ಕೀರ್ತಿ, ಲಕ್ಷ್ಮೀಯಿಂದ ರಿಲೀಫ್.. ವೈಷ್ಣವ್-ಮೇಘನಾ ಮದುವೆಗೆ ಮುಹೂರ್ತ ಫಿಕ್ಸ್..!

author-image
Veena Gangani
Updated On
ಕೀರ್ತಿ, ಲಕ್ಷ್ಮೀಯಿಂದ ರಿಲೀಫ್.. ವೈಷ್ಣವ್-ಮೇಘನಾ ಮದುವೆಗೆ ಮುಹೂರ್ತ ಫಿಕ್ಸ್..!
Advertisment
  • ಮೇಘನಾ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಸ್ಟಾರ್ ನಟ
  • ಸೀರಿಯಲ್​ನಲ್ಲಿ ಮದುಮಗನಾಗಿದ್ದ ಹೀರೋಗೆ ರಿಯಲ್​ ಮದುವೆ ಫಿಕ್ಸ್​
  • ಶಮಂತ್​ನ ಪತಿ ಕೆಲಸಕ್ಕೂ ಸಾಥ್​ ನೀಡಿದ್ದಾರೆ ಭಾವಿ ಪತ್ನಿ ಮೇಘನಾ

ಶಮಂತ್​ ಲೈಫ್​ಗೆ ಮಧುರತೆ ತುಂಬೋಕೆ ಮೇಘನಾ ಎಂಟ್ರಿ ಕೊಟ್ಟಿದ್ದಾರೆ. ಇಷ್ಟು ದಿನ ಸೀರಿಯಲ್​ನಲ್ಲಿ ಮದುಮಗನಾಗಿ ಮಿಂಚುತ್ತಿದ್ದ ಹೀರೋ ಈಗ ರಿಯಲ್​ ಲೈಫ್​ನಲ್ಲಿ ಹಸೆಮಣೆ ಏರೋದಕ್ಕೆ ಸಜ್ಜಾಗಿದ್ದಾರೆ. ಅವರ ನಿಶ್ಚಿತಾರ್ಥದ ಬಗ್ಗೆ ಅಪ್​ಡೇಟ್​ ಕೊಟ್ಟಿದ್ವಿ. ಈಗ ಮದುವೆಗೆ ಡೇಟು.. ಟೈಮೂ.. ಫಿಕ್ಸ್ ಆಗಿದೆ.

ಇದನ್ನೂ ಓದಿ:ವಿನಯ್ ಗೌಡ, ರಜತ್ ಪ್ರಕರಣ ಬೆನ್ನಲ್ಲೇ ಮತ್ತೊಂದು ಹುಚ್ಚಾಟ.. ಹೆಂಡ್ತಿಯನ್ನೇ ಅಡವಿಟ್ಟು ಜೂಜಾಡುವ ರೀಲ್ಸ್..!

publive-image

ಶಮಂತ್​ ಧಾರಾವಾಹಿ ಪ್ರಿಯರಿಗೆ ಮುದ್ದಿನ ವೈಷ್ಣವ್​. ಮ್ಯೂಜಿಕ್​ ಲವರ್ಸ್​ಗೆ ಬ್ರೋ ಗೌಡ. ಮೇಘನಾಗೆ ಲವರ್ ಬಾಯ್​.. ಮಿಸ್ಟರ್​ ಪರ್ಫೆಕ್ಟ್​. ಈ ವರ್ಷ ಶಮಂತ್​ಗೆ ಲಕ್ಕಿ. ಹಲವು ಒಳ್ಳೊಳ್ಳೆ ಕೆಲಸಗಳು ಆಗ್ತಿವೆ. ಇತ್ತೀಚಿಗೆ ಹೊಸ ಮ್ಯೂಜಿಕ್​ ಸ್ಟುಡಿಯೋ ಓಪನ್​ ಮಾಡಿದ್ದಾರೆ. ಸಿನಿಮಾಗಳಿಗೆ ಸೈನ್​ ಮಾಡಿದ್ದಾರೆ. ಜೊತೆಗೆ ಮದುವೆ ಖುಷಿ ಸಂಭ್ರಮ.

publive-image

ಪ್ರೀತಿಸಿದ ಹುಡುಗಿಯನ್ನು ಮದುವೆ ಆಗ್ತಿರೋದು ದುಪ್ಪಟ್ಟು ಸಡಗರ ತಂದಿದೆ. ಬಹುಕಾಲದ ಗೆಳತಿ ಮೇಕಪ್​ ಆರ್ಟಿಸ್ಟ್​ ಮೇಘನಾ ಕೈ ಹಿಡಿಯುತ್ತಿದ್ದಾರೆ ಶಮಂತ್​. ಬಿಗ್​ ಬಾಸ್​ ಹೋಗೋಕು ಮೊದಲೇ ಇವರ ಲವ್​ ಸ್ಟೋರಿ ಶುರುವಾಗಿತ್ತು. ಇನ್​ಫ್ಯಾಕ್ಟ್​ ಬಿಗ್​ ಬಾಸ್​ನಲ್ಲಿ ಶಮಂತ್​ ಧರಿಸುತ್ತಿದ್ದ ಪ್ರತಿ ಕಾಸ್ಟ್ಯೂಮ್​ನಲ್ಲೂ ಮೇಘನಾ ಕೈಚಳಕ ಇತ್ತು. ಅವರ ಸೋಷಿಯಲ್​ ಮೀಡಿಯಾ ಪೇಜ್​ಗಳನ್ನು ಮೇಘನಾ ಅವರೇ ಹ್ಯಾಂಡಲ್​​ ಮಾಡ್ತಿದ್ರು. ಪ್ರತಿಯೊಂದು ಹೆಜ್ಜೆಯಲ್ಲೂ ಮೇಘನಾ ಶಮಂತ್​ಗೆ ಸಾಥ್​ ಕೊಟ್ಟಿದ್ದಾರೆ.

publive-image

ಯಶಸ್ಸಿ ಪುರುಷನ ಹಿಂದೆ ಮಹಿಳೆ ಇರ್ತಾರಂತೆ. ಶಮಂತ್​ ಸಕ್ಸಸ್​ ಹಿಂದಿನ ಶಕ್ತಿ ಗೆಳತಿ ಪ್ರಿಯತಮೆ ಮೇಘನಾ.
ಈ ಜೋಡಿ ಪ್ರೀತಿಗೆ ಮೇ ತಿಂಗಳಲ್ಲಿ ಮದುವೆ ಮುದ್ರೆ ಬಿಳುತ್ತಿದೆ. ಹೌದು, ಗುರುಹಿರಿಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮೇ 21ರಂದು ಬೆಂಗಳೂರಿನ ಜೆ.ಪಿ ನಗರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಮೇಘನಾ-ಶಮಂತ್​. ಮೇಘನಾ ಮರಾಠಿ ಕುಟುಂಬದ ಹುಡುಗಿ, ಶಮಂತ್ ಪಕ್ಕಾ ಗೌಡ್ರ ಹುಡುಗ. ಹೀಗಾಗಿ ಎರಡೂ ಸಂಪ್ರದಾಯದಲ್ಲಿ ಮದುವೆಯ ಶುಭ ಕಾರ್ಯಗಳು ಜರುಗಲಿವೆ.

publive-image

ಈಗಾಗಲೇ ಲಗ್ನ ಪತ್ರಿಕೆ ಪ್ರಿಂಟ್ ಆಗಿದ್ದು, ಶೀಘ್ರದಲ್ಲೇ ಶಾಸ್ತ್ರಗಳು ಶುರುವಾಗಲಿವೆ. ಹಲವು ತಾರೆಯರು ಮದುವೆಯಲ್ಲಿ ಭಾಗಿಯಾಗೋ ಸಾಧ್ಯತೆ​ ಇದೆ. ಲಕ್ಷ್ಮೀ ಬಾರಮ್ಮ ಮುಗಿತಿರೋದು ಅವರ ಅಭಿಮಾನಿಗಳಿಗೆ ಬೇಸರ ತಂದಿದೆ. ಆದ್ರೆ ಒಂದು ಒಳ್ಳೆ ಪ್ರಾಜೆಕ್ಟ್​ಮೂಲಕ ಖಂಡಿತ ಕಮ್​ಬ್ಯಾಕ್​ ಮಾಡ್ತಾರೆ ಎಂಬ ಭರವಸೆ ಕೂಡ ಇದೆ. ವಿಶ್​ ಯೂ ಆಲ್​ ದಿ ಬೆಸ್ಟ್​ ಶಮಂತ್​.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment