ವೀಕ್ಷಕರಿಗೆ ಬಿಗ್​ ಗಿಫ್ಟ್ ಕೊಡಲು ರೆಡಿಯಾದ ಭಾವನಾ-ಸಿದ್ದೇಗೌಡ್ರು; ಶ್ರೀಲಂಕಾಗೆ ಹೋಗಿದ್ದೇಕೆ?

author-image
Veena Gangani
Updated On
ವೀಕ್ಷಕರಿಗೆ ಬಿಗ್​ ಗಿಫ್ಟ್ ಕೊಡಲು ರೆಡಿಯಾದ ಭಾವನಾ-ಸಿದ್ದೇಗೌಡ್ರು; ಶ್ರೀಲಂಕಾಗೆ ಹೋಗಿದ್ದೇಕೆ?
Advertisment
  • ಒಂದೇ ಫ್ರೇಮ್​ನಲ್ಲಿ ಕಾಣಿಸಿದ ಲಕ್ಷ್ಮೀ ನಿವಾಸ ಸ್ಟಾರ್​ ನಾಲ್ಕು ಮಂದಿ
  • ಸಿದ್ದೇಗೌಡ್ರು-ಭಾವನಾ ಜೊತೆಗೆ ಜಾಹ್ನವಿ-ಜಯಂತ್ ಕೂಡ ಜಾಯಿನ್​
  • ಮುಂದಿನ ಸಂಚಿಕೆಯಲ್ಲಿ ವೀಕ್ಷಕರಿಗೆ ಸಿಗಲಿದೆ ಬಂಪರ್​ ಮನರಂಜನೆ

ಲಕ್ಷ್ಮೀ ನಿವಾಸ ಜೋಡಿಗಳು ಹನಿಮೂನ್​ ಮೂಡ್​ನಲ್ಲಿ ವಿದೇಶಕ್ಕೆ ಹಾರಿದ್ದಾರೆ ಭಾವನಾ-ಸಿದ್ದೇಗೌಡ್ರು ಹಾಗೂ ಜಾಹ್ನವಿ, ಜಯಂತ್​. ಈ ನಾಲ್ಕು ಮಂದಿ ಒಟ್ಟಿಗೆ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದಾರೆ. ಹೌದು, ಮುಂದಿನ ಸಂಚಿಕೆಯಲ್ಲಿ ಹನಿಮೂನ್​ ದೃಶ್ಯಗಳು ಬರಲಿವೆ.

ಇದನ್ನೂ ಓದಿ:ನಾಳೆ ಓಲಾ, ಉಬರ್ ರಸ್ತೆಗೆ ಇಳಿಯಲ್ಲ.. ಕರ್ನಾಟಕ ಬಂದ್​ಗೆ ಯಾರೆಲ್ಲ ಬೆಂಬಲ ಕೊಟ್ಟವ್ರೆ..?

publive-image

ಸಿದ್ದೇಗೌಡ್ರನ್ನು ಆಕ್ಸಿಡೆಂಟ್​ ವಿಚಾರದಲ್ಲಿ ಕಾಪಾಡೋಕೆ ಗೌಡ್ರ ಅಪ್ಪ ಮತ್ತು ಅಣ್ಣ ಸೇರಿ ಹೊಸ ಪ್ಲ್ಯಾನ್​ ಮಾಡಿದ್ದಾರೆ. ಭಾವನಾ ಹಾಗೂ ಸಿದ್ದೇಗೌಡ್ರನ್ನ ಹನಿಮೂನ್​ಗೆ ಕಳುಹಿಸಿ, ನಂತರ ಓರ್ವ ವ್ಯಕ್ತಿನ ಅಪಘಾತ ಮಾಡಿದ್ದು ಇವನೇ ಅಂತ ಪೊಲೀಸರಿಗೆ ಸರಂಡರ್​ ಮಾಡಿಸ್ಬೇಕು ಅಂತ ತಂತ್ರ ಮಾಡಿದ್ದಾರೆ.

publive-image

ಹೀಗಾಗಿನೇ ಹನಿಮೂನ್​ಗೆ ಹೋಗಲೇಬೇಕು ಅಂತ ಭಾವನಾ ಹಾಗೂ ಸಿದ್ದುಗೆ ಎಮೋಷನಲ್​ ಆಗಿ ಬ್ಲ್ಯಾಕ್​ ಮೇಲ್​ ಮಾಡ್ತಿದ್ದಾರೆ. ಇದು ಸದ್ಯದ ಲಕ್ಷ್ಮೀ ನಿವಾಸದ ಕಥೆ. ಈಗಾಗಲೇ ಹನಿಮೂನ್​ ಸನ್ನಿವೇಶಗಳನ್ನ ಚಿತ್ರೀಕರಣ ಮಾಡಲಾಗಿದೆ. ಶ್ರೀಲಂಕಾದಲ್ಲಿ ಈ ವಿಶೇಷ ಸಂಚಿಕೆಗಳನ್ನ ಶೂಟ್​ ಮಾಡಿದೆ ತಂಡ.

publive-image

ಮತ್ತೊಂದು ವಿಶೇಷ ಅಂದ್ರೇ ಸಿದ್ದೇಗೌಡ್ರು-ಭಾವನಾ ಜೊತೆಗೆ ಜಾಹ್ನವಿ-ಜಯಂತ್​ ಕೂಡ ಹೋಗಿರೋದು. ಇವರು ಹೇಗೆ ಜೊತೆ ಆದ್ರು ಅನ್ನೋದು ಮುಂದಿನ ಸಂಚಿಕೆಗಳಲ್ಲಿ ಪ್ರಸಾರವಾಗಲಿದೆ. ಸದ್ಯಕ್ಕಂತೂ ಶೂಟಿಂಗ್ ವೇಳೆ ತೆಗೆದ ಫೋಟೋ, ವಿಡಿಯೋಗಳನ್ನ ಭಾವನಾ ಪಾತ್ರಧಾರಿ ದಿಶಾ ಮದನ್ ಅವರು​ ಹಂಚಿಕೊಂಡಿದ್ದಾರೆ.

publive-image

ದಿಶಾ ಹಾಗೂ ಚಂದನಾ ಇಬ್ಬರೂ ಭರತನಾಟ್ಯ ಡಾನ್ಸರ್ಸ್​. ಶ್ರೀಲಂಕಾದ ಕಲಾವಿದರ ಜೊತೆ ನೃತ್ಯ ಮಾಡಿ, ಅಲ್ಲಿನ ಸಂಸ್ಕ್ರತಿಕ ಕಾರ್ಯಕ್ರಮಗಳನ್ನ ಎಂಜಾಯ್​ ಮಾಡಿದ್ದಾರೆ. ನಾಲ್ವರೂ ಶ್ರೀಲಂಕಾದ ಸೊಬಗನ್ನ ಸವಿದಿದ್ದಾರೆ. ಹಲವು ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಈ ಫೋಟೋಗಳಲ್ಲಿರೋ ದೃಶ್ಯಗಳು ಹನಿಮೂನ್​ ಸಂಚಿಕೆಯಲ್ಲಿ ಪ್ರಸಾರವಾಗಲಿವೆ. ಒಟ್ಟಿನಲ್ಲಿ ಲಕ್ಷ್ಮೀ ನಿವಾಸ ಅಭಿಮಾನಿಗಳಿಗೆ ಬಿಗ್​ ಗಿಫ್ಟ್​ ಕೊಡೋಕೆ ತಯಾರಾಗಿದೆ ತಂಡ. ಆ ಬ್ಯೂಟಿಫುಲ್​ ದೃಶ್ಯಗಳನ್ನ ಕಣ್ತುಂಬಿಕೊಳ್ಳೋಕೆ ಮಿಸ್​ ಮಾಡ್ದೇ ನೋಡಿ ಲಕ್ಷ್ಮೀ ನಿವಾಸ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment