Advertisment

Rohit bal: ಭಾರತದ ಖ್ಯಾತ ಫ್ಯಾಷನ್ ಡಿಸೈನರ್‌ ರೋಹಿತ್ ಬಾಲ್ ಇನ್ನಿಲ್ಲ.. ಬಾಲಿವುಡ್ ಕಂಬನಿ!

author-image
Veena Gangani
Updated On
Rohit bal: ಭಾರತದ ಖ್ಯಾತ ಫ್ಯಾಷನ್ ಡಿಸೈನರ್‌ ರೋಹಿತ್ ಬಾಲ್ ಇನ್ನಿಲ್ಲ.. ಬಾಲಿವುಡ್ ಕಂಬನಿ!
Advertisment
  • ಭಾರತದ ಖ್ಯಾತ ಫ್ಯಾಶನ್ ಡಿಸೈನರ್ ರೋಹಿತ್ ಬಾಲ್ ಸಾವು
  • 63ನೇ ವಯಸ್ಸಿನಲ್ಲಿ ಉಸಿರು ನಿಲ್ಲಿಸಿದ ಖ್ಯಾತ ಫ್ಯಾಶನ್ ಡಿಸೈನರ್
  • ರೋಹಿತ್ ಬಾಲ್ ಸಾವಿನ ಸುದ್ದಿ ಕೇಳಿ ಇಡೀ ಬಾಲಿವುಡ್​ ಮಂದಿ ಶಾಕ್

ಭಾರತದ ಖ್ಯಾತ ಫ್ಯಾಶನ್ ಡಿಸೈನರ್ ರೋಹಿತ್ ಬಾಲ್ ಮೃತಪಟ್ಟಿದ್ದಾರೆ. ಎಲ್ಲ ವರ್ಗದವರಿಗೂ ಒಟ್ಟೆಯನ್ನು ವಿನ್ಯಾಸ ಮಾಡುತ್ತಿದ್ದ ಫ್ಯಾಶನ್ ಡಿಸೈನರ್ ರೋಹಿತ್ ಬಾಲ್ ಅವರು ಹೃದಯಾಘಾತದಿಂದ ದಕ್ಷಿಣ ದೆಹಲಿಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

Advertisment

ಇದನ್ನೂ ಓದಿ:ಫ್ಯಾನ್ಸ್​ ಊಹಿಸಿದ್ದು ನಿಜವಾಗಿದೆ.. ಕನ್ನಡ ರಾಜ್ಯೋತ್ಸವ ದಿನವೇ ಗುಡ್​ನ್ಯೂಸ್​ ಕೊಟ್ಟ ಹರಿಪ್ರಿಯಾ ವಸಿಷ್ಠ ಜೋಡಿ

ಜನಪ್ರಿಯ ಫ್ಯಾಷನ್‌ ಡಿಸೈನರ್‌ ಆಗಿರೋ ರೋಹಿತ್‌ ಬಾಲ್‌ ನಿಧನ ಆಗಿದ್ದಾರೆ. ರೋಹಿತ್​ ಬಾಲ್​ಗೆ 63 ವರ್ಷ ವಯಸ್ಸಾಗಿತ್ತು. ಫ್ಯಾಷನ್‌ ಡಿಸೈನ್‌ ಕೌನ್ಸಿಲ್‌ ಆಫ್‌ ಇಂಡಿಯಾ ರೋಹಿತ್‌ ಬಾಲ್‌ ಅವರ ನಿಧನವನ್ನು ಖಚಿತಪಡಿಸಿದೆ. ಇನ್ನೂ ಫ್ಯಾಶನ್ ಡಿಸೈನರ್ ರೋಹಿತ್ ಬಾಲ್ ಸಾವಿನ ಸುದ್ದಿ ಕೇಳಿ ಇಡೀ ಬಾಲಿವುಡ್​ ಮಂದಿ ಕಂಬನಿ ಮಿಡಿಯುತ್ತಿದ್ದಾರೆ.

publive-image

ಈ ಬಗ್ಗೆ ಎಫ್‌ಡಿಸಿಐ ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಹೀಗೆ ಬರೆದುಕೊಂಡಿದೆ ‘ಲೆಜೆಂಡರಿ ಡಿಸೈನರ್ ರೋಹಿತ್ ಬಾಲ್ ಅವರ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದೇವೆ. ಅವರು ಫ್ಯಾಷನ್ ಡಿಸೈನ್ ಕೌನ್ಸಿಲ್ ಆಫ್ ಇಂಡಿಯಾದ (FDCI) ಸ್ಥಾಪಕ ಸದಸ್ಯರಾಗಿದ್ದರು. ಆಧುನಿಕ ಸಂವೇದನೆಗಳೊಂದಿಗೆ ಸಾಂಪ್ರದಾಯಿಕ ಮಾದರಿಗಳನ್ನು ತಯಾರಿಸುವ ವಿಶಿಷ್ಟ ಮಾದರಿಗೆ ಅವರು ಹೆಸರವಾಸಿ. ಬಾಲ್ ಅವರ ಈ ವಿಶಿಷ್ಟ ವಿನ್ಯಾಸ ಭಾರತೀಯ ಫ್ಯಾಷನ್ ಅನ್ನು ಮರು ವ್ಯಾಖ್ಯಾನಿಸಿದೆ ಮತ್ತು ಈ ತಲೆಮಾರುಗಳಿಗೆ ಸ್ಫೂರ್ತಿ ನೀಡಿದೆ. ಅವರ ಕಲಾತ್ಮಕತೆ, ನಾವೀನ್ಯತೆಯ ಪರಂಪರೆ ಮತ್ತು ಮುಂದಾಲೋಚನೆಯು ಫ್ಯಾಷನ್ ಜಗತ್ತಿನಲ್ಲಿ ಸದಾ ಜೀವಂತವಾಗಿರುತ್ತದೆ’ ಎಂದು ತಿಳಿಸಿದೆ.

Advertisment

ಇನ್ನೂ, ರೋಹಿತ್ ಬಾಲ್ ಅವರು ಅಬಟ್ಟೆ ಮಾತ್ರವಲ್ಲದೇ ಆಭರಣ ವಿನ್ಯಾಸ ಪ್ರಪಂಚಕ್ಕೂ ಕಾಲಿಟ್ಟಿದ್ದರು. ಆಭರಣದಲ್ಲಿ ಕಮಲ ಮತ್ತು ನವಿಲಿನ ಆಕಾರಗಳ ಬಳಕೆಯನ್ನು ಜನಪ್ರಿಯಗೊಳಿಸಿದ್ದಾರೆ. ಅವರು ಲಂಡನ್, ಪ್ಯಾರಿಸ್, ನ್ಯೂಯಾರ್ಕ್, ಸಿಂಗಾಪುರ್, ಮಾಸ್ಕೋ, ಜಕಾರ್ತಾ, ಕೊಲಂಬೊ, ಸಾವೊ ಪಾಲೊ, ಮ್ಯೂನಿಚ್, ಜಿನೀವಾ ಮತ್ತು ಭಾರತದ ಎಲ್ಲ ಪ್ರಮುಖ ನಗರಗಳಲ್ಲಿ ಫ್ಯಾಷನ್ ಶೋಗಳನ್ನು ನಡೆಸಿದ್ದಾರೆ.

publive-image

ಎರಡು ವಾರಗಳ ಹಿಂದೆಯಷ್ಟೇ ಮುಂಬೈಯಲ್ಲಿ ನಡೆದ ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ರೋಹಿತ್ ಬಾಲ್‌ ತಮ್ಮ ಅಂತಿಮ ಕಲೆಕ್ಷನ್‌ ಪ್ರಸ್ತುತಪಡಿಸಿದ್ದರು. ಕಳೆದ ಡಿಸೆಂಬರ್‌ನಲ್ಲಿ ಹೃದಯದ ಸಮಸ್ಯೆ ಕಾಣಿಸಿಕೊಂಡ ಬಾಲ್ ಅವರನ್ನು ಗುರುಗ್ರಾಮದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿತ್ತು. ಕೊನೆಯ ಕ್ಷಣದಲ್ಲಿ ಬಾಲ್​ ಅವರನ್ನು ಉಳಿಸಲು ವೈದ್ಯರು ಎರಡು ಗಂಟೆಗಳ ಕಾಲ ತಮ್ಮ ಕೈಲಾದಷ್ಟು ಪ್ರಯತ್ನಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರೋಹಿತ್ ಬಾಲ್ ನಿಧನರಾಗಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment