/newsfirstlive-kannada/media/post_attachments/wp-content/uploads/2023/08/Elephant-Whisperers.jpg)
ದಿ ಎಲಿಫೆಂಟ್ ವಿಸ್ಪರರ್ಸ್ ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿ ಗೆದ್ದ ಭಾರತದ ಹೆಮ್ಮೆಯ ಸಾಕ್ಷ್ಯಚಿತ್ರ. ಆಸ್ಕರ್ ಅಂಗಳದಲ್ಲಿ ಎಲಿಫೆಂಟ್ ವಿಸ್ಪರರ್ಸ್ ಮೋಡಿ ಮಾಡಿದಾಗ ಕೋಟ್ಯಾಂತರ ಭಾರತೀಯರು ಖುಷಿ ಪಟ್ಟಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಖುದ್ದು ಈ ಚಿತ್ರತಂಡವನ್ನ ಭೇಟಿ ಮಾಡಿ ಶುಭಾಶಯ ಕೋರಿದ್ದರು. ಆಸ್ಕರ್ ಪ್ರಶಸ್ತಿ ಗೆದ್ದ ಬಹುದಿನದ ಬಳಿಕ ಎಲಿಫೆಂಟ್ ವಿಸ್ಪರರ್ಸ್ ಚಿತ್ರತಂಡದಲ್ಲಿ ಭಿನ್ನಾಭಿಪ್ರಾಯ ತಲೆದೋರಿದೆ. ಅಷ್ಟೇ ಅಲ್ಲ ಈ ಚಿತ್ರದಲ್ಲಿ ಆನೆ ಜೊತೆ ಹೆಜ್ಜೆ ಹಾಕಿದ್ದ ಬೊಮ್ಮನ್ ಮತ್ತು ಬೆಲ್ಲಿ ದಂಪತಿ ನಿರ್ದೇಶಕರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ದಿ ಎಲಿಫೆಂಟ್ ವಿಸ್ಪರರ್ಸ್, ಆನೆಗಳು ಮತ್ತು ಅವುಗಳ ಪಾಲಕರ ನಡುವಿನ ಸಂಬಂಧವನ್ನು ಮನಮಿಡಿಯುವಂತೆ ಚಿತ್ರಿಸಿತ್ತು. ಆನೆ ಮತ್ತು ಪಾಲಕರ ನಂಟನ್ನು ಅಚ್ಚುಕಟ್ಟಾಗಿ ಚಿತ್ರೀಕರಿಸಿದ್ದು ಇಡೀ ವಿಶ್ವದ ಗಮನ ಸೆಳೆದಿತ್ತು. ಇದೀಗ ಈ ಕಿರುಚಿತ್ರದಲ್ಲಿ ಅಭಿನಯಿಸಿದ್ದ ಬೊಮ್ಮನ್ ಮತ್ತು ಬೆಲ್ಲಿ ಅವರೇ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಬೊಮ್ಮನ್, ಬೆಲ್ಲಿ ದಂಪತಿ ದಿ ಎಲಿಫೆಂಟ್ ವಿಸ್ಪರರ್ಸ್ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವಿಸ್‌ಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಅದರಲ್ಲಿ ನಮಗೆ ಸಾಕ್ಷ್ಯ ಚಿತ್ರದಲ್ಲಿ ಅಭಿನಯಿಸಿದರೆ ಬಂದ ಲಾಭದಲ್ಲಿ ಮನೆ, ವಾಹನ, ಸಾಕಷ್ಟು ದೊಡ್ಡ ಮೊತ್ತ ಹಣಕಾಸಿನ ಸಹಾಯ, ಮೊಮ್ಮಗಳ ಶಿಕ್ಷಣಕ್ಕೆ ಸಹಾಯ ಮಾಡುವ ಭರವಸೆಯನ್ನು ನೀಡಲಾಗಿತ್ತು. ಆದಾಯದ ಆಧಾರದ ಮೇಲೆ ಅವುಗಳು ನಮಗೆ ಸಂದಾಯ ಆಗಿಲ್ಲ. ಹೀಗಾಗಿ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವಿಸ್ ಅವರಿಂದ ಬರೋಬ್ಬರಿ ₹2 ಕೋಟಿಯ ಸಂಭಾವನೆಯನ್ನು ಬಯಸುತ್ತಿದ್ದಾರೆ ಎನ್ನಲಾಗಿದೆ.
ಲೀಗಲ್ ನೋಟಿಸ್‌ನಲ್ಲಿ ದಿ ಎಲಿಫೆಂಟ್ ವಿಸ್ಪರರ್ಸ್‌ನಲ್ಲಿ ಬೊಮ್ಮನ್, ಬೆಲ್ಲಿ ದಂಪತಿ ದಂಪತಿಯನ್ನು ನಿಜವಾದ ಹೀರೋಗಳೆಂದು ಪರಿಚಯಿಸಲಾಗಿದೆ. ಆದ್ರೆ, ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಅವರಿಗೆ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವಿಸ್ ಅವರೇ ಎಲ್ಲಾ ಹಣಕಾಸಿನ ಪ್ರಯೋಜನಗಳನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ನಮಗೆ ನಿರಾಶೆಯಾಗಿದೆ. ದಿ ಎಲಿಫೆಂಟ್ ವಿಸ್ಪರರ್ಸ್‌ನಿಂದ ಬಂದ ಲಾಭದ ಒಂದು ಭಾಗವನ್ನು ನೀಡಲು ನಿರಾಕರಿಸಿದ್ದಾರೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಈ ಗಂಭೀರ ಆರೋಪವನ್ನು ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವಿಸ್ ಅವರು ನಿರಾಕರಿಸಿದ್ದು, ನಮ್ಮಿಂದ ಯಾವುದೇ ಮೋಸ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಲೀಗಲ್ ನೋಟಿಸ್ ನೀಡುವ ಮೂಲಕ ಬೊಮ್ಮನ್, ಬೆಲ್ಲಿ ದಂಪತಿ ಸಂಭಾವನೆಯನ್ನು ಕೇಳುತ್ತಿದ್ದಾರೆ. ಮುಂದೆ ಇವರ ಹೋರಾಟಕ್ಕೆ ಜಯ ಸಿಗುತ್ತಾ ಅನ್ನೋದೇ ಸದ್ಯದ ಪ್ರಶ್ನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ