/newsfirstlive-kannada/media/post_attachments/wp-content/uploads/2025/04/lakshmi-nivasa.jpg)
ಕಿರುತೆರೆಯಲ್ಲಿ ಕಡಿಮೆ ಸಮಯದಲ್ಲಿ ಲಾಂಚ್ ಆಗಿ ವೀಕ್ಷಕರ ಮನಸ್ಸನ್ನು ಗೆದ್ದುಕೊಂಡ ಧಾರಾವಾಹಿಯಲ್ಲಿ ಲಕ್ಷ್ಮೀ ನಿವಾಸ ಕೂಡ ಒಂದು. ಬಹುದೊಡ್ಡ ತಾರಗಣ ಹೊಂದಿರೋ ಈ ಧಾರಾವಾಹಿಯಲ್ಲಿ ಬರುವ ಒಂದೊಂದು ಪಾತ್ರವು ವೀಕ್ಷಕರಿಗೆ ಹತ್ತಿರವಾಗಿವೆ. ಅದರಲ್ಲೂ ವೀಣಾ ಗಂಡ, ಭಾವನ ಹಾಗೂ ಚಾನೂ ಅಣ್ಣನ ಪಾತ್ರದಲ್ಲಿ ಅಭಿನಯಿಸುತ್ತಿರೋ ಸಂತೋಷ್ಗೆ ವೀಕ್ಷಕರು ಬೈಯುತ್ತಲೇ ಇರುತ್ತಾರೆ.
ಏಕೆಂದರೆ ಸಂತೋಷ್ ಪಾತ್ರನಾಗೇ ಹಾಗೇ, ಜಿಪುಣ ಗಂಡ, ಒಂದು ರೂಪಾಯಿಯೂ ಖರ್ಚು ಮಾಡೋದಕ್ಕೆ ಹಿಂದೆ ಮುಂದೆ ಯೋಚಿಸುವುದರಿಂದ ಸೀರಿಯಲ್ ನೋಡೋ ವೀಕ್ಷಕರು ಬೈಯುತ್ತಲೇ ಇರುತ್ತಾರೆ.
ಸಂತೋಷ್ ಪಾತ್ರಕ್ಕೆ ಬಣ್ಣ ಹಚ್ಚಿರೋದು ನಟ ಮಧು ಹೆಗಡೆ. ಅಷ್ಟೇ ಅಲ್ಲದೇ ನಟ ಮಧು ಹೆಗಡೆ ಅವರು ಲಕ್ಷ್ಮೀ ನಿವಾಸ ಸೇರಿದಂತೆ 17ಕ್ಕೂ ಅಧಿಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇದೀಗ ನಟ ಮಧು ಹೆಗಡೆ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ನಿನ್ನಗೆ 6 ವರ್ಷಗಳು ಕಳೆದಿವೆ. ಇದೇ ಖುಷಿಯಲ್ಲಿ ನಟ ಮಧು ಹೆಗಡೆ ಅವರು ಇನ್ಸ್ಟಾಗ್ರಾಮ್ನಲ್ಲಿ ಮದುವೆಯ ಸುಂದರ ಫೋಟೋಗಳು ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
View this post on Instagram
ನಿನ್ನೆಗೆ ನಟ ಮಧು ಹೆಗಡೆ ಹಾಗೂ ನಮ್ರತಾ ಶರ್ಮಾ ಅವರ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಆರು ವರ್ಷಗಳು ಕಳೆದಿವೆ. ಮಧು ಹೆಗಡೆ ಅವರ ಪತ್ನಿ ನಮ್ರತಾ ಶರ್ಮಾ ಉದ್ಯಮಿ ಅಲ್ಲದೇ ನಿರೂಪಕಿಯಾಗಿ ಕೂಡ ಕಾಣಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ