Advertisment

ಜಯಂತ್​ ಚಿನ್ನುಮರಿಗೆ ಕೂಡಿ ಬಂತು ಕಂಕಣ ಭಾಗ್ಯ; ಚಂದನಾ ಅನಂತಕೃಷ್ಣ ಮದುವೆ ಯಾವಾಗ?

author-image
Veena Gangani
Updated On
ಸ್ಯಾಂಡಲ್​ವುಡ್​ ಸ್ಟಾರ್​ ನಟಿಯ ಮನೆಗೆ ಸೊಸೆಯಾಗಿ ಹೊಗುತ್ತಿರೋ ಚಂದನಾ ಅನಂತಕೃಷ್ಣ; ಯಾರದು ಗೊತ್ತಾ?
Advertisment
  • ಬಿಗ್​ಬಾಸ್​, ಭರ್ಜರಿ ಬ್ಯಾಚುಲರ್ಸ್​, ಡ್ಯಾನ್ಸ್​ ಶೋನಲ್ಲಿ ಮಿಂಚಿದ್ದ ನಟಿ
  • ಹಾಡು ಕರ್ನಾಟಕ ಸಿಂಗಿಂಗ್‌ ಶೋನಲ್ಲಿ ಆ್ಯಂಕರ್ ಆಗಿದ್ದ ಚಂದನಾ
  • ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಜಾಹ್ನವಿ ಪಾತ್ರದಲ್ಲಿ ನಟಿ ಅಭಿನಯ

ಕನ್ನಡ ಕಿರುತೆರೆಯಲ್ಲೇ ಲಕ್ಷ್ಮೀ ನಿವಾಸ ಧಾರಾವಾಹಿ ವಿಭಿನ್ನವಾಗಿ ಮೂಡಿ ಬರ್ತಿದೆ. ಪ್ರತಿ ಪಾತ್ರಕ್ಕೂ ಅದರದ್ದೇ ಆದ ತೂಕ, ವ್ಯಕ್ತಿತ್ವ ಇದ್ದು, ನಿರ್ದೇಶಕರು ಅದನ್ನು ಅಚ್ಚುಕಟ್ಟಾಗಿ ಪ್ರೆಸೆಂಟ್​ ಮಾಡುತ್ತಿದ್ದಾರೆ. ಹೀಗಾಗಿನೇ ಅಪಾರ ವೀಕ್ಷಕರನ್ನ ಸಂಪಾದಿಸಿದೆ ಸೀರಿಯಲ್​. ಅದರಲ್ಲೂ ಜಾಹ್ನವಿ ಪಾತ್ರದ ಮೂಲಕ ಸೀರಿಯಲ್​ ಪ್ರಿಯರ ಮನಸ್ಸು ಗೆದ್ದಿರೋ ನಟಿ ಚಂದನಾ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

Advertisment

ಇದನ್ನೂ ಓದಿ:ಹಸೆಮಣೆ ಏರಲು ಸಜ್ಜಾದ ಲಕ್ಷ್ಮೀ ನಿವಾಸ ಸೀರಿಯಲ್ ನಟಿ ಚಂದನಾ ಅನಂತಕೃಷ್ಣ; ಹುಡುಗ ಯಾರು?

publive-image

ಹೌದು, ಕಿರುತೆರೆಯ ಚೆಂದದ ನಟಿ ಚಂದನಾ ಅನಂತಕೃಷ್ಣ. ಗೊಂಬೆಯಂತಿರೋ ಈ ನಟಿಗೆ ವಿಕೇಂಡ್​​ನಲ್ಲಿ ಪ್ರಸಾರವಾಗುತ್ತಿರುವ ಭರ್ಜರಿ ಬ್ಯಾಚುಲರ್ಸ್​ ಶೋಗೆ ಅವಕಾಶ ಸಿಕ್ಕಿತ್ತು. ಕಿರುತೆರೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡ ನಟಿ ಚಂದನ ಭರ್ಜರಿ ಬ್ಯಾಚುಲರ್ಸ್​ ವೇದಿಕೆ ಹತ್ತಿದ್ದರು. ಡ್ಯಾನ್ಸ್ ಕೋರಿಯೋಗ್ರಾಫರ್ ರುದ್ರಾ ಅವರಿಗೆ ಜೋಡಿಯಾಗಿ ಪ್ರತಿ ವಾರ ವಿಕೇಂಡ್​​ನಲ್ಲಿ ನಿಮ್ಮೆಲ್ಲರೆದುರು ಬಂದು ನಿಮ್ಮನ್ನ ರಂಜಿಸುತ್ತಿದ್ದರು. ಆದರೆ ಧಿಡೀರ್ ಅಂತಾ ಲಾಸ್ಟ್ ವೀಕ್ ಎಪಿಸೋಡ್​ನಲ್ಲಿ ಚಂದನಾ ಅವರು ಈ ಶೋ ಕ್ವಿಟ್ ಮಾಡುತ್ತೇನೆ ಎಂದು ವೇದಿಕೆ ಮೇಲೆ ಅನೌನ್ಸ್​ ಮಾಡಿದ್ದರು.

publive-image

ಜೀ ವಾಹಿನಯಲ್ಲೇ ಹೊಚ್ಚ ಹೊಸ ಪ್ರಾಜೆಕ್ಟ್​ನೊಂದಿಗೆ ಮತ್ತೆ ನಿಮ್ಮೆಲರೆದುರು ಬರುತ್ತೇನೆ ಅಂತಾ ಕ್ವಿಟ್ ಮಾಡುವುದರ ಜೊತೆಗೆ ತಮ್ಮ ಮುಂದಿನ ಪ್ರಾಜೆಕ್ಟ್​ ಬಗ್ಗೆ ಕೂಡ ಹೇಳಿಕೊಂಡಿದ್ದರು. ಇದಾದ ಬಳಿಕ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಾಹ್ನವಿ ಪಾತ್ರದಲ್ಲಿ ಅದ್ಭುತವಾಗಿ ನಟಿಸುತ್ತಿದ್ದಾರೆ ಚಂದನಾ ಅನಂತಕೃಷ್ಣ.

Advertisment

ಇದನ್ನೂ ಓದಿ: ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ.. ಒಂದು ವಾರದೊಳಗೆ ಅಪ್ಲೇ ಮಾಡಿ!

publive-image

ಈಗ ಲಕ್ಷ್ಮೀ ನಿವಾಸ ಸೀರಿಯಲ್‌ ನಟಿ, ಬಿಗ್‌ಬಾಸ್‌ ಖ್ಯಾತಿಯ ಚಂದನಾ ಅನಂತಕೃಷ್ಣ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಇದೇ ತಿಂಗಳು ನಟಿ ಚಂದನಾ ಅವರು ಸಪ್ತಪದಿ ತುಳಿಯುತ್ತಿದ್ದಾರೆ. ಇನ್ನೂ ನಟಿ ಚಂದನಾ ಅನಂತಕೃಷ್ಣ ಅವರು ಬಿಗ್‌ಬಾಸ್‌ ಸೀಸನ್‌-7, ಡ್ಯಾನ್ಸಿಂಗ್ ಚಾಂಪಿಯನ್‌, ಭರ್ಜರಿ ಬ್ಯಾಚುಲರ್ಸ್​ ಶೋ ಸ್ಪರ್ಧಿ ಕೂಡ ಆಗಿದ್ದರು. ಹಾಡು ಕರ್ನಾಟಕ ಸಿಂಗಿಂಗ್‌ ಶೋನಲ್ಲಿ ಚಂದನಾ ಆ್ಯಂಕರ್ ಆಗಿದ್ದರು.

publive-image

ರಾಜಾರಾಣಿ, ಹೂಮಳೆ ಸೀರಿಯಲ್‌ನಲ್ಲಿ ನಟಿಸಿದ್ದ ನಟಿ ಚಂದನಾ ಅವರು ಸದ್ಯ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಗಾಯನದ ಮೂಲಕ ರಂಜಿಸಿರುವ ನಟಿ ಚಂದನಾ ಅನಂತಕೃಷ್ಣ ಅವರು ಪ್ರತ್ಯಕ್ಷ್‌ ಎಂಬುವವರ ಜೊತೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇನ್ನೂ ನಟಿ ಮದುವೆಯಾಗುತ್ತಿರೋ ಹುಡುಗ ಏನೂ ಕೆಲಸ ಮಾಡುತ್ತಾರೆ? ಮದುವೆ ಯಾವಾಗ ಎಂಬ ವಿಚಾರದ ಬಗ್ಗೆ ನಟಿ ಹೇಳಬೇಕಿದೆ. ಸದ್ಯ ಇದೇ ಸುದ್ದಿ ಕೇಳಿದ ಅಭಿಮಾನಿಗಳು ನಟಿಗೆ ಶುಭ ಹಾರೈಸುತ್ತಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment