ದೀರ್ಘಕಾಲದಿಂದ ಕರುಳಿನ ಕ್ಯಾನ್ಸರ್ನಿಂದ ಬಳಲುತ್ತಿದ್ದ ಕ್ರಿಕೆಟರ್
ಲೆಜೆಂಡರಿ ಕ್ರಿಕೆಟರ್ ನಿಧನಕ್ಕೆ ದುಃಖತಪ್ತರಾದ ಸಹ ಆಟಗಾರರು
ಅಧಿಕೃತ ಎಕ್ಸ್ನಲ್ಲಿ ಫೋಟೋ ಶೇರ್ ಮಾಡಿ ಕ್ರಿಕೆಟರ್ಸ್ ಸಂತಾಪ
ಜಿಂಬಾಬ್ವೆಯ ಲೆಜೆಂಡರಿ ಕ್ರಿಕೆಟರ್ ಹಾಗೂ ಬಾಂಗ್ಲಾ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಹೀತ್ ಸ್ಟ್ರೀಕ್ (49) ನಿಧನ ಹೊಂದಿದ್ದಾರೆ. ದೀರ್ಘಕಾಲದಿಂದ ಕರುಳಿನ ಕ್ಯಾನ್ಸರ್ನಿಂದ ಬಳುತ್ತಿದ್ದ ಕ್ರಿಕೆಟರ್ ದಕ್ಷಿಣ ಆಫ್ರಿಕಾದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇಂದು ನಿಧನ ಹೊಂದಿದ್ದಾರೆ ಎಂದು ಹೇಳಲಾಗಿದೆ.
ಹೀತ್ ಸ್ಟ್ರೀಕ್ ಸಾವಿನಿಂದ ಅವರ ಕುಟುಂಬ ದುಃಖದಲ್ಲಿ ಮುಳುಗಿದ್ದು, ಸಹ ಆಟಗಾರರು ಕೂಡ ಈ ಬಗ್ಗೆ ದುಃಖತಪ್ತರಾಗಿದ್ದಾರೆ. ಅಲ್ಲದೇ ಭಾರತದ ಕ್ರಿಕೆಟರ್ಸ್ ಆದ ವಿವಿಎಸ್ ಲಕ್ಷ್ಮಣ್, ರವಿಚಂದ್ರನ್ ಅಶ್ವಿನ್, ದೊಡ್ಡ ಗಣೇಶ್ ಸೇರಿದಂತೆ ಇನ್ನು ಹಲವರು ತಮ್ಮ ಅಧಿಕೃತ ಎಕ್ಸ್ನಲ್ಲಿ ಫೋಟೋ ಶೇರ್ ಮಾಡಿ ಸಂತಾಪ ಸೂಚಿಸಿದ್ದಾರೆ.
https://twitter.com/VVSLaxman281/status/1694183557965779331
https://twitter.com/ashwinravi99/status/1694162453821825310
ಜಿಂಬಾಬ್ವೆಯ ಲೆಜೆಂಡರಿ ಹೀತ್ ಸ್ಟ್ರೀಕ್ 65 ಟೆಸ್ಟ್, 189 ಏಕದಿನ ಮ್ಯಾಚ್ಗಳನ್ನು ಆಡಿದ್ದು ಒಟ್ಟು 4,933 ರನ್ಗಳನ್ನು ಗಳಿಸಿದ್ದರು. ಅಲ್ಲದೇ ಉತ್ತಮ ಆಲ್ರೌಂಡರ್ ಆದ ಇವರು ಎಲ್ಲ ವಿಧದ ಕ್ರಿಕೆಟ್ನಲ್ಲಿ 455 ವಿಕೆಟ್ಗಳನ್ನು ಉರುಳಿಸಿದ್ದರು. ಇಲ್ಲಿವರೆಗೆ ಇವರ ರೆಕಾರ್ಡ್ ಅನ್ನು ಜಿಂಬಾಬ್ವೆ ಪ್ಲೇಯರ್ಸ್ ಯಾರೂ ಕೂಡ ಬ್ರೇಕ್ ಮಾಡಿಲ್ಲ. ಅಂದರೆ ಇವರು ಜಿಂಬಾಬ್ವೆ ಪರ ಏಕದಿನದಲ್ಲಿ 2,943 ರನ್ ಹಾಗೂ 239 ವಿಕೆಟ್ಗಳನ್ನು ಕಬಳಿಸಿದ್ದಾರೆ. ಅಲ್ಲದೇ ಟೆಸ್ಟ್ನಲ್ಲಿ 1,990 ರನ್ ಕಲೆ ಹಾಕಿದ್ದು 216 ವಿಕೆಟ್ಗಳನ್ನು ಗಳಿಸಿದ್ದರು. ಇನ್ನು ಟೆಸ್ಟ್ನಲ್ಲಿ 127 ರನ್ ಬಾರಿಸಿರುವುದು ವೈಯಕ್ತಿಕ ಅತಿ ಹೆಚ್ಚು ರನ್ ಆದ್ರೆ, ಏಕದಿನದಲ್ಲಿ 79 ರನ್ ವೈಯಕ್ತಿಕ ಗರಿಷ್ಠ ರನ್ ಆಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ