newsfirstkannada.com

ಸಿಎಂ ಸಿದ್ದರಾಮಯ್ಯಗೆ ಅತಿ ದೊಡ್ಡ ಕಾನೂನು ಸಂಕಷ್ಟ? ಯಾವ ಸೆಕ್ಷನ್‌ ಏನೇನು ಹೇಳುತ್ತೆ?

Share :

Published August 17, 2024 at 4:02pm

Update August 17, 2024 at 4:04pm

    ಸಿಎಂ ವಿರುದ್ಧ ಗವರ್ನರ್ ಥಾವರ್ ಚಂದ್ ಗೆಹ್ಲೋಟ್ ಖಡಕ್ ಆದೇಶ

    ಸರ್ಕಾರಿ ಅಧಿಕಾರಿ ಸಂಬಳ ಬಿಟ್ಟು ಅಕ್ರಮವಾಗಿ ಲಾಭ ಪಡೆದ ಆರೋಪ

    ಸಿಎಂ ಸಿದ್ದರಾಮಯ್ಯ ಅವರಿಗೆ ಎದುರಾಗಿದೆ ಅತಿದೊಡ್ಡ ಕಾನೂನು ಸಂಕಷ್ಟ!

ಮೈಸೂರಿನ ಮುಡಾ ಅಕ್ರಮ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಕಾನೂನಿನ ಸಂಕಷ್ಟ ಎದುರಾಗಿದೆ. ಗವರ್ನರ್ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರೋದು ರಾಜ್ಯ ರಾಜಕೀಯಕ್ಕೆ ಶೇಕ್ ಆಗುವಂತೆ ಮಾಡಿದೆ.

ಇದನ್ನೂ ಓದಿ: ‘ರಾಜೀನಾಮೆ ಯಾಕೆ ಕೊಡಬೇಕು’- ಗವರ್ನರ್‌ ಪ್ರಾಸಿಕ್ಯೂಷನ್‌ಗೆ ಸಿಎಂ ಸಿದ್ದರಾಮಯ್ಯ ಖಡಕ್ ರಿಯಾಕ್ಷನ್!

ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಾಹಂ ನೀಡಿದ್ದ ದೂರು ಆಧರಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಆದೇಶ ನೀಡಿದ ಬಳಿಕ ಸಿಎಂ ಸಿದ್ದರಾಮಯ್ಯ ಅವರ ಲೀಗಲ್ ಟೀಮ್ ಕಾನೂನು ಹೋರಾಟಕ್ಕೆ ಸಿದ್ಧವಾಗುತ್ತಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿ.. ತುರ್ತು ಸುದ್ದಿಗೋಷ್ಟಿ ನಡೆಸಿದ ಡಿ.ಕೆ ಶಿವಕುಮಾರ್‌ ಸವಾಲು; ಏನಂದ್ರು?

ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಬಳಿಕ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆದ್ರೆ ಯಾವ್ಯಾವ ಸೆಕ್ಷನ್‌ಗಳನ್ನು ಹಾಕಲಾಗುತ್ತೆ ಅನ್ನೋದು ಕುತೂಹಲ ಕೆರಳಿಸಿದೆ. ಇದೇ ವೇಳೆ ಆ ಸೆಕ್ಷನ್‌ಗಳು ಏನ್ ಹೇಳತ್ತೆ ಅನ್ನೋ ಸಂಪೂರ್ಣ ವಿವರ ಇಲ್ಲಿದೆ.

ಯಾವ್ಯಾವ ಸೆಕ್ಷನ್ ಅನ್ವಯ?
ಭ್ರಷ್ಟ್ರಾಚಾರ ತಡೆ ಕಾಯ್ದೆ ಸೆ.7: ಸರ್ಕಾರಿ ಅಧಿಕಾರಿ ಅಧಿಕೃತ ಸಂಬಳ ಬಿಟ್ಟು ಅಕ್ರಮವಾಗಿ ಲಾಭ ಪಡೆದ ಆರೋಪ
ಭ್ರಷ್ಟ್ರಾಚಾರ ತಡೆ ಕಾಯ್ದೆ ಸೆ.9 : ಲಾಭ ಪಡೆಯಲು ವೈಯಕ್ತಿಕ ಪ್ರಭಾವ
ಭ್ರಷ್ಟ್ರಾಚಾರ ತಡೆ ಕಾಯ್ದೆ ಸೆ.12: ಅಕ್ರಮವಾಗಿ ಪಡೆದ ಲಾಭಕ್ಕೆ ಶಿಕ್ಷೆ
ಭ್ರಷ್ಟ್ರಾಚಾರ ತಡೆ ಕಾಯ್ದೆ ಸೆ.12: ಅಕ್ರಮವಾಗಿ ಪಡೆದ ಲಾಭಕ್ಕೆ ದಂಡ

ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿನ ಯಾವ ಸೆಕ್ಷನ್‌ಗಳು?

BNS ಸೆ.59: ಪಬ್ಲಿಕ್ ಸರ್ವೆಂಟ್ ಅಕ್ರಮವನ್ನು ಮರೆ ಮಾಚುವುದು
BNS ಸೆ.61: ಅಪರಾಧಿಕ ಒಳ ಸಂಚು ಮಾಡಿದ ಆರೋಪ
BNS ಸೆ.62: ಮಾಡಿದ ಅಪರಾಧಕ್ಕೆ ಶಿಕ್ಷೆ ವಿಧಿಸುವುದು
BNS ಸೆ.201: ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ ಆರೋಪ
BNS ಸೆ.227: ಸುಳ್ಳು ಸಾಕ್ಷಿಗಳ ಸೃಷ್ಟಿಸಿದ ಆರೋಪ
BNS ಸೆ.228: ಸಾಕ್ಷಿಗಳನ್ನು ತಿರುಚಿರುವ ಆರೋಪ
BNS ಸೆ.229: ಸುಳ್ಳು ಸಾಕ್ಷಿ ಸೃಷ್ಟಿಸಿದ್ದಕ್ಕೆ ಶಿಕ್ಷೆ ಪ್ರಮಾಣ
BNS ಸೆ. 314: ಬೇರೆಯವರ ಆಸ್ತಿಯಲ್ಲಿ ಲಾಭ ಪಡೆದುಕೊಳ್ಳುವುದು
BNS ಸೆ. 316(5): ಪಬ್ಲಿಕ್ ಸರ್ವೆಂಟ್ ನಿಂದ ಅಪರಾಧಿಕ ನಂಬಿಕೆ ದ್ರೋಹ
BNS ಸೆ. 318(2): ವಂಚನೆ ಮಾಡಿದ್ದಕ್ಕೆ ಶಿಕ್ಷೆ ಪ್ರಮಾಣ
BNS ಸೆ. 318(3): ತಿಳಿದು ವಂಚನೆ ಮಾಡಿದ್ದಕ್ಕೆ ಶಿಕ್ಷೆಯ ಪ್ರಮಾಣ
BNS ಸೆ. 319 : ಬೇರೆಯವರ ಹೆಸರಿನಲ್ಲಿ ವಂಚನೆ ಮಾಡುವುದು

BNS ಸೆ. 322 : ಸುಳ್ಳು ದಾಖಲೆಗಳ ಮೇಲೆ ಪ್ರಾಪರ್ಟಿ ವರ್ಗಾವಣೆ
BNS ಸೆ. 324 : ಉದ್ದೇಶಪೂರ್ವಕವಾಗಿ ನಷ್ಟವನ್ನುಂಟು ಮಾಡುವುದು
BNS ಸೆ. 324 (2) : ಉದ್ದೇಶಪೂರ್ವಕವಾಗಿ ನಷ್ಟಕ್ಕೆ ಶಿಕ್ಷೆಯ ಪ್ರಮಾಣ
BNS ಸೆ. 324 (3): ಸರ್ಕಾರದ ಭೂಮಿ ಕಬಳಿಸಿ ನಷ್ಟಕ್ಕೆ ಶಿಕ್ಷೆ ಪ್ರಮಾಣ
BNS ಸೆ. 335 : ಸುಳ್ಳು ದಾಖಲೆ ಸೃಷ್ಟಿ ಮಾಡಿದ ಆರೋಪ
BNS ಸೆ. 336 : ಪೋರ್ಜರಿ
BNS ಸೆ. 338 : ಪೋರ್ಜರಿ ಆಸ್ತಿ ದಾಖಲೆಗಳ ಸೃಷ್ಟಿ
BNS ಸೆ. 340 : ನಕಲಿ ದಾಖಲೆಗಳ ಅಸಲಿ ಅಂತ ಬಳಕೆ ಆರೋಪ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಎಂ ಸಿದ್ದರಾಮಯ್ಯಗೆ ಅತಿ ದೊಡ್ಡ ಕಾನೂನು ಸಂಕಷ್ಟ? ಯಾವ ಸೆಕ್ಷನ್‌ ಏನೇನು ಹೇಳುತ್ತೆ?

https://newsfirstlive.com/wp-content/uploads/2024/08/Cm-Siddaramaiah-Governer.jpg

Load More