/newsfirstlive-kannada/media/post_attachments/wp-content/uploads/2025/04/Sushma-Nanaiah.jpg)
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಲಕ್ಷ್ಮೀ ಬಾರಮ್ಮ ಸೀರಿಯಲ್ ಮುಕ್ತಾಯಗೊಳ್ಳುತ್ತಿದೆ. ಇನ್ನೂ 2 ವಾರಗಳಲ್ಲಿ ವೀಕ್ಷಕರ ನೆಚ್ಚಿನ ಸೀರಿಯಲ್ ಅಂತ್ಯ ಹಾಡಲಿದೆ. ಇನ್ನೂ, ಸೀರಿಯಲ್ ಮುಕ್ತಾಯಗೊಂಡ ಬೆನ್ನಲ್ಲೇ ಲಕ್ಷ್ಮೀ ಬಾರಮ್ಮದಲ್ಲಿ ಕಾವೇರಿ ಪಾತ್ರದಲ್ಲಿ ಅಭಿನಯಿಸುತ್ತಿದ್ದ ಸುಷ್ಮಾ ನಾಣಯ್ಯ ಅವರ ಮನೆಗೆ ಹೊಸ ಅತಿಥಿ ಆಗಮನವಾಗಿದೆ.
ಇದನ್ನೂ ಓದಿ:ತಂಪೆರೆದ ಮಳೆ, ಭೂಮಿಗೆ ಬಂತು ಜೀವಕಳೆ.. ಕರ್ನಾಟಕದಲ್ಲಿ ಎಲ್ಲೆಲ್ಲಿ ಮಳೆ ಆಗ್ತಿದೆ..?
ಲಕ್ಷ್ಮೀ ಬಾರಮ್ಮ ಸೀರಿಯಲ್ನಲ್ಲಿ ವೈಷ್ಣವ್ ತಾಯಿ ಕಾವೇರಿ ಪಾತ್ರದಲ್ಲಿ ಅಭಿನಯಿಸುತ್ತಿದ್ದ ನಟಿ ಸುಷ್ಮಾ ನಾಣಯ್ಯ ಅವರು ಹೊಚ್ಚ ಹೊಸ ಕಾರನ್ನು ಖರೀದಿ ಮಾಡಿದ್ದಾರೆ. ಹುಂಡೈ ವರ್ನಾ 1.5 ವಿಟಿವಿಟಿ ಎಸ್‌ಎಕ್ಸ್ (hyundai verna 1.5 vtvt sx) ಕಾರನ್ನು ಖರೀದಿ ಮಾಡಿದ ಖುಷಿಯಲ್ಲಿದ್ದಾರೆ. ಇನ್ನೂ, ನಟಿ ಖರೀದಿ ಮಾಡಿದ ಕಾರು ₹15.9 ಲಕ್ಷ ರೂಪಾಯಿದ್ದಾಗಿದೆ ಎಂದು ಅಂದಾಜಿಸಲಾಗಿದೆ.
ನಟಿ ಸುಷ್ಮಾ ನಾಣಯ್ಯ, ಪತಿ ಹಾಗೂ ಮಗಳು ಹೊಸ ಕಾರಿನ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಅದೇ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನು ಸುಷ್ಮಾ ನಾಣಯ್ಯ ಅವರಿಗೆ ನಾಲ್ಕು ವರ್ಷದ ಮಗಳಿದ್ದಾಳೆ. ಸದ್ಯ ಸೀರಿಯಲ್ ಮುಕ್ತಾಯದ ಬೆನ್ನಲ್ಲೇ ನಟಿ ಕುಟುಂಬಸ್ಥರ ಜೊತೆಗೆ ಕಾಲ ಕಳೆಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ