/newsfirstlive-kannada/media/post_attachments/wp-content/uploads/2025/03/LEFT-OVER-AGE.jpg)
ಭಾರತ ದೇಶದಲ್ಲಿ 30ರ ಆಸುಪಾಸು ವಯಸ್ಸಿಗೆ ಬಂದ ಹುಡುಗಿಯರಿಗೆ ಒಂದು ಸರಳವಾದ ಅಪವಾದ ಬರುತ್ತದೆ. 30 ಆಯ್ತು ಇನ್ನೇನು ಮದುವೆಯಾಗ್ತೀಯಾ? ನಿನಗ್ಯಾರು ಗಂಡು ಕೊಡ್ತಾರೆ? ಮುಗೀತು ನಿನ್ನ ಮುಂದಿನ ಜೀವನ ಹೀಗೆಲ್ಲಾ ಮಾತುಗಳು ಕೇಳಿ ಬರೋದು ಸಾಮಾನ್ಯ. ಆದ್ರೆ ಇಂತಹ ಮಾತುಗಳು ಹಣೆಪಟ್ಟಿಗಳು ಕೇವಲ ಭಾರತದಲ್ಲಿ ಮಾತ್ರ ಕೇಳಿ ಬರುತ್ತವೆಯಾ. ಇಲ್ಲ ಇದಕ್ಕಿಂತ ಕಡಿಮೆ ವಯಸ್ಸು ಅಂದ್ರೆ 27ನೇ ವಯಸ್ಸಿನ ಯುವತಿಗೆ ಕೂಡ ಮದುವೆಯಾಗಲು ಅನರ್ಹಗಳು ಎಂಬ ಹಣೆಪಟ್ಟಿಯನ್ನು ಕೊಡುವ ದೇಶ ನಮ್ಮ ದೇಶದ ಪಕ್ಕದಲ್ಲಿಯೇ ಇದೆ.
ಹೌದು, ನಾವು ಮಾತನಾಡುತ್ತಿರುವುದು ಚೀನಾ ದೇಶದ ಬಗ್ಗೆ ಇಲ್ಲಿನ ಯುವತಿಯರಿಗೆ 27 ವರ್ಷ ತುಂಬಿದರೆ ಅವರು ಮದುವೆಯಲ್ಲ, ಬಾಯ್ಫ್ರೆಂಡ್ ಮಾಡಿಕೊಳ್ಳುವುದಕ್ಕೂ ಕೂಡ ಅನರ್ಹರು ಎಂಬ ಹಣೆಪಟ್ಟಿಯನ್ನು ಕೊಡುತ್ತಾರೆ. ಇದಕ್ಕೆ ಲೆಫ್ಟ್ ಓವರ್ ಎಂದು ಕರೆಯುತ್ತಾರೆ. ಚೀನಾದಲ್ಲಿ 27 ತಲುಪಿದ ಸಿಂಗಲ್ ಹುಡುಗಿಯನ್ನು ನಮ್ಮ ದೇಶದಲ್ಲಿ 35ನೇ ವಯಸ್ಸಿನ ಸಿಂಗಲ್ ಮಹಿಳೆಯನ್ನು ನೋಡಿದ ರೀತಿಯಲ್ಲಿ ನೋಡುತ್ತಾರೆ.
ಇದನ್ನೂ ಓದಿ: ಭಾರತದಲ್ಲಿ ಮೊಟ್ಟ ಮೊದಲ ರೈಲು ನಿಲ್ದಾಣ ಯಾವ ರಾಜ್ಯದಲ್ಲಿ ನಿರ್ಮಾಣವಾಗಿತ್ತು? ಅದರ ಹೆಸರು ಏನಿತ್ತು?
ಹೀಗಾಗಿಯೇ ಚೀನಾ ದೇಶದ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಡೇಟಿಂಗ್ ಮಾಡಲು ಸ್ವತಂತ್ರವಾಗಿ ಬಿಡುತ್ತಾರೆ. ಕಾರಣ ವಯಸ್ಸಿನೊಳಗೆ ಅವಳು ಒಂದು ಸರಿಯಾದ ಜೊತೆಗಾರನ್ನು ಹುಡುಕಿಕೊಳ್ಳಲಿ ಎಂದು 27ರ ಆಸುಪಾಸು ಬಂದರೆ ಸಾಕು ಚೀನಿ ದೇಶದ ಯುವತಿಯರು ಒಂದು ಒತ್ತಡಕ್ಕೆ ಬಿದ್ದು ಬಿಡುತ್ತಾರೆ. ನನಗಿನ್ನೂ ಯಾವ ಬಾಯ್ಫ್ರೆಂಡ್ ಇಲ್ಲ. ಒಂದು ವೇಳೆ ನಾನು 27 ದಾಟಿದರೆ ನನ್ನ ಮದುವೆಯೆಂಬ ಕನಸು ನನಸಾಗುವುದೇ ಇಲ್ಲವೆಂದು ಖಿನ್ನತೆಗೆ ಜಾರುವಷ್ಟು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುತ್ತಾರೆ.
ಇದನ್ನೂ ಓದಿ:ಗಣಿತ ಇಸ್ಲಾಂನ ಆವಿಷ್ಕಾರವಂತೆ! ಮತ್ತೆ ಟ್ರೋಲಿಗರ ಬಾಯಿಗೆ ಆಹಾರವಾದ ಶಮಾ ಮೊಹಮ್ಮದ್!
ಈ ಒಂದು ಒತ್ತಡಕ್ಕೆ ಇನ್ನೊಂದು ಪ್ರಮುಖ ಕಾರಣವೆಂದರೆ ಚೀನಾದಲ್ಲಿ ಬಹುತೇಕ ಯುವತಿಯರು ಆರ್ಥಿಕವಾಗಿ ಸ್ವತಂತ್ರವಾಗಿದ್ದಾರೆ. ಅದರ ಜೊತೆಗೆ ಸಿಂಗಲ್ ಆಗಿಯೂ ಕೂಡ ಇರ್ತಾರೆ ಕಾರಣ ನಾನೇ ನನ್ನ ಜೊತೆಗಾರರನ್ನು ಹುಡುಕಿಕೊಳ್ಳುತ್ತೇನೆ ಎಂಬ ಭರವಸೆಯೊಂದಿಗೆ ಇರುತ್ತಾರೆ. ಹೀಗೆ ಒಂಟಿಯಾಗಿರುವ ಹಾಗೂ ಯಾವುದೇ ಜೊತೆಗಾರನಿಲ್ಲದ ಯುವತಿಯರಿಗೆ ಶೆಂಗು ನು ಎಂದು ಕರೆಯುತ್ತಾರೆ ಇದರ ಅರ್ಥ ಲೆಫ್ಟ್ ಓವರ್ ಅಂದ್ರೆ ಎಲ್ಲಾ ಮುಗೀತು ಅಂತ ಅರ್ಥ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ