/newsfirstlive-kannada/media/post_attachments/wp-content/uploads/2024/05/HEALTH_LEMON.jpg)
ನಿಂಬೆ ಹಣ್ಣು ಅನ್ನೋದು ಪ್ರಕೃತಿಯ ಅಮೂಲ್ಯವಾದ ಕೊಡುಗೆ. ಅದರಲ್ಲೂ ಜನರಿಗೆ ಉಪಯೋಗ ಆಗೋ ವಿಟಮಿನ್ C, ಆಂಟಿಆಕ್ಸಿಡೆಂಟ್ ಮತ್ತು ಪೋಷಕಾಂಶಗಳನ್ನು ಇದರಲ್ಲಿ ಕಾಣಬಹುದು. ಇದು ನಮ್ಮ ದೇಹಕ್ಕೆ ಅನೇಕ ಆರೋಗ್ಯದ ಲಾಭಗಳನ್ನು ಒದಗಿಸುತ್ತದೆ.
ನಿಂಬೆ ಸೇವನೆಯಿಂದ ಆಗೋ ಲಾಭಗಳೇನು?
ರೋಗ ನಿರೋಧಕ ಶಕ್ತಿ ಹೆಚ್ಚಳ
ನಿಂಬೆ ವಿಟಮಿನ್ C ಹೊಂದಿದೆ. ಇದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶೀತ, ಜ್ವರ, ಕಫ ಇತ್ಯಾದಿಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆ ಸುಗಮ
ಬೆಚ್ಚಗಿನ ನೀರಿನೊಂದಿಗೆ ನಿಂಬೆ ರಸ ಬೆರೆಸಿ ಕುಡಿಯೋದರಿಂದ ನಮ್ಮ ಜೀರ್ಣಕ್ರಿಯೆ ಸುಧಾರಿಸುತ್ತದೆ. ಅಜೀರ್ಣತೆ, ವಾತ, ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಇದು ಉತ್ತಮ ಪರಿಹಾರ ಆಗಿದೆ.
ತೂಕ ಕಡಿಮೆಗೆ ಮದ್ದು
ನಿಂಬೆ ಪಾನೀಯು ದೇಹದಲ್ಲಿನ ಕೊಬ್ಬು ಕರಗಿಸಲು ಸಹಾಯಕ. ಇದು ದೇಹದ ಮೆಟಾಬಾಲಿಸಂ ವೇಗವನ್ನು ಹೆಚ್ಚಿಸುವ ಮೂಲಕ ತೂಕ ನಿಯಂತ್ರಿಸಲು ನೆರವಾಗುತ್ತದೆ.
ಚರ್ಮದ ಆರೋಗ್ಯ ಸುಧಾರಣೆ
ಇನ್ನು, ನಿಂಬೆ ರಸದಲ್ಲಿ ಇರುವ ಆಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ C ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಜತೆಗೆ ಮೊಡವೆ ಮತ್ತು ಕಪ್ಪುಮಚ್ಚೆ ನಿವಾರಣೆಗೆ ಸಹಕಾರಿ ಆಗುತ್ತದೆ.
ರಕ್ತ ಶುದ್ಧೀಕರಣ
ನಿಂಬೆ ರಕ್ತವನ್ನು ಶುದ್ಧೀಕರಿಸುವ ಗುಣವನ್ನು ಹೊಂದಿದೆ. ದೇಹದ ಒಳಚೈತನ್ಯವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದರಿಂದ ಇನ್ನಷ್ಟು ಲಾಭಗಳು ಇವೆ ಅನ್ನೋದು ವಾಸ್ತವ.
ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿನೊಂದಿಗೆ ನಿಂಬೆ ರಸ ಬೆರೆಸಿ ಕುಡಿಯೋದರಿಂದ ಆರೋಗ್ಯ ಉತ್ತಮವಾಗುತ್ತದೆ. ನೈಸರ್ಗಿಕ ಮತ್ತು ಸಮತೋಲನ ಆಹಾರ ಶೈಲಿಯಲ್ಲೇ ನಿಂಬೆ ಸೇವನೆ ಮಾಡಿದರೆ ಇನ್ನಷ್ಟು ಲಾಭ ಇದೆ.
ಇದನ್ನೂ ಓದಿ:ಬಿಸಿಲಿಗೆ ಚರ್ಮದ ಬಣ್ಣ ಬದಲಾಗುತ್ತಾ? ಹಾಗಾದ್ರೆ ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಇಲ್ಲಿದೆ ಮನೆಮದ್ದು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ