/newsfirstlive-kannada/media/post_attachments/wp-content/uploads/2024/07/tanvi.jpg)
ನಟಿಯರು ಅಂದ್ರೆ ಬರೀ ಬಟ್ಟೆಯಿಂದ ಸೌಂಡ್ ಮಾಡೋರು ಆಗಬಾರದು. ಬದಲಾಗಿ ಅವರ ಅಭಿನಯದ ಮೂಲಕ ಛಾಪು ಮೂಡಿಸುವವರೇ ನಿಜವಾದ ನಟಿ. ಹಲವು ನಟಿಯರ ಪೈಕಿ ಲಕ್ಷ್ಮೀ ಬಾರಮ್ಮ ಕೀರ್ತಿ ಕೂಡ ಒಬ್ಬರೂ. ಸಾಮಾನ್ಯವಾಗಿ ನಾಯಕಿ ಪಾತ್ರ ಹೈಲೈಟ್ ಆಗೋದು. ಆದ್ರೇ ಇಲ್ಲಿ ಕೀರ್ತಿ ಪಾತ್ರಕ್ಕೆ ಸಿಗೋ ರೆಸ್ಪಾನ್ಸ್ ತುಂಬಾ ದೊಡ್ಡದು. ಇಷ್ಟಕ್ಕೆಲ್ಲ ಕೀರ್ತಿ ಪಾತ್ರದ ತೂಕದ ಜೊತೆಗೆ ಅದನ್ನ ತೂಗಿಸಿಕೊಂಡು ಹೋಗ್ತಿರೋ ತನ್ವಿ ಅವರೇ ಕಾರಣ.
ಇದನ್ನೂ ಓದಿ:ಬಿಗ್‌ಬಾಸ್ ಸೀಸನ್ 11ಗೆ ಭರ್ಜರಿ ತಯಾರಿ; ಪಾರು ಖ್ಯಾತಿಯ ಮೋಕ್ಷಿತಾ ಹೋಗೋದು ಪಕ್ಕಾನಾ?
ಸದ್ಯ ತನ್ವಿ ಫಿಶ್ ಲೇಡಿ ಆಗಿದ್ದಾರೆ. ಲಕ್ಷ್ಮೀ ಬಾರಮ್ಮ ಕತೆ ವೀಕ್ಷಕರಿಗೆ ತುಂಬಾ ಹತ್ತಿರವಾಗಿದೆ. ಅದರಲ್ಲೂ ಕೀರ್ತಿ ಪಾತ್ರ ವೀಕ್ಷಕರ ಮನಸ್ಸಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿದೆ. ಆ ಪಾತ್ರವನ್ನ ಅಷ್ಟೇ ಅದ್ಭುತವಾಗಿ ಜೀವ ತುಂಬಿ ಅಭಿನಯಿಸುತ್ತಿರೋ ನಟಿ ತನ್ವಿ ರಾವ್. ಇವರು ಮೂಲತಹ ಭರತನಾಟ್ಯ ಡ್ಯಾನ್ಸರ್ ಆಗಿದ್ದಾರೆ. ತನ್ವಿಗೆ ಭಾವನೆಗಳನ್ನ ಎಕ್ಸ್ಪ್ರೇಸ್ ಮಾಡೋದು ಸುಲಭ. ಹೀಗಾಗಿನೇ ಪ್ರತಿ ದೃಶ್ಯದಲ್ಲೂ ಅವರ ಹಾವಭಾವ ಅದ್ಭುತ ಸೃಷ್ಟಿಸೋದು.
ಇತ್ತೀಚಿಗೆ ಕತೆಯಲ್ಲಿ ಹೊಸ ತಿರುವುಗಳು ಕಡಲ ರೀತಿ ಅಪ್ಪಳಿಸುತ್ತಿದ್ದು, ಕೀರ್ತಿಯ ಹಲವು ಅವತಾರಗಳು ವೀಕ್ಷಕರನ್ನ ನಿರೀಕ್ಷೆಯಲ್ಲಿ ಕಾಯುವಂತೆ ಮಾಡಿವೆ. ಹೀಗಾಗಿನೇ ಲಕ್ಷ್ಮೀ ಬಾರಮ್ಮ ಟಿಆರ್ಪಿ ರೇಟಿಂಗ್ ಕೂಡ ಜಾಸ್ತಿಯಾಗಿದೆ. ತನ್ವಿ ಹುಟ್ಟಿ ಬೆಳದಿದ್ದು ಮುಂಬೈನಲ್ಲಾದ್ರೂ, ಪಕ್ಕಾ ಟ್ರೆಡಿಷನಲ್ ಮನಸ್ಥಿತಿಯ ಹುಡುಗಿ. ವ್ಯಕ್ತಿತ್ವನೂ ಅಷ್ಟೇ ಸರಳ ಹಾಗೂ ನಾಚಿಕೆ ಸ್ವಭಾವ. ಕೀರ್ತಿ ಪಾತ್ರಕ್ಕೂ ತನ್ವಿ ನಿಜ ಜೀವನಕ್ಕೂ ತುಂಬಾನೇ ವ್ಯತ್ಯಾಸ ಇದೆ.
View this post on Instagram
ನಟನೆಗಿಂತ ಹೆಚ್ಚು ನೃತ್ಯವನ್ನೇ ಉಸಿರಾಗಿಸಿಕೊಂಡಿರೋ ಅಂದಗಾತಿ. ಇದೀಗ ತನ್ವಿ ಅವರು ಹೊಸ ಲುಕ್ ಟ್ರೈ ಮಾಡಿದ್ದಾರೆ. ಮೊನ್ನೆಯಷ್ಟೇ ಬಂಜಾರ ಹೆಣ್ಣು ಮಕ್ಕಳ ಉಡುಗೆ ತೊಟ್ಟು ಮಿಂಚಿದ ಚಲುವೆ. ಸದ್ಯ ಹೊಸ ರೀತಿ ಡ್ರೇಸ್ಅಪ್ ಮಾಡಿಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ತಿಳು ನೀಲಿ ಬಣ್ಣದ ಗೌನ್ ತೊಟ್ಟುದ್ದು, ಸುಂದರವಾದ ಲೋಕೇಶ್ನಲ್ಲಿ ಚಂದದ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇದೇ ಫೋಟೋಗಳು ಅಭಿಮಾನಿಗಳ ಗಮನ ಸೆಳೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ