newsfirstkannada.com

7 ವರ್ಷದ ಬಾಲಕಿ ಮೇಲೆ ಚಿರತೆ ದಾಳಿ; ನೋಡ ನೋಡುತ್ತಿದ್ದಂತೆ ಮಗಳನ್ನು ರಕ್ಷಿಸಿದ ತಂದೆ!

Share :

Published November 8, 2023 at 9:02am

Update November 8, 2023 at 9:03am

    ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿ ಮೇಲೆ ಚಿರತೆ ದಾಳಿ

    ಬಾಲಕಿ ಮೇಲೆ ದಾಳಿ ಮಾಡಿ ಹೊತ್ತೊಯ್ಯಲು ಚಿರತೆ ಯತ್ನ

    ದೊಣ್ಣೆಯಿಂದ ಚಿರತೆ ಬೆದರಿಸಿ ಮಗಳನ್ನ ರಕ್ಷಿಸಿದ ರಾಕೇಶ್

ತುಮಕೂರು: ಅಪ್ಪ ಅಂದ್ರೆ ಹಾಗೆ ಮಕ್ಕಳಿಗೆ ಏನೇ ಕಷ್ಟ ಎದುರಾದ್ರೂ ವಾರಿಯರ್ ತರ ನಿಂತು ಅವರನ್ನ ರಕ್ಷಿಸ್ತಾನೆ. ಇದೀಗ ಇದೇ ರೀತಿ ಮಗಳ ಪ್ರಾಣಕ್ಕೆ ಕುತ್ತು ಬಂದಾಗ ತಂದೆ ರಿಯಲ್ ಹೀರೋ ಆಗಿ ನಿಂತ ಪ್ರಸಂಗವೊಂದು ನಡೆದಿದೆ. ವನ್ಯ ಮೃಗದ ಬಾಯಿಗೆ ಆಹಾರವಾಗ್ತಿದ್ದ ಮಗಳ ಜೀವವನ್ನ ತಂದೆಯೇ ಕಾಪಾಡಿದ್ದಾನೆ.

ರಾಜ್ಯದಲ್ಲಿ ಕಾಡು ಅಳಿವಿನ ಅಂಚಿಗೆ ಬಂದಿದ್ಯಾ? ಹೀಗೊಂದು ಪ್ರಶ್ನೆ ಕಾಡೋಕೆ ಕಾರಣ ವನ್ಯ ಮೃಗಗಳು ನಾಡಿಗೆ ಎಂಟ್ರಿ ಕೊಡ್ತಿರೋದು. ಕಳೆದ ವಾರವಷ್ಟೇ ಬೆಂಗಳೂರಿನಲ್ಲಿ ಚಿರತೆಗಳ ಹಾವಳಿ ಶುರುವಾಗಿತ್ತು. ಇದೀಗ ಕಲ್ಪತರು ನಾಡಿನಲ್ಲಿ ಚಿರತೆಯೊಂದು ಬಾಲಕಿ ಮೇಲೆ ದಾಳಿ ಮಾಡಿದೆ. ಆದ್ರೆ, ಆಕೆಯ ತಂದೆಯ ಧೈರ್ಯ, ಸಾಹಸದಿಂದ ಚಿರತೆಯ ಬಾಯಿಯಿಂದ ಬಾಲಕಿ ಬದುಕುಳಿದಿದ್ದಾಳೆ.

ಕಾಡುಮೃಗದ ಬಾಯಿಂದ ಮಗಳನ್ನ ರಕ್ಷಿಸಿದ ಸಾಹಸಿ ತಂದೆ

ನಿನ್ನೆ ಮುಸ್ಸಂಜೆ ಸಮಯ ಪ್ರಾಣಿ ಪಕ್ಷಿಗಳೂ ಗೂಡು ಸೇರುವ ಹೊತ್ತು. ಈ ವೇಳೆ ಮನೆಯ ಅಂಗಳದಲ್ಲಿ ತನ್ನ ತಂದೆಯ ಜೊತೆ ಬಾಲಕಿ ಲೇಖನ ಆಟ ಆಡುತ್ತಿದ್ದಳು. ಆಗ ದಿಢೀರ್ ಅಂತ ಎಂಟ್ರಿ ಕೊಟ್ಟ ಚಿರತೆ ಬಾಲಕಿಯ ಮೇಲೆ ಯಮರೂಪಿಯಂತೆ ಎರಗಿತ್ತು. ಆಮೇಲೆ ನಡೆದಿದ್ದೇ ಮಹಾನ್ ಸಾಹಸ. ತುಮಕೂರು ತಾಲೂಕಿನ ಚಿಕ್ಕ ಬೆಳ್ಳಾವಿ ಗ್ರಾಮದ ಲೇಖನ ತಮ್ಮ ಮನೆಯ ಅಂಗಳದಲ್ಲಿ ತಂದೆ ರಾಕೇಶ್ ಜೊತೆ ಆಟವಾಡುತ್ತಿದ್ದಳು. ಈ ವೇಳೆ ಚಿರತೆ ಆಕೆಯ ಮೇಲೆ ಏಕಾಏಕಿ ದಾಳಿ ಮಾಡಿದೆ. ಚಿರತೆ ತನ್ನ ಮಗಳ ಮೇಲೆ ದಾಳಿ ಮಾಡಿದ್ದನ್ನ ಕಂಡ ತಂದೆ ರಾಕೇಶ್ ಹೆದರದೇ ಸಮಯಪ್ರಜ್ಞೆ ಮೆರೆದಿದ್ದಾರೆ. ಲೇಖನ ಮೇಲೆ ಚಿರತೆ ಅಟ್ಯಾಕ್ ಮಾಡ್ತಿದ್ದಂತೆ ದೊಣ್ಣೆಯಿಂದ ಹೊಡೆದು ಅದನ್ನ ಬೆದರಿಸಿದ್ದಾರೆ.

ಚಿರತೆಯ ಬಾಯಿಯಿಂದ ತಮ್ಮ ಮಗಳನ್ನ ರಕ್ಷಿಸಿದ್ದಾರೆ. ಇನ್ನೂ, ರಾಕೇಶ್ ಕೂಗಾಟ ಕೇಳಿ ಕೂಡಲೇ ಅಕ್ಕಪಕ್ಕದ ಮನೆಯವರು ಅಲ್ಲಿಗೆ ಧಾವಿಸಿದ್ದಾರೆ. ಜನ ಸೇರುತಿದ್ದಂತೆ ಮನೆಯ ಸಮೀಪದಲ್ಲಿದ್ದ ಚಿರತೆ ಪೊದೆಯೊಳಗೆ ಓಡಿಹೋಗಿದೆ. ಇನ್ನೂ ಮನೆಯೊಳಗಿದ್ದ ಲೇಖನ ತಾಯಿ ಓಡೋಡಿ ಬಂದು ಮಗಳನ್ನ ಕಂಡು ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನೂ ಚಿರತೆಯ ದಾಳಿಯಲ್ಲಿ ಲೇಖನಾಗೆ ಯಾವುದೇ ಹೆಚ್ಚಿನ ಅಪಾಯವಾಗಿಲ್ಲ. ಆದ್ರೆ ಬಾಲಕಿಯ ಎಡ ತೊಡೆಯ ಮೇಲೆ ಚಿರತೆ ಪರಚಿದ ಗಾಯಗಳಾಗಿವೆ. ಸದ್ಯ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಲೇಖನಾಗೆ ಚಿಕಿತ್ಸೆ ನಡೆಯುತ್ತಿದೆ.

ಚಿರತೆ ದಾಳಿ ನಡೆಸ್ತಿದ್ದಂತೆ ಬಾಲಕಿಯ ಪೋಷಕರು ಬೆಳ್ಳಾವಿ ಠಾಣೆಗೆ ದಾವಿಸಿದ್ದರು. ಬಳಿಕ ಪೊಲೀಸರು ಅರಣ್ಯ ಇಲಾಖೆಗೆ ಚಿರತೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ನಂತರ ಚಿರತೆ ಸೆರೆಹಿಡಿಯಲು ಚಿಕ್ಕ ಬೆಳ್ಳಾವಿ ಗ್ರಾಮಕ್ಕೆ ತೆರಳಿದ್ದಾರೆ. ಒಟ್ಟಾರೆ ಬಾಲಕಿ ಮೇಲೆ ದಾಳಿ ಮಾಡಿದ ಚಿರತೆಯನ್ನ ಕೂಡಲೇ ಸೆರೆಹಿಡಿಯುವಂತೆ ಪೋಷಕರು ಹಾಗೂ ಗ್ರಾಮಸ್ಥರು ಒತ್ತಾಯಿಸ್ತಿದ್ದಾರೆ. ಅದೇನೆ ಇರಲಿ ಮಗಳ ಮೇಲೆ ಎರಗಿದ್ದ ಕಾಡುಮೃಗವನ್ನ ಧೈರ್ಯದಿಂದ ಎದುರಿಸಿದ ತಂದೆಯ ಸಾಹಸವನ್ನ ಎಲ್ಲರೂ ಕೊಂಡಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

7 ವರ್ಷದ ಬಾಲಕಿ ಮೇಲೆ ಚಿರತೆ ದಾಳಿ; ನೋಡ ನೋಡುತ್ತಿದ್ದಂತೆ ಮಗಳನ್ನು ರಕ್ಷಿಸಿದ ತಂದೆ!

https://newsfirstlive.com/wp-content/uploads/2023/09/Bijnor_leopard.jpg

Load More