Advertisment

ಬಿಗ್​ ಬಾಸ್​ನಿಂದ ಚೈತ್ರಾರನ್ನು ಹೊರಗೆ ಹಾಕಿ, ಇಲ್ಲದಿದ್ರೆ ಕಾರ್ಯಕ್ರಮ ಸ್ಥಗಿತ ಮಾಡಿಸುತ್ತೇನೆ ಎಂದ ವಕೀಲ!

author-image
AS Harshith
Updated On
ಬಿಗ್​ ಬಾಸ್​ನಿಂದ ಚೈತ್ರಾರನ್ನು ಹೊರಗೆ ಹಾಕಿ, ಇಲ್ಲದಿದ್ರೆ ಕಾರ್ಯಕ್ರಮ ಸ್ಥಗಿತ ಮಾಡಿಸುತ್ತೇನೆ ಎಂದ ವಕೀಲ!
Advertisment
  • ಕನ್ನಡ ಮಾಧ್ಯಮ ಲೋಕದ ಬಹು ದೊಡ್ಡ ರಿಯಾಲಿಟಿ ಶೋ
  • ಚೈತ್ರಾ ಕುಂದಾಪುರರವರನ್ನು ಹೊರಗೆ ಕಳುಹಿಸುವಂತೆ ಒತ್ತಾಯ
  • ನೋಟಿಸ್​ಗೆ ಉತ್ತರ ನೀಡದಿದ್ರೆ ಕಾರ್ಯಕ್ರಮ ಸ್ಥಗಿತ ಮಾಡುವಂತೆ ಎಚ್ಚರ

BBK11: ಕನ್ನಡ ಮಾಧ್ಯಮ ಲೋಕದ ಬಹು ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ 11 ಸೀಸನ್ ನ 14 ಸ್ಪರ್ಧಿ ಚೈತ್ರಾ ಕುಂದಾಪುರ ರವರನ್ನು ತಕ್ಷಣ ಶೋ ನಿಂದ ಹೊರಗೆ ಹಾಕಬೇಕು ಇಲ್ಲವಾದಲ್ಲಿ ಕಲರ್ಸ್ ಕನ್ನಡ ತಂಡದ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ವಕೀಲ ಕೆ ಎಲ್ ಭೋಜರಾಜ್ ತಿಳಿಸಿದ್ದಾರೆ.

Advertisment

ಇದನ್ನೂ ಓದಿ: BBK11: ಶಿಶಿರ್​​ಗೆ ಏನಾಯ್ತು? ಕಣ್ಣೀರು ಹಾಕಿದ ಬಿಗ್​ ಬಾಸ್​ ಸ್ಪರ್ಧಿಗಳು

ನಿನ್ನೆ ಸಾಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಕನ್ನಡ ಮಾಧ್ಯಮ ಲೋಕದ ಬಹು ದೊಡ್ಡ ರಿಯಾಲಿಟಿ ಶೋ ಹಾಗೂ ಕನ್ನಡ ಚಿತ್ರರಂಗದ ಮೇರು ನಟ ಕಿಚ್ಚ ಸುದೀಪ್ ಹೋಸ್ಟಿಂಗ್ ಮಾಡುತ್ತಿರುವ ರಿಯಾಲಿಟಿ ಶೋ ಅತ್ಯಂತ ಜನಪ್ರಿಯವಾಗಿದೆ. ಬಿಗ್ ಬಾಸ್ 11ರ ಸೀಜನ್ ಸೆಪ್ಟೆಂಬರ್ 29 ರಂದು ಪ್ರಾರಂಭಗೊಂಡಿದ್ದು ರಿಯಾಲಿಟಿ ಶೋನಲ್ಲಿ 17 ಸ್ಪರ್ಧಿಗಳು ಭಾಗವಹಿಸಿದ್ದಾರೆ ಅದರಲ್ಲಿ 14ನೇ ಸ್ಪರ್ಧಿಯಾಗಿ ಕುಂದಾಪುರದ ಚೈತ್ರಾ ಸ್ಪರ್ಧಿಯಾಗಿ ಆಯ್ಕೆಯಾಗಿದ್ದಾರೆ.

publive-image

ಇದನ್ನೂ ಓದಿ: Bigg Boss ಮನೆಯಲ್ಲಿ ಕಣ್ಣೀರು ಹಾಕಿದ ಲಾಯರ್​ ಜಗದೀಶ್​​.. ಅವರನ್ನ ಸಮಾಧಾನ ಮಾಡಿರೋದು ಯಾರು?

Advertisment

ಚೈತ್ರಾ ಅವರ ವಿರುದ್ಧ ವಿವಿಧ ಪೋಲಿಸ್ ಠಾಣೆಗಳಲ್ಲಿ ಕೇಸುಗಳು ದಾಖಲಾಗಿದೆ. ಒಟ್ಟು 11 ಕೇಸ್ ದಾಖಲಾಗಿರುವ ಚೈತ್ರಾ ಕುಂದಾಪುರ ಬಿಗ್ ಬಾಸ್ ಗೆ ಬಂದಿರುವುದು ಒಳ್ಳೆಯದಲ್ಲ. ತಕ್ಷಣ ಕಲರ್ಸ್ ಕನ್ನಡದ ತಂಡ ಚೈತ್ರಾ ಕುಂದಾಪುರ ರವರನ್ನು ಹೊರಕ್ಕೆ ಹಾಕಬೇಕು ಎಂದು ಈಗಾಗಲೇ ನೋಟಿಸ್ ನೀಡಲಾಗಿದೆ, ಇನ್ನು ಎರಡು ಮೂರು ದಿನದಲ್ಲಿ ನಮ್ಮ ನೋಟಿಸ್ ಗೆ ಉತ್ತರ ನೀಡದೆ ಇದ್ದಲ್ಲಿ ಹೈಕೋರ್ಟ್ ಹಾಗೂ ಸ್ಥಳೀಯ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿ ಬಿಗ್ ಬಾಸ್ ಹನ್ನೊಂದರ ಸೀಸನ್ ಸ್ಥಗಿತ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment