Advertisment

ದರ್ಶನ್ ವಿಚಾರದಲ್ಲಿ ಪೊಲೀಸರಿಗೇ ಸಂಕಷ್ಟ ಎದುರಾಗುತ್ತಾ? ಠಾಣೆಯಲ್ಲಿ ಆಗಿದ್ದೇನು..?

author-image
Ganesh
Updated On
‘ಅವರಣ್ಣ ಉಂಟು, ಅವನುಂಟು.. ನಾವು ತಲೆನೇ ಕೆಡಿಸಿಕೊಳ್ಳಲ್ಲ’ ಆರೋಪಿ ಪವನ್ ತಂದೆ ಅಚ್ಚರಿ ಹೇಳಿಕೆ
Advertisment
  • ರೇಣುಕಾಸ್ವಾಮಿಯ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್
  • ಪ್ರಕರಣದಲ್ಲಿ ಒಟ್ಟು 13 ಆರೋಪಿಗಳನ್ನು ಬಂಧಿಸಿರುವ ಪೊಲೀಸ್
  • ಸ್ಥಳ ಮಹಜರು ಬಳಿಕ ಹೇಳಿಕೆ ದಾಖಲಿಸಿಕೊಂಡ ಅಧಿಕಾರಿಗಳು

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿಯ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ನಟಿ ಪವಿತ್ರ ಗೌಡ ಸೇರಿ ಒಟ್ಟು 13 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಾಗಿರುವ ಎಲ್ಲಾ ಆರೋಪಿಗಳ ವಿಚಾರಣೆಯು ಬೆಂಗಳೂರಿನ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ತನಿಖೆ ನಡೆಯುತ್ತಿದೆ.

Advertisment

RTI ಮೊರೆ ಹೋದ ವಕೀಲರು
ಪೊಲೀಸರ ತನಿಖೆ ವೇಳೆ ಹಲವು ಅನುಮಾನಗಳು ಶುರುವಾಗಿವೆ. ನಟ ದರ್ಶನ್​​ಗೆ ಪೊಲೀಸರು ರಾಜಾತಿಥ್ಯ ಮಾಡುತ್ತಿದ್ದಾರೆ. ಸಿಗರೇಟ್ ನೀಡಿದ್ದಾರೆ. ಬಿರಿಯಾನಿ ತರಿಸಿಕೊಟ್ಟಿದ್ದಾರೆ. ಇದೇ ಕಾರಣಕ್ಕೆ ಠಾಣೆಯ ಮುಂಭಾಗದಲ್ಲಿ ಶಾಮಿಯಾನ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಿಂದ ನಮಗೆ ಪೊಲೀಸ್ ತನಿಖೆ ಮೇಲೆ ಅನುಮಾನ ಇದೆ. ಪೊಲೀಸ್ ತನಿಖೆ ವೇಳೆ ಏನೆಲ್ಲ ಆಗುತ್ತಿದೆ ಅನ್ನೋದ್ರ ಬಗ್ಗೆ ನಮಗೆ ಮಾಹಿತಿ ಬೇಕು ಎಂದು ಆರ್​ಟಿಐ ಸಲ್ಲಿಕೆ ಆಗಿದೆ.

ಇದನ್ನೂ ಓದಿ:‘ಬಾಸ್​ ಹೆಂಡ್ತಿಗೆ ಮೆಸೇಜ್ ಮಾಡ್ತಿಯಾ ಎಂದು ಹೊಡೆದ್ವಿ..’ ಇಂಚಿಂಚು ಮಾಹಿತಿ ಬಿಚ್ಚಿಟ್ನಂತೆ ರಾಘವೇಂದ್ರ

publive-image

ವಕೀಲರಾದ ಸುಧಾ ಕಾಟ್ವ, ನರಸಿಂಹಮೂರ್ತಿ ಹಾಗೂ ಉಮಾಪತಿ ಎಂಬುವವರಿಂದ ಸಿಸಿಟಿವಿ ಒದಗಿಸುವಂತೆ ಆರ್​ಟಿಐನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನಮಗೆ ನಮಗೆ ಠಾಣೆಯ 48 ಗಂಟೆಯಲ್ಲಿ ರೆಕಾರ್ಡ್ ಆದ ಸಿಸಿಟಿವಿ ಒದಗಿಸುವಂತೆ ಅರ್ಜಿಯಲ್ಲಿ ಕೋರಿದ್ದಾರೆ. ವಕೀಲ ನರಸಿಂಹ ಮೂರ್ತಿ ಮಾಧ್ಯಮಗಳ ಜೊತೆ ಮಾತನಾಡಿ.. ಈ ಹಿಂದೆ ದರ್ಶನ್​ಗೆ ಹಲವು ಅಧಿಕಾರಿಗಳು ಸಹಾಯ ಮಾಡಿದ್ದಾರೆ. ಆ ಅಧಿಕಾರಿಗಳೆಲ್ಲಾ ಕೋಟಿ ಲೆಕ್ಕದಲ್ಲಿ ಮಾತಾಡ್ತಾರೆ. ಈ ಕೇಸ್​ನಲ್ಲಿ ಕೂಡ ಏನೇನೋ ಮಾಡಲಾಗ್ತಿದೆ. ಶಾಮಿಯಾನ ಹಾಕ್ತಾರೆ.. ನಾಚಿಕೆ ಆಗಬೇಕು.. ಇದು ಡೆಮಾಕ್ರಸಿನಾ..? ಸಿಸಿಟಿವಿ ಬೇಕೇಬೇಕು. ಯಾವ ಕಾರಣಕ್ಕೂ ಅವ್ರು ಸಿಸಿಟವಿ ಇಲ್ಲ, ಅನ್ನೋ ಹಾಗಿಲ್ಲ. ಒಳಗಡೆ ಏನ್ ನಡೆದಿದೆ ಎಲ್ಲಾ ಸತ್ಯಾ ಸತ್ಯತೆ ಹೊರಗಡೆ ಬರುತ್ತದೆ ಎಂದು ವಕೀಲ ನರಸಿಂಹ ಮೂರ್ತಿ ಹೇಳಿದ್ದಾರೆ.

Advertisment

ಇದನ್ನೂ ಓದಿ:ಮೂರ್ಛೆ ಹೋದ ಅನ್ಕೊಂಡ್ವಿ, ಆದರೆ..’ ಅಸಲಿ ಸತ್ಯ ಕಕ್ಕಿದ್ನಾ ಆರೋಪಿ ಪವನ್..!

ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮಾಹಿತಿ ಕೇಳುತ್ತಿದ್ದಂತೆಯೇ ಹಲವು ಪ್ರಶ್ನೆಗಳು ಶುರುವಾಗಿವೆ. ದರ್ಶನ್​ಗೆ ಪೊಲೀಸರು ನಿಜಕ್ಕೂ ರಾಜಾತಿಥ್ಯ ನೀಡಿದರಾ? ದರ್ಶನ್​ಗೆ ಸಿಗರೇಟ್ ನೀಡಿದರಾ? ಒಂದು ವೇಳೆ ಇದೆಲ್ಲ ನಿಜವಾದರೆ ಪೊಲೀಸರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:‘ಊಟ ಮಾಡಿ ಊರು ಸೇರು ಅಂದಿದ್ದೆ..’ ಸ್ಟೇಟ್​ಮೆಂಟ್​ನಲ್ಲಿ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ದರ್ಶನ್

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment