/newsfirstlive-kannada/media/post_attachments/wp-content/uploads/2025/06/Rashmi-Prabhakar.jpg)
ಕನ್ನಡ ಕಿರುತೆರೆಯಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್ ಮೂಲಕ ವೀಕ್ಷಕರ ಮನಸ್ಸು ಗೆದ್ದಿದ್ದ ನಟಿ ಎಂದರೆ ಅದು ನಟಿ ರಶ್ಮಿ ಪ್ರಭಾಕರ್. ಇದೀಗ ನಟಿ ರಶ್ಮಿ ಪ್ರಭಾಕರ್ ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟಿದ್ದಾರೆ.
ಇದನ್ನೂ ಓದಿ:ಭರ್ಜರಿ ಉದ್ಯೋಗಗಳಿಗೆ ಅರ್ಜಿ ಆಹ್ವಾನಿಸಿದ NIACL.. ಒಟ್ಟು ಎಷ್ಟು ಹುದ್ದೆಗಳು ಇವೆ?
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಚ್ಚಿ ಪಾತ್ರದಲ್ಲಿ ಅಭಿನಯಿಸಿದ್ದ ನಟಿ ರಶ್ಮಿ ಪ್ರಭಾಕರ್ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ನಮ್ಮ ಪುಟ್ಟ "ಕನಸು" ಎಂದು ಬರೆದುಕೊಂಡ ರಶ್ಮಿ ಪ್ರಭಾಕರ್ ಅವರು ಪತಿ ಜೊತೆಗೆ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ಲಕ್ಷ್ಮೀ ಬಾರಮ್ಮ, ಜೀವನಚೈತ್ರ, ಶುಭವಿವಾಹ, ಮನಸೆಲ್ಲಾ ನೀನೇ ಸೇರಿದಂತೆ ಕನ್ನಡ ಹಾಗೂ ಪರಭಾಷೆಯ ಧಾರಾವಾಹಿಯಲ್ಲಿ ನಟಿಸಿರುವ ನಟಿ ರಶ್ಮಿ ಪ್ರಭಾಕರ್ 2022 ಏಪ್ರಿಲ್ 25ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಬೆಂಗಳೂರಿನ ಕಲ್ಯಾಣ ಮಂಟಪವೊಂದರಲ್ಲಿ ಅವರು ನಿಖಿಲ್ ಎಂಬುವವರ ಜೊತ ಸಪ್ತಪದಿ ತುಳಿದಿದ್ದರು.
View this post on Instagram
ಇದೀಗ ಈ ದಂಪತಿ ಸಖತ್ ಖುಷಿಯಲ್ಲಿದ್ದಾರೆ. ತಮ್ಮ ಖುಷಿಯನ್ನು ಅಭಿಮಾನಿಗಳ ಒಟ್ಟಿಗೆ ಹಂಚಿಕೊಂಡಿದ್ದಾರೆ. ಇನ್ನೂ, ರಶ್ಮಿ ಪ್ರಭಾಕರ್ ಅವರು ಕೊಟ್ಟ ಗುಡ್ನ್ಯೂಸ್ಗೆ ನೇಹಾ ಗೌಡ, ಅನುಪಮಾ ಗೌಡ, ಐಶ್ವರ್ಯ ಶಿಂಧೋಗಿ, ಕಾವ್ಯಾ ಶಾ, ಸುಪ್ರೀತಾ ಸತ್ಯನಾರಾಯಣ್, ಅದ್ವಿತಿ ಶೆಟ್ಟಿ ಮುಂತಾದವರು ಶುಭ ಹಾರೈಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ