Advertisment

Tirupati: ತಿರುಪತಿ ಬೆಟ್ಟ ಹತ್ತುವ ಭಕ್ತರೇ ಎಚ್ಚರ; 6 ವರ್ಷದ ಬಾಲಕಿಯನ್ನು ಹೊತ್ತೊಯ್ದ ಚಿರತೆ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

author-image
admin
Updated On
Tirupati: ತಿರುಪತಿ ಬೆಟ್ಟ ಹತ್ತುವ ಭಕ್ತರೇ ಎಚ್ಚರ; 6 ವರ್ಷದ ಬಾಲಕಿಯನ್ನು ಹೊತ್ತೊಯ್ದ ಚಿರತೆ; ಸಿಸಿಟಿವಿಯಲ್ಲಿ ದೃಶ್ಯ ಸೆರೆ
Advertisment
  • ತಿರುಮಲದಲ್ಲಿ ಪಾದಚಾರಿ ಮಾರ್ಗ ಹತ್ತೋ ಭಕ್ತರೇ ಹುಷಾರ್‌!
  • ಪಾದಚಾರಿ ಮಾರ್ಗದಲ್ಲಿ ನಾಪತ್ತೆಯಾದ 6 ವರ್ಷದ ಲಕ್ಷಿತಾ
  • ಸಿಸಿಟಿವಿಯಲ್ಲಿ ಚಿರತೆ ಕಾಡಿಗೆ ಹೊತ್ತೊಯ್ದ ಭಯಾನಕ ದೃಶ್ಯ

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಪ್ರತಿ ದಿನ ಭಕ್ತಸಾಗರವೇ ತಿರುಮಲಕ್ಕೆ ಹರಿದು ಬರುತ್ತೆ. ನೇರ ತಿರುಮಲಕ್ಕೆ ರಸ್ತೆ ಮಾರ್ಗ ಇದ್ರೂ ಎಷ್ಟೋ ಭಕ್ತರು ಪಾದಚಾರಿ ಮಾರ್ಗದಲ್ಲಿ ಬೆಟ್ಟ ಹತ್ತಿ ಬಾಲಾಜಿಯ ಕೃಪೆಗೆ ಪಾತ್ರರಾಗುತ್ತಾರೆ. ಸಪ್ತಗಿರಿಯ ಮೆಟ್ಟಿಲುಗಳನ್ನ ಕಷ್ಟ ಪಟ್ಟು ಹತ್ತಿ ತಿಮ್ಮಪ್ಪನ ದರ್ಶನ ಪಡೆಯೋದು ಪುಣ್ಯ ಅಂತಾನೇ ಭಕ್ತರು ನಂಬುತ್ತಾರೆ. ತಿರುಪತಿಯ ಈ ಪಾದಚಾರಿ ಮಾರ್ಗದಲ್ಲಿ ಭಕ್ತರು ಬೆಚ್ಚಿ ಬೀಳಿಸೋ ಘಟನೆಯೊಂದು ನಡೆದಿದೆ.

Advertisment

ನಿನ್ನೆ ಸಂಜೆ ತಿರುಮಲದ ಆಲಿಪ್ಪಿರಿಯಲ್ಲಿ ಅನಾಹುತವೊಂದು ಸಂಭವಿಸಿದೆ. ಪಾದಚಾರಿ ಮಾರ್ಗದಲ್ಲಿ 6 ವರ್ಷದ ಲಕ್ಷಿತಾ ಅನ್ನೋ ಬಾಲಕಿ ತನ್ನ ಮನೆಯವರ ಜೊತೆ ಬೆಟ್ಟ ಹತ್ತುತ್ತಿದ್ದರು. ಮಾರ್ಗ ಮಧ್ಯೆ ಲಕ್ಷಿತಾ ಕಾಣೆಯಾಗಿದ್ದಾಳೆ. ಸುತ್ತಮುತ್ತ ಹುಡುಕಾಡಿದ ಮನೆಯವರು ಕಣ್ಣೀರು ಹಾಕುತ್ತಾ ದೂರು ಕೊಟ್ಟಿದ್ದಾರೆ. ಆಗ ಸಿಸಿಟಿವಿ ನೋಡಿದ ಪೊಲೀಸರಿಗೆ ಲಕ್ಷಿತಾಳನ್ನು ಚಿರತೆಯೊಂದು ಕಚ್ಚಿಕೊಂಡು ಕಾಡಿಗೆ ಹೋಗಿರೋದು ಗೊತ್ತಾಗಿದೆ. ಹೊತೊಯ್ದ ಚಿರತೆ ಬಾಲಕಿಯನ್ನು ಸಾಯಿಸಿದ್ದು, ಕಾಡಿನಲ್ಲಿ ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗಿದೆ. ಇಂದು ಪೊಲೀಸರಿಗೆ ಬಾಲಕಿಯ ಶವ ಪತ್ತೆಯಾಗಿದೆ.

[caption id="attachment_12735" align="aligncenter" width="800"]publive-image ತಿರುಮಲದಲ್ಲಿ ನಾಪತ್ತೆಯಾದ 6 ವರ್ಷದ ಬಾಲಕಿ ಲಕ್ಷಿತಾ[/caption]

6 ವರ್ಷದ ಬಾಲಕಿ ಲಕ್ಷಿತಾ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯವರು ಎನ್ನಲಾಗಿದೆ. ಚಿರತೆ ದಾಳಿಯಿಂದ ಲಕ್ಷಿತಾ ಸಾವನ್ನಪ್ಪಿರೋದು ಖಚಿತವಾಗಿದೆ. ತಿರುಮಲದಲ್ಲಿ ಬಾಲಕಿಯನ್ನು ಕಳೆದುಕೊಂಡಿರೋ ಹೆತ್ತವರ ಆಕ್ರಂದನ ಮುಗಿಲುಮುಟ್ಟಿದೆ. ಈ ಘಟನೆಯಿಂದ ತಿರುಪತಿಗೆ ಹೋಗುವ ಪಾದಚಾರಿ ಮಾರ್ಗ ಭಕ್ತರಿಗೆ ಡೇಂಜರ್ ಎನ್ನಲಾಗಿದೆ. ಕೆಲ ದಿನಗಳ ಹಿಂದಷ್ಟೇ ಇದೇ ರೀತಿ ಚಿರತೆಯೊಂದು ಓರ್ವ ಬಾಲಕನ ಮೇಲೆ ದಾಳಿ ಮಾಡಿತ್ತು. ಇದರಿಂದ ಬಾಲಕನಿಗೆ ಗಾಯವಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು.

Advertisment

ತಿರುಮಲ ಪಾದಚಾರಿ ಮಾರ್ಗದಲ್ಲಿ ಬರೀ ಚಿರತೆಗಳ ಹಾವಳಿ ಅಷ್ಟೇ ಅಲ್ಲ, ಕರಡಿಗಳ ಓಡಾಟವೂ ಸಿಕ್ಕಾಪಟ್ಟೆ ಇದೆ. ಕರಡಿಗಳು ಭಕ್ತರ ಮೇಲೆ ದಾಳಿ ಮಾಡಿದ ಘಟನೆಗಳು ವರದಿಯಾಗಿದೆ. ಇದರಿಂದ ಪಾದಚಾರಿ ಮಾರ್ಗದಲ್ಲಿ ವನ್ಯಮೃಗಗಳಿಂದ ಭಕ್ತರಿಗೆ ಸೂಕ್ತ ರಕ್ಷಣೆ ಇಲ್ಲ ಎನ್ನಲಾಗಿದೆ. ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ಭಕ್ತರ ರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ. ಈ ಘಟನೆಗಳಿಂದ ತಿರುಮಲದ ಪಾದಚಾರಿ ಮಾರ್ಗ ಭಕ್ತರಿಗೆ ಸೇಫ್ ಅಲ್ಲ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment