/newsfirstlive-kannada/media/post_attachments/wp-content/uploads/2024/10/bigg-boss18.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಗ್ರ್ಯಾಂಡ್ ಆಗಿ ಓಪನಿಂಗ್ ಕಂಡಿದೆ. ಬಿಗ್ಬಾಸ್ ಮನೆಗೆ ಒಟ್ಟು 17 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಬಿಗ್ಬಾಸ್ಗೆ ಬಂದ ಮೊದಲ ವಾರವೇ ಸ್ಪರ್ಧಿಗಳ ನಡುವೆ ವೈಮನಸ್ಸು ಮೂಡಿತ್ತು. ಆದರೆ ಈ ಎಲ್ಲ ಸ್ಪರ್ಧಿಗಳ ಮಧ್ಯೆ ಲಾಯರ್ ಜಗದೀಶ್ ಅವರು ಮಾತ್ರ ತುಂಬಾ ಹೈಲೈಟ್ ಆಗಿದ್ದರು.
ಇದನ್ನೂ ಓದಿ:BBK11: ಬಿಗ್ ಬಾಸ್‌ಗೆ ಸವಾಲು.. ಲಾಯರ್ ಜಗದೀಶ್‌ಗೆ ಕಿಚ್ಚ ಸುದೀಪ್ ಕೊಟ್ರು ಸಖತ್ ಮಾಂಜಾ!
ಅದರಲ್ಲೂ ಲಾಯರ್ ಜಗದೀಶ್ ಉಗ್ರ ಪ್ರತಾಪ ತೋರಿಸಿದ್ದರು. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವಿನ ಜಗಳದಿಂದ ಕೆಂಡಾಮಂಡಲರಾದ ಅವರು ಕೊನೆಗೆ ಬಿಗ್ ಬಾಸ್ಗೇ ಅವಾಜ್ ಹಾಕಿದ್ದರು. ಬಿಗ್ ಬಾಸ್ಗೂ ಅವಾಜ್ ಹಾಕಿದ ಜಗದೀಶ್, ನಾನು ಈ ಪ್ರೋಗ್ರಾಂ ಹಾಳು ಮಾಡದಿದ್ದರೆ ನನ್ನ ಹೆಸರು ಜಗದೀಶ್ ಅಲ್ಲ ಎಂದಿದ್ದರು. ಯಾವನು ಕಾಲು ಇಡಬಾರದು ಇಲ್ಲಿ. ಮನಸ್ಸು ಮಾಡಿದ್ರೆ ನಾನು ಹೆಲಿಕಾಪ್ಟರ್ ತರಿಸುತ್ತೇನೆ. ಈ ಡೋರನ್ನೇ ಉಡಾಯಿಸಿ ಬಿಡುತ್ತೇನೆ. ನನ್ನನ್ನು ಎದುರಾಕಿಕೊಂಡು ಕರ್ನಾಟಕದಲ್ಲಿ ಬಿಗ್ ಬಾಸ್ ಓಡಿಸುತ್ತೀರಾ? ಓಡ್ಸಿ ಎಂದು ಅವಾಜ್ ಹಾಕಿದ್ದರು.
ಆದರೆ ನಿನ್ನೆ ನಡೆದ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ ಮುಂದೆ ತುಂಬಾ ಸೈಲೆಂಟ್ ಆಗಿದ್ದರು ಲಾಯರ್ ಜಗದೀಶ್. ಹೌದು, ನನ್ನಿಂದ ತಪ್ಪಾಗಿದೆ. ಎಲ್ಲರೂ ನನಗೆ ತಮಾಷೆ ಮಾಡುತ್ತಿದ್ದರು. ಹೀಗಾಗಿ ನಾನು ಬಿಗ್ಬಾಸ್ ನಿಯಮವನ್ನು ಬ್ರೇಕ್ ಮಾಡಿದೆ. ಕೋಪದಲ್ಲಿ ನಾನು ಬಿಗ್ಬಾಸ್ ಡೋರ್ ಅನ್ನು ಹಾಳು ಮಾಡ್ತೀನಿ ಅಂತ ಹೇಳ್ದೆ ಅಂತ ಒಪ್ಪಿಕೊಂಡಿದ್ದಾರೆ. ಹೀಗಾಗಿ ಕಿಚ್ಚ ಸುದೀಪ್ ಅವರು ಕೂಡ ನಗು ನಗುತ್ತಲೇ ಲಾಯರ್ ಜಗದೀಶ್‌ಗೆ ಟಾಂಗ್ ಕೊಟ್ಟಿದ್ದಾರೆ. ನಿಮ್ಮ ಅಪ್ಪನಾಣೆಗೆ ಬಿಗ್ಬಾಸ್ ಅನ್ನು ಹಾಳು ಮಾಡೋದಕ್ಕೆ ಆಗೋದಿಲ್ಲ ಅಂತ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ