/newsfirstlive-kannada/media/post_attachments/wp-content/uploads/2025/05/bro-gowda15.jpg)
ಕನ್ನಡ ಬಿಗ್ಬಾಸ್ ಸೀಸನ್ 8ರ ಸ್ಪರ್ಧಿ, ಲಕ್ಷ್ಮೀ ಬಾರಮ್ಮ ಸೀರಿಯಲ್ ಖ್ಯಾತಿಯ ಶಮಂತ್ ಬ್ರೋ ಗೌಡ ಅದ್ಧೂರಿಯಾಗಿ ಮದುವೆ ಆಗಿದ್ದಾರೆ. ತಾವು ಪ್ರೀತಿಸಿದ ಹುಡುಗಿ ಜೊತೆಗೆ ಕುಟುಂಬಸ್ಥರ ಸಮ್ಮುಖದಲ್ಲಿ ತಾಳಿ ಕಟ್ಟಿ ತಮ್ಮ ಬಾಳಿಗೆ ವೆಲ್ಕಮ್ ಹೇಳಿದ್ದಾರೆ.
ಇದನ್ನೂ ಓದಿ: ಚೈತ್ರಾ ಕುಂದಾಪುರ, ರಂಜಿತ್ ಮದುವೆಗೆ ಗೌತಮಿ ಜಾಧವ್ ಹೋಗಲಿಲ್ಲವೇಕೆ? ಈ ಬಗ್ಗೆ ಏನಂದ್ರು?
ತಮ್ಮ ಅದ್ಭುತ ಅಭಿನಯದ ಮೂಲಕವೇ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿರೋ ಶಮಂತ್ ಬ್ರೋ ಗೌಡ ಮೇಘನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮೇಘನಾ ಗ್ರಾಮ್ ಅವರ ಕಾಲೇಜಿನ್ ಇವೆಂಟ್‌ವೊಂದರಲ್ಲಿ ಶಮಂತ್ ಬ್ರೊ ಗೌಡ ಆಗಮಿಸಿದ್ದರು. ಆ ವೇಳೆ ಶಮಂತ್ ಬ್ರೊ ಗೌಡ, ಮೇಘನಾಗೆ ಪರಿಚಯ ಆಗಿತ್ತು. ಆಮೇಲೆ ಆ ಪರಿಚಯ ಸ್ನೇಹ ಆಯ್ತು, ಪ್ರೀತಿ ಹುಟ್ಟಿ ಈಗ ಕುಟುಂಬದವರ ಒಪ್ಪಿಗೆ ಪಡೆದು ಈ ಜೋಡಿ ಮದುವೆಯಾಗಿದೆ.
ಇನ್ನೂ, ಶಮಂತ್ ಗೌಡ ಮದುವೆಗೆ ಕಿರುತೆರೆ ನಟ ನಟಿಯರು, ಗಾಯಕರು ಸೇರಿದಂತೆ ಸ್ಟಾರ್ ಸೆಲೆಬ್ರಿಟಿಗಳು ಆಗಮಿಸಿ ಶುಭ ಹಾರೈಸಿದ್ದಾರೆ. ಕಿಶನ್ ಬೆಳಗಲಿ, ಕೆಜಿಫ್ ವಿಲ್ಲನ್ ಅವಿನಾಶ್ ದಂಪತಿ, ಗಿರಿಜಾ ಲೋಕೇಶ್ ಬಂದಿದ್ದರು.
ವಿಶೇಷ ಎಂದರೆ ಲಕ್ಷ್ಮೀ ಬಾರಮ್ಮ ಸೀರಿಯಲ್ ಇಡೀ ತಂಡ ಆಗಮಿಸಿದೆ. ಆ ಸೀರಿಯಲ್ನಲ್ಲಿ ವೈಷ್ಣವ್ ತಾಯಿ ಪಾತ್ರದಲ್ಲಿ ನಟಿಸಿರೋ ಕಾವೇರಿ, ತಂಗಿ ಪಾತ್ರದಲ್ಲಿ ನಟಿಸಿರೋ ವಿಧಿ, ಹೆಂಡತಿಯಾಗಿ ಅಭಿಯಿಸಿರೋ ಲಕ್ಷ್ಮೀ, ಗರ್ಲ್ಫ್ರೆಂಡ್ ಕೀರ್ತಿ ಬಂದು ನವ ಜೋಡಿಗೆ ಹಾರೈಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ