Advertisment

ಬರೋಬ್ಬರಿ 6 ತಿಂಗಳ ಬಳಿಕ ರಿಲೀಫ್; ಪವಿತ್ರ ಗೌಡ ಜಾಮೀನು ಬಗ್ಗೆ ವಕೀಲರು ಹೇಳಿದ್ದೇನು..?

author-image
Veena Gangani
Updated On
ಬರೋಬ್ಬರಿ 6 ತಿಂಗಳ ಬಳಿಕ ರಿಲೀಫ್; ಪವಿತ್ರ ಗೌಡ ಜಾಮೀನು ಬಗ್ಗೆ ವಕೀಲರು ಹೇಳಿದ್ದೇನು..?
Advertisment
  • ರೇಣುಕಾಸ್ವಾಮಿ ಕೇಸ್​ನಲ್ಲಿ ಜೈಲು ಪಾಲಾಗಿದ್ದ ದರ್ಶನ್ ಗ್ಯಾಂಗ್
  • ಕೇಸ್​ನಲ್ಲಿ ಎ1 ಆರೋಪಿ ಆಗಿರುವ ಪವಿತ್ರಾ ಗೌಡಗೆ ಜಾಮೀನು
  • ಹೆಣ್ಣು ಮಕ್ಕಳು ಅಂತ ಬೇಲ್​ ಕೊಡೋದಕ್ಕೆ ಆಗುತ್ತಾ ಎಂದ ವಕೀಲೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್ ಅವರಿಗೆ ಹೈಕೋರ್ಟ್​ ಜಾಮೀನು ಮಂಜೂರು ಮಾಡಿದೆ. ನಟ ದರ್ಶನ್ ಸೇರಿ ಒಟ್ಟು 7 ಆರೋಪಿಗಳಿಗೆ ಹೈಕೋರ್ಟ್​ ಜಾಮೀನು ಮಂಜೂರು ಮಾಡಿದೆ. ಈ ಪ್ರಕರಣದ ಎ1 ಪವಿತ್ರಾ ಗೌಡ, ಎ2 ದರ್ಶನ್, ಎ4 ಜಗದೀಶ್, ಎ7 ಅನುಕುಮಾರ್ ಅಲಿಯಾಸ್ ಅನು, ಎ 12 ಲಕ್ಷ್ಮಣ್, ಎ 11ನಾಗರಾಜ್, ಎ 14 ಪ್ರದೋಷ್​ಗೆ ಜಾಮಿನು ಸಿಕ್ಕಿದೆ. ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರು ಜಾಮೀನು ಮಂಜೂರು ಮಾಡಿ ಆದೇಶ ನೀಡಿದ್ದಾರೆ.

Advertisment

ಇದನ್ನೂ ಓದಿ: ದರ್ಶನ್, ಪವಿತ್ರಾ ಗೌಡ ಸೇರಿ ಹೈಕೋರ್ಟ್​​ನಿಂದ ಯಾರ್ ಯಾರಿಗೆ ಜಾಮೀನು ಸಿಕ್ಕಿದೆ?

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪವಿತ್ರಾ ಗೌಡ ಪರ ವಕೀಲೆ ಶಿಲ್ಪಾ, ಅವರು ಸುದ್ದಿಗಾರರೊಂದಿಗೆ ಮಾತಾಡಿದ್ದಾರೆ. ಪವಿತ್ರಾ ಗೌಡ ಇಂದು ರಿಲೀಸ್​ ಆಗೋದಿಲ್ಲ. ಸೋಮವಾರ ನಮಗೆ ಆರ್ಡರ್​ ಶೀಟ್​ ಸಿಗುತ್ತದೆ. ಅದಾದ ಬಳಿಕ ರೀಲಿಸ್ ಆಗ್ತಾರೆ. ಆರ್ಡರ್​ ಶೀಟ್​​ನಲ್ಲೇ ಷರತ್ತುಬದ್ಧ ಇರುತ್ತವೆ. ಈ ಕೇಸ್​ನಲ್ಲೇ ಮೂಲ ದಾಖಲಾತಿಗಳು ಇನ್ನಿತರ ಅಂಶಗಳನ್ನು ನೋಡಿ ಕೋರ್ಟ್​ ತೀರ್ಮಾನ ಮಾಡುತ್ತೆ. ಹೆಣ್ಣು ಮಕ್ಕಳು ಅಂತ ಬೇಲ್​ ಕೊಡೋದಕ್ಕೆ ಆಗೋದಿಲ್ಲ. ನಾಯ್ಯಾಲಯಕ್ಕೆ ಕೆಲವೊಂದು ನಿರ್ಬಂಧ ಇರುತ್ತದೆ. ಆ ಕೇಸ್​ನಲ್ಲಿ ಆರೋಪಿಗಳ ಪಾತ್ರ ಏನಿದೆ ಅಂತ ವಿಚಾರಣೆ ಮಾಡ್ತಾರೆ ಎಂದರು.

ಇಂದು ಎ1 ಪವಿತ್ರಾ ಗೌಡ, ಎ2 ದರ್ಶನ್, ಎ4 ಜಗದೀಶ್, ಎ7 ಅನುಕುಮಾರ್ ಅಲಿಯಾಸ್ ಅನು, ಎ12 ಲಕ್ಷ್ಮಣ್, ಎ11 ನಾಗರಾಜ್, ಎ14 ಪ್ರದೋಷ್​​ಗೆ ಜಾಮೀನು ಮಂಜೂರು ಮಾಡಲಾಗಿದೆ. ದರ್ಶನ್ ಅವರು ಮೊದಲು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದರು. ಆದರೆ ಪರಪ್ಪನ ಜೈಲಿನಲ್ಲಿ ಕೆಲ ಸಂಗತಿಗಳು ನಡೆದಿದ್ದರಿಂದ ಬಳ್ಳಾರಿ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿತ್ತು. ಇದರ ಜೊತೆ ದರ್ಶನ್ ಗ್ಯಾಂಗ್​ನ ಇನ್ನಿತರ ಆರೋಪಿಗಳನ್ನು ರಾಜ್ಯದ ಬೇರೆ ಬೇರೆ ಜೈಲಿಗೆ ಸ್ಥಳಾಂತರಿಸಲಾಗಿತ್ತು.

Advertisment

ದರ್ಶನ್ ಅವರು ಬಳ್ಳಾರಿ ಜೈಲಿನಲ್ಲಿ ಬೆನ್ನು ನೋವಿನ ಸಮಸ್ಯೆಯಿಂದ ಬಳಲಿದರು. ಬಳಿಕ ಮಧ್ಯಂತರ ಜಾಮೀನು ಪಡೆದು ಬೆಂಗಳೂರಿನ ಬಿಜಿಎಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಅವರಿಗೆ ಪೂರ್ಣಾವಧಿಗೆ ಹೈಕೋರ್ಟ್​ ಜಾಮೀನು ಮಂಜೂರು ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment