ಕನ್ನಡ ಕಲಿಯಿರಿ, ಬೆಂಗಳೂರಿಗೆ ಬಂದು ನೆಲೆಸಿರಿ; ದೆಹಲಿಯ ನಿವಾಸಿಗಳಿಗೆ ಹಾಸ್ಯಭರಿತ ಆಹ್ವಾನ ನೀಡಿದ್ದು ಯಾರು?

author-image
Gopal Kulkarni
Updated On
ಕನ್ನಡ ಕಲಿಯಿರಿ, ಬೆಂಗಳೂರಿಗೆ ಬಂದು ನೆಲೆಸಿರಿ; ದೆಹಲಿಯ ನಿವಾಸಿಗಳಿಗೆ ಹಾಸ್ಯಭರಿತ ಆಹ್ವಾನ ನೀಡಿದ್ದು ಯಾರು?
Advertisment
  • ವಿಷಕಾರಕ ಗಾಳಿಯನ್ನೇ ಉಸಿರಾಡುತ್ತಿದೆ ರಾಷ್ಟ್ರ ರಾಜಧಾನಿ ದೆಹಲಿ
  • ದೆಹಲಿ ನಿವಾಸಿಗಳಿಗೆ ಹೊಸ ಆಹ್ವಾನ ನೀಡಿ ಕನ್ನಡಿಗನಿಂದ ಟ್ವೀಟ್​
  • ಕನ್ನಡ ಕಲಿಯಿರಿ, ಬೆಂಗಳೂರಿಗೆ ಬಂದು ನೆಲೆಸಿ ಎಂದ ರಾಯ್

ದೆಹಲಿ ಸದ್ಯ ತನ್ನ ಗಾಳಿಯಲ್ಲಿ ವಿಷನ್ನೇ ತುಂಬಿಕೊಂಡು ಉಸಿರಾಡುತ್ತಿರುವ ನಗರ. ದೆಹಲಿಯ ಗಾಳಿ ಕಲುಷಿತಗೊಂಡು ಉಸಿರಾಡಲು ಲೆಕ್ಕಹಾಕುವ ಮಟ್ಟಕ್ಕೆ ಬಂದು ನಿಂತಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪ್ರತಿ ವರ್ಷ ಚಳಿಗಾಲದಲ್ಲಿ ಕಾಡುವ ಈ ವಿಷಯುಕ್ತ ಗಾಳಿಯಿಂದ ಪರಿಹಾರ ಯಾವಾಗ ಎಂದು ದೆಹಲಿ ನಿವಾಸಿಗಳು ಗೋಳಿಡುತ್ತಿದ್ದಾರೆ.

ದೆಹಲಿಯನ್ನು ಹೋಲಿಸಿದರೆ ಬೆಂಗಳೂರು ಸಾವಿರ ಪಟ್ಟು ಉತ್ತಮ ಗಾಳಿಯನ್ನು ಹೊಂದಿದೆ. ಇಲ್ಲಿಯ ಏರ್​ ಕ್ವಾಲಿಟಿ ಇಂಡೆಕ್ಸ್ 60-80 ರಷ್ಟಿದೆ. ಹೀಗಾಗಿ ಇದನ್ನೇ ಹಾಸ್ಯದ ವಸ್ತುವಾಗಿ ಮಾಡಿಕೊಂಡ ಒಬ್ಬ ಕನ್ನಡಿಗ ದೆಹಲಿಯ ನಿವಾಸಿಗಳಿಗೆ ಒಂದು ಆಹ್ವಾನವನ್ನು ನೀಡಿದ್ದಾರೆ. ರಾಯ್ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಸ್ವಚ್ಛ ಗಾಳಿ ಎಂಬುದು ಮನುಷ್ಯನ ಮೂಲಭೂತ ಹಕ್ಕುಗಳಲ್ಲಿ ಒಂದು. ಆದ್ರೆ ದೆಹಲಿ ಜನರೇ, ನೀವು ಸ್ವಚ್ಛ ಗಾಳಿಗಾಗಿ 18 ಪರ್ಸೆಂಟ್ ಹೆಚ್ಚಿನ ಜಿಎಸ್​ಟಿ ಕೊಡುತ್ತಿದ್ದೀರಿ ಎಂದು ಲೇವಡಿ ಮಾಡಿದ್ದಾರೆ.


">November 19, 2024


ಇದನ್ನೂ ಓದಿ:ಆನ್​​ಲೈನ್​ನಲ್ಲಿ ಹಣ ಹೂಡುವ ಮುನ್ನ ಇರಲಿ ಎಚ್ಚರ! ವಿಜಯಪುರದಲ್ಲಿ 285 ಕೋಟಿ ರೂ. ಹಣದೊಂದಿಗೆ ಗ್ಯಾಂಗ್ ಪರಾರಿ..!

ಇದರ ಜೊತೆಗೆ ಇದು ಕನ್ನಡ ಕಲಿಯುವ ಸಮಯ, ಕನ್ನಡ ಕಲಿಯಿರಿ ಖಾಯಂ ಆಗಿ ಬೆಂಗಳೂರಿಗೆ ಬಂದು ನೆಲೆಸಿ ಇಲ್ಲಿಯ ಎಕ್ಯೂಐ 60-80 ಇದೆ ಎಂದು ಕೂಡ ಬರೆದುಕೊಂಡಿದ್ದಾರೆ. ಇದು ಈಗ ಸಖತ್ ವೈರಲ್ ಆಗಿದೆ. ಇದು ನಿಜಕ್ಕೂ ಒಳ್ಳೆಯ ಪರಿಹಾರ ಎಂದು ಹಲವರು ಹಾಸ್ಯಭರಿತವಾಗಿ ಕಮೆಂಟ್ ಕೂಡ ಮಾಡಿದ್ದಾರೆ.
ದೆಹಲಿಯಲ್ಲಿ ಏರ್​ ಕ್ವಾಲಿಟಿ ಇಂಡೆಕ್ಸ್ ಕೇಂದ್ರ ಮಾಲಿನ್ಯ ನಿರ್ವಹಣಾ ಮಂಡಳಿ ಹೇಳುವ ಪ್ರಕಾರ ಬೆಳಗ್ಗೆ 488ರಷ್ಟಿತ್ತು ಎನ್ನಲಾಗಿದೆ. ಈ ಗಾಳಿಯ ಉಸಿರಾಟ ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂದು ಕೂಡ ಹೇಳಲಾಗಿದೆ. ಅದರಲ್ಲೂ ಆರೋಗ್ಯ ದುರ್ಬಲರು ಹಾಗೂ ಮಕ್ಕಳಿಗೆ ಇದು ಅಕ್ಷರಶಃ ವಿಷಕಾರಿ ಗಾಳಿ ಎಂದು ವರದಿಯಾಗಿದೆ. ಈ ಗಾಳಿ ಸೇವನೆಯಿಂದ ಉಸಿರಾಟದ ಸಮಸ್ಯೆಯ ಜೊತೆಗೆ ಹೃದಯ ಸಂಬಂಧಿ ಕಾಯಿಲೆಗಳು ಕೂಡ ಬರುತ್ತವೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment