/newsfirstlive-kannada/media/post_attachments/wp-content/uploads/2025/04/T-R-Dhananjayaa2.jpg)
ಕಿರುತೆರೆಯಲ್ಲಿ ಇತ್ತೀಚೆಗೆ ಲಾಂಚ್ ಆದ ಧಾರಾವಾಹಿಗಳಲ್ಲಿ ಲಕ್ಷ್ಮೀ ನಿವಾಸ ಕೂಡ ಒಂದು. ಬಹುದೊಡ್ಡ ತಾರಗಣ ಹೊಂದಿರೋ ಈ ಧಾರಾವಾಹಿಯಲ್ಲಿ ಸಿದ್ದೇಗೌಡರ ಪಾತ್ರವಂತೂ ವೀಕ್ಷಕರಿಗೆ ಬಲು ಇಷ್ಟವಾಗಿದೆ.
ಭಾವನಳ ನಯ ವಿನಯಕ್ಕೆ ಸೋತಿರೋ ಪಕ್ಕ ಹಳ್ಳಿ ಹುಡುಗ ಸಿದ್ದೇಗೌಡ ತನ್ನ ಆಸೆಯಂತೆ ಕಷ್ಟಪಟ್ಟು ಮದುವೆಯಾಗಿ ಸದ್ಯ ಶ್ರೀಲಂಕದಿಂದ ಮರಳಿ ಮನೆಗೆ ವಾಪಸ್​ ಆಗಿದ್ದಾರೆ. ಇನ್ನೂ, ಸಿದ್ದೇಗೌಡರ ಪಾತ್ರದಲ್ಲಿ ನಟಿಸುತ್ತಿರೋದು ನಟ ಧನಂಜಯ್.
ಇದನ್ನೂ ಓದಿ: ರಾಮಾಚಾರಿ ಸೀರಿಯಲ್​ ಚಾರು ಸೀರೆ ಮೇಲೆ ಹೆಣ್ಮಕ್ಕಳ ಕಣ್ಣು; ನಟಿ ಮೌನ ಗುಡ್ಡೆಮನೆ ಕಲೆಕ್ಷನ್ ನೋಡಿ!
ಲಕ್ಷ್ಮೀ ನಿವಾಸ ಸೀರಿಯಲ್​ನಿಂದಲೇ ಸಖತ್​ ಫೇಮಸ್​ ಆಗಿದ್ದಾರೆ ನಟ ಧನಂಜಯ್. ಬರೀ ಸೀರಿಯಲ್​ನಲ್ಲಿ ಅಷ್ಟೇ ಅಲ್ಲದೇ ಸೋಷಿಯಲ್​ ಮೀಡಿಯಾದಲ್ಲೂ ಸಖತ್​ ಌಕ್ಟೀವ್​ ಆಗಿದ್ದಾರೆ. ಇದೀಗ ನಟ ಧನಂಜಯ್ ತಮ್ಮ ಇನ್​ಸ್ಟಾ ಖಾತೆಯಲ್ಲಿ ಖಡಕ್​ ಪೋಸ್ಟ್​ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಶೇರ್ ಮಾಡಿದ ಪೋಸ್ಟ್​ನಲ್ಲಿ ನಟ ಧನಂಜಯ್ ಖಡಕ್​ ವಿಲನ್​ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಎರಡು ವಿಭಿನ್ನ ಲುಕ್​ನಲ್ಲಿ ಕ್ಯಾಮರಾಗೆ ಪೋಸ್​ ಕೊಟ್ಟಿದ್ದಾರೆ. ಇದೇ ಫೋಟೋಸ್ ನೋಡಿದ ಅಭಿಮಾನಿಗಳು, ನೆಟ್ಟಿಗರು ಸ್ಯಾಂಡಲ್​ವುಡ್​ ಖಡಕ್​ ವಿಲನ್​ ಆಗೇ ಆಗ್ತೀರಾ ಅಂತ ಭವಿಷ್ಯವಾಣಿ ನುಡಿದಿದ್ದಾರೆ. ಅಲ್ಲದೇ ನಟನ ಲುಕ್​ಗೆ ಫ್ಯಾನ್ಸ್​ ಫೀದಾ ಆಗಿದ್ದಾರೆ.
View this post on Instagram
ದಿನ ಕಳೆದಂತೆ ಸಿದ್ದೇಗೌಡರ ಫ್ಯಾನ್​​ ಫಾಲೋವಿಂಗ್ ಜಾಸ್ತಿ ಆಗುತ್ತಲೇ ಇದ್ದಾರೆ. ಸಿದ್ದೇಗೌಡರ ಪಾತ್ರದಲ್ಲಿ ಅಭಿನಯಿಸಿರೋ ನಟ ಧನಂಜಯ್ ಅವರು ತಾವು ಬೆಳೆದು ಬಂದ ಹಾದಿಯ ಬಗ್ಗೆ ನ್ಯೂಸ್​ ಫಸ್ಟ್​ನೊಂದಿಗೆ ಹಂಚಿಕೊಂಡಿದ್ದರು. ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿರೋ ನಟ ಧನಂಜಯ್ ಅವರಿಗೆ ಡ್ಯಾನ್ಸ್​ ಎಂದರೆ ಅಚ್ಚುಮೆಚ್ಚು. ಚಿಕ್ಕ ವಯಸ್ಸಿನಲ್ಲಿದ್ದಾಗಲೇ ದೊಡ್ಡ ಸ್ಟಾರ್​ ಹೀರೋ ಆಗಬೇಕು, ಎಲ್ಲರೂ ನನ್ನ ಗುರುತಿಸಬೇಕು ಅಂತ ಅಂದುಕೊಂಡಿದ್ದರಂತೆ. ಸದ್ಯ ಕಿರುತೆರೆಗೆ ಎಂಟ್ರಿ ಕೊಟ್ಟು ನಟನೆ ಮೂಲಕವೇ ಕಮಾಲ್​ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ