Advertisment

ದರ್ಶನ್ ಮತ್ತು ಬೇರೆ ಆರೋಪಿಗಳಿಗೆ ಸ್ಪೆಷಲ್ ಟ್ರೀಟ್​ಮೆಂಟ್ ಅನುಮಾನ -ಉಮಾಪತಿ ಸ್ಫೋಟಕ ಹೇಳಿಕೆ

author-image
Ganesh
Updated On
VIDEO: ನಟ ದರ್ಶನ್​ ಫೋಟೋಗೆ ಚಪ್ಪಲಿಯಿಂದ ಒದ್ದು, ಬೆಂಕಿ ಹಚ್ಚಿ ಆಕ್ರೋಶ
Advertisment
  • ರೇಣುಕಾಸ್ವಾಮಿಯ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್
  • ಪ್ರಕರಣದಲ್ಲಿ ಒಟ್ಟು 13 ಆರೋಪಿಗಳನ್ನು ಬಂಧಿಸಿರುವ ಪೊಲೀಸರು
  • ನಟ ದರ್ಶನ್, ಪವಿತ್ರ ಗೌಡ ಸೇರಿ ಒಟ್ಟ 13 ಆರೋಪಿಗಳು ಅರೆಸ್ಟ್

ಬೆಂಗಳೂರು: ನಗರದ ಅನ್ನಪೂರ್ಣೇಶ್ವರಿ ಠಾಣೆಯಲ್ಲಿ ನಟ ದರ್ಶನ್​​ಗೆ ಸಿಗರೇಟ್ ಸೇರಿದಂತೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಇದೆ. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಕೆಲವು ವಕೀಲರು ಮಾಹಿತಿ ಹಕ್ಕು ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.

Advertisment

ಪೊಲೀಸ್ ಠಾಣೆಯಲ್ಲಿ ನಡೆದ 48 ಗಂಟೆಗಳ ದೃಶ್ಯ ಒದಗಿಸುವಂತೆ ಮಾಹಿತಿ ಕೇಳಲಾಗಿದೆ. ವಕೀಲರಾದ ಸುಧಾ ಕಾಟ್ವ, ನರಸಿಂಹಮೂರ್ತಿ ಹಾಗೂ ಉಮಾಪತಿ ಎಂಬುವವರಿಂದ ಸಿಸಿಟಿವಿ ಒದಗಿಸುವಂತೆ ಆರ್​ಟಿಐನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನಮಗೆ ಠಾಣೆಯ 48 ಗಂಟೆಯಲ್ಲಿ ರೆಕಾರ್ಡ್ ಆದ ಸಿಸಿಟಿವಿ ಒದಗಿಸುವಂತೆ ಅರ್ಜಿಯಲ್ಲಿ ಕೋರಿದ್ದಾರೆ.

ಇದನ್ನೂ ಓದಿ:ದರ್ಶನ್ ವಿಚಾರದಲ್ಲಿ ಪೊಲೀಸರಿಗೇ ಸಂಕಷ್ಟ ಎದುರಾಗುತ್ತಾ? ಠಾಣೆಯಲ್ಲಿ ಆಗಿದ್ದೇನು..?

ಈ ಸಂಬಂಧ ವಕೀಲರಾದ ಉಮಾಪತಿ ಮಾತನಾಡಿ.. ಇಲ್ಲಿ ಆರೋಪಿಗಳಾದ ದರ್ಶನ್ ಮತ್ತೆ ಬೇರೆ ಆರೋಪಿಗಳಿಗೆ ಸ್ಪೆಷಲ್ ಟ್ರೀಟ್ಮೆಂಟ್ ಕೊಡ್ತಿದಾರೆ ಎಂಬ ವರದಿ ಇದೆ. ಇದ್ರ ಬಗ್ಗೆ ನಮಗೂ ಪೊಲೀಸರ ಮೇಲೆ ಅನುಮಾನ ಬಂದಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಒಳಗಡೆ ಸಿಸಿಟಿವಿ ಅಳವಡಿಸಿರಬೇಕು. ಅವ್ರು ಠಾಣೆಯೊಳಗಡೆ ಏನೆಲ್ಲಾ ನಡೆದಿದೆ ಎಲ್ಲಾ ಸಿಸಿಟಿವಿ ಕೇಳಿದ್ದೀವಿ. ಆರ್ ಟಿಐ ಹಾಕಿ ನಾವು ಡೀಟೆಲ್ಸ್ ಕೇಳಿದ್ದೀವಿ ಎಂದರು.

Advertisment

ಇದನ್ನೂ ಓದಿ:‘ಬಾಸ್​ ಹೆಂಡ್ತಿಗೆ ಮೆಸೇಜ್ ಮಾಡ್ತಿಯಾ ಎಂದು ಹೊಡೆದ್ವಿ..’ ಇಂಚಿಂಚು ಮಾಹಿತಿ ಬಿಚ್ಚಿಟ್ನಂತೆ ರಾಘವೇಂದ್ರ

ಒಟ್ಟು ಮೂರು ವಿಚಾರಕ್ಕೆ ನಾವು ಮಾಹಿತಿ ಕೇಳಿದ್ದೀವಿ. ಒಳಗಡೆಯ ಕಂಪ್ಲೀಟ್ ಸಿಸಿಟಿವಿ ದೃಶ್ಯಕ್ಕೆ ಮನವಿ ಮಾಡಿದ್ದೇವೆ. ಶಾಮಿಯಾನ ಕಟ್ಟಿರೋದಕ್ಕೆ ನಾವು ಮಾಹಿತಿ ಕೇಳಿದ್ದೀವಿ. ಅಲ್ಲದೇ ಒಂದೇ ಕೇಸ್​ಗೆ 144 ಸೆಕ್ಷನ್ ಜಾರಿ ಮಾಡೋ ಅವಶ್ಯಕತೆ ಇಲ್ಲ. ಈ ಎಲ್ಲದರ ಬಗ್ಗೆಯೂ ನಾವು ಆರ್​ಟಿಐ ಹಾಕಿ ಮಾಹಿತಿ ಕೇಳಿದ್ದೀವಿ ಎಂದು ಉಮಾಪತಿ ತಿಳಿಸಿದ್ದಾರೆ.

ಇದನ್ನೂ ಓದಿ:‘ಮೂರ್ಛೆ ಹೋದ ಅನ್ಕೊಂಡ್ವಿ, ಆದರೆ..’ ಅಸಲಿ ಸತ್ಯ ಕಕ್ಕಿದ್ನಾ ಆರೋಪಿ ಪವನ್..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment