊರಗಡೆ ಪೊಲೀಸರು ಹೆಚ್ಚಿನ ಭದ್ರತೆ ನಿಯೋಜನೆ ಮಾಡಿದ್ದಾರೆ.
ಕುಖ್ಯಾತ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಬಾಬಾ ಸಿದ್ಧಿಕಿಯನ್ನು ಹತ್ಯೆಯ ಹೊಣೆಯನ್ನು ಹೊತ್ತ ಬಳಿಕ ನಟ ಸಲ್ಮಾನ್ ಖಾನ್ಗೆ ಭದ್ರತೆ ಹೆಚ್ಚಾಗಿದೆ. ಸಲ್ಮಾನ್ ಖಾನ್ ಜೊತೆಗಿನ ಹಳೇಯ ವೈಷಮ್ಯ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವುದು ಕೂಡ ಬೆಳಕಿಗೆ ಬಂದಿದೆ. ಇದೇ ವಿಚಾರವಾಗಿ ನಿರ್ಮಾಪಕ ರಾಮ್ಗೋಪಾಲ್ ವರ್ಮಾ ಕೂಡ ಟ್ವೀಟ್ ಮಾಡಿದ್ದಾರೆ. ಟ್ವೀಟ್ನಲ್ಲಿ ಸಲ್ಮಾನ್ ಖಾನ್ ಮತ್ತು ಲಾರೆನ್ಸ್ ಕುರಿತು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Breaking News: ಮತ್ತೆ ಹುಟ್ಟಿ ಬಂದ ರೇಣುಕಾಸ್ವಾಮಿ! ಮುದ್ದಾದ ಗಂಡು ಮಗುವನ್ನು ಬರಮಾಡಿಕೊಂಡ ಕುಟುಂಬ
‘1998 ರಲ್ಲಿ ಜಿಂಕೆಯನ್ನು ಕೊಂದಾಗ ಲಾರೆನ್ಸ್ ಬಿಷ್ಣೋಯ್ಗೆ 5 ವರ್ಷ. 25 ವರ್ಷಗಳಿಂದ ತನ್ನೊಳಗೆ ದ್ವೇಷವನ್ನು ಇಟ್ಟುಕೊಂಡಿದ್ದಾನೆ. ಇಂದು ಅವನಿಗೆ 30 ವರ್ಷ ವಯಸ್ಸಾಗಿದ್ದು, ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದು ಅವನ ಗುರಿಯಾಗಿದೆ. ಯಾಕೆಂದರೆ ಸಲ್ಮಾನ್ ಜಿಂಕೆಯನ್ನು ಕೊಂದಿದ್ದ. ಇದು ನಿಜವಾಗಿಯೂ ಪ್ರಾಣಿಗಳ ಮೇಲಿನ ಅವನ ಪ್ರೀತಿಯೇ ಅಥವಾ ದೇವರು ತಮಾಷೆ ಮಾಡುತ್ತಿದ್ದಾನಾ? ಎಂದು ರಾಮ್ಗೋಪಾಲ್ ವರ್ಮಾ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಫ್ಯಾನ್ಸ್ಗೆ ಗುಡ್ನ್ಯೂಸ್; ರಶ್ಮಿಕಾ ಮಂದಣ್ಣಗೆ ಕೇಂದ್ರ ಸರ್ಕಾರದಿಂದ ಮಹತ್ವದ ಜವಾಬ್ದಾರಿ
ಸಲ್ಮಾನ್ ಖಾನ್ 1998ರಲ್ಲಿ ‘ಹಮ್ ಸಾಥ್ ಸಾಥ್ ಹೇ’ ಸಿನಿಮಾದ ಚಿತ್ರೀಕರಣ ಸಮಯದಲ್ಲಿ ಕೃಷ್ಣಮೃಗ ಬೇಟೆಯಾಡಿದ್ದರು. ರಾಜಸ್ಥಾನದಲ್ಲಿ ಅದನ್ನು ಬೇಟೆಯಾಡಿದ್ದರು. ಲಾರೆನ್ಸ್ ಬಿಷ್ಣೋಯ್ ಸಮುದಾಯವು ಈ ಮೃಗವನ್ನ ಪವಿತ್ರವೆಂದು ಪರಿಗಣಿಸುತ್ತದೆ. ಅಂದಿನಿಂದ ಬಿಷ್ಣೋಯ್ ಕುಟುಂಬ ಆತನ ಮೇಲೆ ಕೋಪಿಸಿಕೊಂಡಿದೆ. 2018ರಲ್ಲಿ ಸಲ್ಮಾನ್ ಖಾನ್ ಜೋಧ್ಪುರ ಕೋರ್ಟ್ಗೆ ಬಂದಾಗ ಲಾರೆನ್ಸ್ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ