/newsfirstlive-kannada/media/post_attachments/wp-content/uploads/2025/01/jagadish.jpg)
ಬೆಂಗಳೂರು: ಒಂದಲ್ಲ ಮತ್ತೊಂದು ವಿಚಾರಕ್ಕೆ ಸುದ್ದಿ ಆಗುತ್ತಿರೋ ಲಾಯರ್ ಜಗದೀಶ್ ಮೇಲೆ ಮಾರಣಾಂತಿಕ ಹಲ್ಲೆ ಆಗಿದೆ ಎಂದು ತಿಳಿದು ಬಂದಿದೆ. ಕಿಡಿಗೇಡಿಗಳು ಲಾಯರ್ ಜಗದೀಶ್ ಮೇಲೆ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾರೆ.
ಲಾಯರ್ ಜಗದೀಶ್ ಅವರಿಗೆ ಮೂಗಿನಲ್ಲಿ ರಕ್ತ ಬರುವಂತೆ ಹೊಡೆದಿದ್ದಾರೆ. ಜಗದೀಶ್ ಮುಖದಲ್ಲಿ ರಕ್ತ ಸುರಿಯುತ್ತಿದ್ದು, ಕಿಡಿಗೇಡಿಗಳ ವಿರುದ್ಧ ವಿಡಿಯೋ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ಲಾಯರ್ ಜಗದೀಶ್ ಏನಂದ್ರು?
ಇವತ್ತು ನನ್ನ ಮೇಲೆ ಮಾರಣಾಂತಿಕ ಹಲ್ಲೆ ಆಗಿದೆ. ಪೊಲೀಸರು ಬಂದು ನಮ್ಮನ್ನು ರಕ್ಷಿಸಿದ್ದಾರೆ. ನನ್ನ ಫ್ಯಾಮಿಲಿ ಮೇಲೆ ಅಟ್ಯಾಕ್ ಆಗಿದೆ. ಸಮಾಜಕ್ಕೆ ಧ್ವನಿ ಆಗಿದ್ದವರ ಮೇಲೆ 200 ಜನ ಅಟ್ಯಾಕ್ ಮಾಡಿದ್ದಾರೆ. ನನ್ನ ಸ್ಕಾರ್ಪಿಯೋ ಕಾರು ಧ್ವಂಸ ಮಾಡಿದ್ದಾರೆ ಎಂದರು.
ನನ್ನ ಗನ್ ಮ್ಯಾನ್ಗೆ ಮಚ್ಚು ದೊಣ್ಣೆಯಿಂದ ಹೊಡೆದಿದ್ದಾರೆ. ನನಗೆ ರಕ್ತ ಬರುವಂತೆ ಹೊಡೆದಿದ್ದಾರೆ. ನಾನು ಸತ್ರು ಪರವಾಗಿಲ್ಲ. ಪುಡಿ ರೌಡಿಗಳು ಅಟ್ಯಾಕ್ ಮಾಡಿದ್ದಾರೆ. ನನ್ನನ್ನು ಕೊಲ್ಲಲು ಯತ್ನಿಸಿದ್ರು. ನನ್ನ ಮಗನ ಮೇಲೂ ಅಟ್ಯಾಕ್ ಆಗಿದೆ ಎಂದು ಜಗದೀಶ್ ಆರೋಪ ಮಾಡಿದ್ದಾರೆ.
ಇದನ್ನೂ ಓದಿ:ರಕ್ತ ಬರುವಂತೆ ಬಿಗ್ಬಾಸ್ ಸ್ಪರ್ಧಿ ಲಾಯರ್ ಜಗದೀಶ್ ಮೇಲೆ ಮಾರಣಾಂತಿಕ ಹಲ್ಲೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ