newsfirstkannada.com

ಟಿ20 ವಿಶ್ವಕಪ್​ನಲ್ಲಿ ಆಫ್​ ಸ್ಪಿನ್ನರ್ಸ್ ಇಲ್ಲವೇ ಇಲ್ಲ -ಲೆಫ್ಟಿ ಸ್ಪಿನ್ನರ್ಸ್ ಆಯ್ಕೆ ಹಿಂದಿನ ಅಸಲಿ ಸತ್ಯ ರಿವೀಲ್..!

Share :

Published May 30, 2024 at 9:38am

    ಆಫ್ ಸ್ಪಿನ್ನರ್ ಮಣೆ ಹಾಕದ ಹಿಂದಿನ ರೀಸನ್ ಏನು..?

    ಲೆಫ್ಟಿ ಸ್ಪಿನ್ನರ್​​ಗಳ ಆಯ್ಕೆಯ ಕಾರಣ ಸಿಪಿಎಲ್ ಆಯ್ತಾ..?

    ಸೇನಾ ದೇಶಗಳಿಂದಲೂ ಇದೇ ಸ್ಟ್ರಾಟರ್ಜಿ ಫಾಲೋ..!

ಟಿ20 ವಿಶ್ವಕಪ್​​ ಚುಟುಕು ಸಮರಕ್ಕೆ ಟೀಮ್ ಇಂಡಿಯಾ ರೆಡಿಯಾಗಿದೆ. ಇನ್ನೇನು ಜೂನ್ 5ರಿಂದ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಟೀಮ್ ಇಂಡಿಯಾ ಅಭಿಮಾನಿಗಳಿಗೆ ಮಾತ್ರ ಒಂದು ಪ್ರಶ್ನೆ ಬಿಟ್ಟು ಬಿಡದೇ ಕಾಡ್ತಿದೆ. ಅದೇ ಟೀಮ್ ಇಂಡಿಯಾದಲ್ಲಿ ಆಫ್​ ಸ್ಪಿನ್ನರ್ ಯಾಕಿಲ್ಲ ಅನ್ನೋದು?

ಟಿ20 ವಿಶ್ವಕಪ್​ ಮಹಾ ಸಮರಕ್ಕೆ ಕೌಂಟ್​ಡೌನ್ ಶುರುವಾಗಿದೆ. ಮಹಾ ಸಂಗ್ರಾಮಕ್ಕಾಗಿ ಎಲ್ಲಾ 20 ತಂಡಗಳು ಪೂರ್ವಾಭ್ಯಾಸದಲ್ಲಿ ನಿರತವಾಗಿವೆ. ನ್ಯೂಯಾರ್ಕ್​ನಲ್ಲಿ ಬೀಡು ಬಿಟ್ಟಿರುವ ಟೀಮ್ ಇಂಡಿಯಾ, ಇನ್ನಷ್ಟೇ ಅಭ್ಯಾಸಕ್ಕೆ ಧುಮುಕುತ್ತಿದೆ. ಸೆಲೆಕ್ಷನ್ ಕಮಿಟಿ ಪ್ರಕಟಿಸಿರುವ 15 ಸದಸ್ಯರ ತಂಡದಲ್ಲಿ ಒಂದು ಗೊಂದಲ ಮಾತ್ರ ಹಾಗೇ ಉಳಿದಿದೆ. ಅದೇ ಆಫ್ ಸ್ಪಿನ್ನರ್ ಯಾಕಿಲ್ಲ?

ಹೌದು! ಅಳೆದು ತೂಗಿ ತಂಡವನ್ನು ಪ್ರಕಟಿಸಿರುವ ಸೆಲೆಕ್ಷನ್ ಕಮಿಟಿ, ನಾಲ್ವರು ಸ್ಪಿನ್ನರ್​​ಗಳಿಗೆ ಚಾನ್ಸ್​ ನೀಡಿದೆ. ತಂಡದಲ್ಲಿ ಒಬ್ಬನೇ ಒಬ್ಬ ಆಫ್ ಸ್ಪಿನ್ನರ್​​​​​ಗೆ ಸ್ಥಾನ ಕಲ್ಪಿಸಿಲ್ಲ. ಇದು ಕ್ರಿಕೆಟ್ ದಿಗ್ಗಜರಿಗೂ ಯಕ್ಷಪ್ರಶ್ನೆಯಾಗಿ ಕಾಡ್ತಿದೆ. ಈ ಬಗ್ಗೆ ಗುಟ್ಟು ಬಿಡದ ಕ್ಯಾಪ್ಟನ್​​ ರೋಹಿತ್, ವೆಸ್ಟ್​ ಇಂಡೀಸ್​ನಲ್ಲೇ ಹೇಳ್ತೀನಿ ಎಂದು ಹುಳಬಿಟ್ಟಿದ್ದಾರೆ. ಪ್ರೆಸ್ ಕಾನ್ಫ್​ರೆನ್ಸ್​ನಲ್ಲಿ ಪ್ರಮುಖ ಕಾರಣವಿದೆ ಅಂತ ರೋಹಿತ್ ಉತ್ತರಿಸಿದ್ದಾರೆ.

ಲೆಫ್ಟಿ ಸ್ಪಿನ್ನರ್​​ಗಳ ಆಯ್ಕೆಯ ಹಿಂದಿದೆ ಸ್ಟ್ರಾಟರ್ಜಿ..!
ಟೀಮ್ ಇಂಡಿಯಾ ಲೆಫ್ಟಿ ಸ್ಪಿನ್ನರ್​​ಗಳಾದ ಜಡೇಜಾ, ಅಕ್ಷರ್ ಪಟೇಲ್, ಕುಲ್​ದೀಪ್ ಯಾದವ್ ಮಣೆಹಾಕಿದೆ. ಆ ಮೂಲಕ ಟಿ20 ವಿಶ್ವಕಪ್​ ತಂಡದಲ್ಲಿ ಲೆಫ್ಟಿ ಸ್ಪಿನ್ನರ್ಸ್ ಪ್ಲೇವರ್ ನೀಡಿದೆ. ಆದರೆ ಈ ಆಯ್ಕೆಯ ಹಿಂದೆ ಭಾರೀ ವ್ಯೂಹವೇ ಅಡಗಿದೆ. ಅಷ್ಟೇ ಅಲ್ಲ, ಪ್ರಮುಖ ಕಾರಣವೂ ಇದೆ. ಅದೇ ಕರಿಬಿಯನ್ ಪ್ರಿಮೀಯರ್ ಲೀಗ್​.

ಲೀಗ್​​​ ಯಶಸ್ಸೇ ಲೆಫ್ಟಿ ಸ್ಪಿನ್ನರ್​ ಆಯ್ಕೆ ಸಿಕ್ರೇಟ್​
ಕರಿಬಿಯನ್​ ಲೀಗ್​ನಲ್ಲಿ ಲೆಫ್ಟ್​ ಆರ್ಮ್ ಹಾಗೂ ಲೆಗ್ ಸ್ಪಿನ್ನರ್​ಗಳ ಸಕ್ಸಸ್ ಕಂಡಿದ್ದಾರೆ. ಇದೇ ಕಾರಣಕ್ಕೆ ಟೀಮ್ ಇಂಡಿಯಾ, ನಾಲ್ವರು ಸ್ಪಿನ್ನರ್​ಗಳ ಆಯ್ಕೆಗೆ ಮೇನ್ ರೀಸನ್ ಆಗಿದೆ. ಯಾಕಂದ್ರೆ. ಕಳೆದ 2 ಸೀಸನ್​​​ಗಳಿಂದ ಸಿಪಿಎಲ್​ನಲ್ಲಿ 35 ಸ್ಪಿನ್ನರ್​ಗಳು ಬರೋಬ್ಬರಿ 318 ವಿಕೆಟ್ ಉರುಳಿಸಿದ್ದಾರೆ. ಇಂಟ್ರೆಸ್ಟಿಂಗ್​ ಅಂದ್ರೆ 14 ಮಂದಿ ಲೆಫ್ಟ್ ಆರ್ಮ್​ ಸ್ಪಿನ್ನರ್ಸ್ 128 ವಿಕೆಟ್ ಉರುಳಿದ್ದಾರೆ.

2022-23 ಸಿಪಿಎಲ್​ನಲ್ಲಿ ಸ್ಪಿನ್ನರ್ಸ್ ಸಾಧನೆ
2022, 2023ರ ಕರಿಬಿಯನ್ ಲೀಗ್​ನಲ್ಲಿ ಲೆಫ್ಟ್​ ಆರ್ಮ್​ ಆರ್ಥೋಡೆಕ್ಸ್ ಸ್ಪಿನ್ನರ್​ಗಳು 40.25ರಷ್ಟು ವಿಕೆಟ್ ಉರುಳಿಸಿದ್ರೆ. ರೈಟ್ ಆಮ್​ ಲೆಗ್ ಬ್ರೇಕ್ ಸ್ಪಿನ್ನರ್​​​ಗಳು ಶೇಕಡಾ 16.03ರಷ್ಟು ವಿಕೆಟ್ ಕಬಳಿಸಿದ್ದಾರೆ. ಲೆಫ್ಟ್​ ಆರ್ಮ್​ ಲೆಗ್ ಬ್ರೇಕ್ ಸ್ಪಿನ್ನರ್​ಗಳು ಶೇಕಡಾ 8.5ರಷ್ಟು ವಿಕೆಟ್ಸ್​ ತಮ್ಮದಾಗಿಸಿಕೊಂಡಿದ್ರೆ. ಆಫ್​ ಸ್ಪಿನ್ನರ್​ಗಳು ಶೇಕಡಾ 35.22ರಷ್ಟು ವಿಕೆಟ್ ಉರುಳಿಸಿದ್ದಾರೆ.

ವಿಕೆಟ್​​ ಬೇಟೆಯಲ್ಲಿ ಮಾತ್ರವೇ ಅಲ್ಲ. ಎದುರಾಳಿ ಬ್ಯಾಟರ್​​​ನ ರನ್​​ ಕಡಿವಾಣ ಹಾಕಿದ್ದಾರೆ. ಪ್ರತಿ ಓವರ್​​ಗೆ 7.92ರಂತೆ ರನ್​ ಬಿಟ್ಟುಕೊಟ್ಟಿದ್ದಾರೆ. ವೆಸ್ಟ್​ ಇಂಡೀಸ್ ಕಂಡೀಷನ್ಸ್​, ಎಡಗೈ ಸ್ಪಿನ್ನರ್​​ಗಳಿಗೆ ಹೇಳಿ ಮಾಡಿಸಿದಂತಿದೆ. ಈ ಕಾರಣಕ್ಕೆ ಟೀಮ್ ಇಂಡಿಯಾ ಲೆಫ್ಟಿ ಸ್ಪಿನ್ನರ್​​ಗಳ ಪ್ರಯೋಗದ ಹಿಂದಿನ ಉದ್ದೇಶ.

90 ಪ್ಲಸ್​ ಸ್ಪೀಡ್..​​ ಜಡ್ಡು, ಅಕ್ಷರ್​, ಕುಲ್​ದೀಪ್​ ಮೇಲೆ ನಿರೀಕ್ಷೆ ಹೆಚ್ಚು

ಜಡೇಜಾ, ಅಕ್ಷರ್ ಪಟೇಲ್, ಕುಲ್​ದೀಪ್​ ಯಾದವ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಇದಕ್ಕೆ ಕಾರಣ ಇವರ ಬೌಲಿಂಗ್ ಸ್ಪೀಡ್​​​. ಯಾಕಂದ್ರೆ 90 ಪ್ಲಸ್​ ವೇಗದಲ್ಲಿ ಬೌಲಿಂಗ್ ಮಾಡಿರುವ​​​​​​​​​​​​​​​​​​​​​​​​​​​​​​​​​​ ಸ್ಪಿನ್ನರ್​​​ಗಳೇ ಹೆಚ್ಚು ಸಕ್ಸಸ್​ ಕಂಡಿದ್ದಾರೆ. ಏಕಾನಮಿಯೂ 6.8 ಇದೆ. ಹೀಗಾಗಿ ಈ ಸ್ಟ್ರಾಟರ್ಜಿ ಟಿ20 ವಿಶ್ವಕಪ್​ನಲ್ಲಿ ವರ್ಕ್​ ಆದ್ರೆ ಟೀಮ್ ಇಂಡಿಯಾಗೆ ಟಿ20 ವಿಶ್ವಕಪ್​ ಗ್ಯಾರಂಟಿ.

ಸೇನಾ ದೇಶಗಳಿಂದ ಭಾರತದ ಸ್ಟ್ರಾಟರ್ಜಿ ಫಾಲೋ
ಟೀಮ್ ಇಂಡಿಯಾನೇ ಅಲ್ಲ. ಸೇನಾ ರಾಷ್ಟ್ರಗಳಾದ ನ್ಯೂಜಿಲೆಂಡ್​ ಲೆಗ್ ಸ್ಪಿನ್ನರ್​ಗಳಾದ ಇಶ್ ಸೋಧಿ, ಮಿಚೆಲ್ ಸ್ಯಾಟ್ನರ್​, ರಚಿನ್ ರವಿಂದ್ರಗೆ ಮಣೆಹಾಕಿದ್ರೆ. ಆಸ್ಟ್ರೇಲಿಯಾ ಅಸ್ಟನ್ ಅಗರ್, ಆ್ಯಡಂ ಜಂಪಾಗೆ ಸ್ಥಾನ ನೀಡಿದೆ. ಸೌತ್ ಆಫ್ರಿಕಾ ಥಬ್ರೇಜ್ ಶಂಸಿ, ಕೇಶವ್ ಮಹಾರಾಜ್​​ಗೆ ಮಣೆಹಾಕಿದ್ರೆ. ಇಂಗ್ಲೆಂಡ್ ಟಾಮ್ ಹಾರ್ಟ್ಲೀ, ಅದಿಲ್ ರಶೀದ್​​​​​​​​​​, ಲಿಯಾಂಮ್ ಲಿವಿಂಗ್ ಸ್ಟೋನ್​​ಗೆ ಸ್ಥಾನ ನೀಡಿದೆ. ಆ ಮೂಲಕ ಟಿ20 ವಿಶ್ವಕಪ್​ನಲ್ಲಿ ಮ್ಯಾಜಿಕ್​ ಮಾಡೋಕೆ ಹೊರಟಿವೆ.

ಒಟ್ನಲ್ಲಿ.. ಕೆರಿಬಿಯನ್ ಲೀಗ್​ನ ಸಕ್ಸಸ್​ ಅನ್ನೇ ನಂಬಿಕೊಂಡು, ಬಹುತೇಕ ತಂಡಗಳು ಲೆಗ್ ಸ್ಪಿನ್ನರ್​ಗಳನ್ನೇ ಆಯ್ಕೆ ಮಾಡಿದೆ. ಈ ಪೈಕಿ ಯಾರ ಸ್ಟ್ರಾಟರ್ಜಿ ವರ್ಕ್ ಆಗುತ್ತೆ ಅನ್ನೋದಕ್ಕೆ ವಿಶ್ವಕಪ್​ ಬಳಿಕವೇ ತಿಳಿಯಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟಿ20 ವಿಶ್ವಕಪ್​ನಲ್ಲಿ ಆಫ್​ ಸ್ಪಿನ್ನರ್ಸ್ ಇಲ್ಲವೇ ಇಲ್ಲ -ಲೆಫ್ಟಿ ಸ್ಪಿನ್ನರ್ಸ್ ಆಯ್ಕೆ ಹಿಂದಿನ ಅಸಲಿ ಸತ್ಯ ರಿವೀಲ್..!

https://newsfirstlive.com/wp-content/uploads/2024/05/LEG-SPINNER.jpg

Load More