newsfirstkannada.com

ಪೊಲೀಸ್ರರ ಭಾರ ತಾಳಲಾರದೆ ಸ್ಥಳದಲ್ಲೇ ಚಿರತೆ ಸಾವು.. ಅಸಲಿಗೆ ನಡೆದಿದ್ದೇನು?

Share :

Published February 23, 2024 at 7:34pm

  ಸಂಭಾಲ್​ನಲ್ಲಿ ಮನೆಯೊಂದಕ್ಕೆ ನುಗ್ಗಿದ ಚಿರತೆ ದಾರುಣ ಸಾವು

  ಸ್ಥಳಕ್ಕೆ ಹೋದ ಪೊಲೀಸರ ಮೇಲೆಯೇ ದಾಳಿ ನಡೆಸಿದ ಚಿರತೆ!

  ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ವಿಡಿಯೋ

ಲಕ್ನೋ: ಮನೆಯೊಂದಕ್ಕೆ ನುಗ್ಗಿದ್ದ ಚಿರತೆಯನ್ನು ಪೊಲೀಸರು ಉಸಿರುಗಟ್ಟಿಸಿ ಸಾಯಿಸಿರೋ ಘಟನೆ ಸಂಭಾಲ್‌ನಲ್ಲಿ ನಡೆದಿದೆ.
ಸಂಭಾಲ್‌ನ ರಸುಲ್‌ಪುರ ಧಾತ್ರಾ ಗ್ರಾಮದ ಮನೆಯೊಂದಕ್ಕೆ ಚಿರತೆ ನುಗ್ಗಿದೆ. ಆ ವೇಳೆ ಮನೆಯಲ್ಲಿದ್ದವರು ಕೂಡಲೇ ಅಡಗಿ ಕುಳಿತು ಪೊಲೀಸರು ಮತ್ತು ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ನಂತರ ಪೊಲೀಸರು ದೌಡಾಯಿಸಿ ಚಿರತೆಯಿದ್ದ ಜಾಗದ ಸುತ್ತ ಮುತ್ತ ಕಾರ್ಯಾಚರಣೆ ನಡೆಸಿದ್ದರು. ಆಗ ಚಿರತೆ ಕುಳಿತುಕೊಂಡಿದ್ದ ಮಂಚವನ್ನು ಪಲ್ಟಿ ಮಾಡಿದ್ದು ಅದನ್ನು ಸೆರೆಹಿಡಿಯಲು ಮುಂದಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ವೇಳೆ ಚಿರತೆ ತನ್ನ ಪಂಜದಿಂದ ಪೊಲೀಸ್ ಅಧಿಕಾರಿ ಮೇಲೆ ದಾಳಿ ಮಾಡಿದೆ. ಇದರಿಂದ ಪೊಲೀಸ್ ಅಧಿಕಾರಿ ಗಂಭೀರವಾಗಿ ಗಾಯಗೊಂಡಿದ್ದರು.

ಕೂಡಲೇ ಅರಣ್ಯ ಸಿಬ್ಬಂದಿ ಕಡೆಗೆ ಚಿರತೆಯನ್ನು ಕದಲದಂತೆ ಮಾಡುವಾಗ ಅದರ ಮೇಲೆ ಸುಮಾರು ಹತ್ತಕ್ಕೂ ಹೆಚ್ಚು ಮಂದಿ ಪೊಲೀಸರು ನಿಂತುಕೊಂಡಿದ್ದಾರೆ. ಆಗ ಅವರ ಭಾರ ತಾಳಲಾರದೆ ಚಿರತೆ ಸ್ಥಳದಲ್ಲೇ ಸಾವನ್ನಪ್ಪಿದೆ. ಇನ್ನೂ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೊಲೀಸ್ರರ ಭಾರ ತಾಳಲಾರದೆ ಸ್ಥಳದಲ್ಲೇ ಚಿರತೆ ಸಾವು.. ಅಸಲಿಗೆ ನಡೆದಿದ್ದೇನು?

https://newsfirstlive.com/wp-content/uploads/2024/02/death-2024-02-23T191129.756.jpg

Load More