ಬೆಂಗಳೂರಿಗೆ ಮತ್ತೆ ಚಿರತೆ ಭಯ.. ಈಗ ಕಾಣಿಸಿಕೊಂಡಿದ್ದು ಎಲ್ಲಿ?

author-image
Ganesh
Updated On
ಬೆಂಗಳೂರಿಗೆ ಮತ್ತೆ ಚಿರತೆ ಭಯ.. ಈಗ ಕಾಣಿಸಿಕೊಂಡಿದ್ದು ಎಲ್ಲಿ?
Advertisment
  • ಚಿರತೆ ಕಂಡು ಭಯಭೀತರಾದ ಸ್ಥಳೀಯ ನಿವಾಸಿಗಳು
  • ಮನೆ ಮುಂದೆ ನಾಯಿಗಳನ್ನು ತಿಂದು ಹಾಕಿರುವ ಚಿರತೆ
  • ಅರಣ್ಯಾಧಿಕಾರಿಗಳು ಚಿರತೆ ಹಿಡಿಯುವಲ್ಲಿ ವಿಫಲ

ಬೆಂಗಳೂರು: ನಗರದಲ್ಲಿ ಮತ್ತೆ‌ ಚಿರತೆ ಪ್ರತ್ಯಕ್ಷವಾಗಿದ್ದು, ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದಾರೆ. ಕನಕಪುರ ಹೊಸಹಳ್ಳಿ ಗ್ರಾಮದ ಸುತ್ತಮುತ್ತ ಚಿರತೆ ಓಡಾಡುತ್ತಿದೆ.

ಕಳೆದ ಒಂದೂವರೆ ತಿಂಗಳಿಂದ ಚಿರತೆ ಕಂಡು ಸ್ಥಳೀಯರು ಭಯದಿಂದ ವಾಸ ಮಾಡ್ತಿದ್ದಾರೆ. ಕನಕಪುರ ಮುಖ್ಯ ರಸ್ತೆಯ ತುರಹಳ್ಳಿ ಫಾರೆಸ್ಟ್ ಸುತ್ತಮುತ್ತ ಚಿರತೆ ಠಿಕಾಣಿ ಹೂಡಿದೆ. ಹೀಗಾಗಿ ಹೊಸಹಳ್ಳಿ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ:ಸಿನಿ ರಸಿಕರಿಗೆ ಭರ್ಜರಿ ಗುಡ್​ನ್ಯೂಸ್.. ಪುಷ್ಪ 2 ಟಿಕೆಟ್ ದರದಲ್ಲಿ ಇಳಿಕೆ..!

ಇನ್ನು ಗ್ರಾಮಸ್ಥರ ಮನೆ ಮುಂದೆಯೇ ನಾಯಿಗಳನ್ನು ಹಿಡಿದು ಹೊತ್ತೊಯ್ದಿದೆ. ಇನ್ನು ತುರಹಳ್ಳಿ ಕಾಡಿನ ಬಂಡೆ ಮೇಲೆ ಮಲಗಿರೋ ಚಿರತೆಯ ಫೋಟೋ ಸ್ಥಳೀಯರು ಸೆರೆ ಹಿಡಿದಿದ್ದಾರೆ. ಇದೇ ಬಂಡೆ ಮೇಲೆ ಈ ಹಿಂದೆಯೂ ಕಾಣಿಸಿಕೊಂಡಿತ್ತು. ಅರಣ್ಯಾಧಿಕಾರಿಗಳಿಗೆ ಸ್ಥಳೀಯರು ದೂರು ನೀಡಿದ್ದು, ಸೆರೆ ಹಿಡಿಯುವಂತೆ ಮನವಿ ಮಾಡಿಕೊಂಡಿದ್ದಾರೆ.

ಮಕ್ಕಳು ಶಾಲೆಗೆ ಹೋಗ್ತಾರೆ, ಆಟ ಆಡ್ತಿರ್ತಾರೆ. ಚಿರತೆ ಯಾವಾಗ ಬರುತ್ತೆ ಎಂದು ಹೇಳೋಕೆ ಆಗಲ್ಲ. ನಮಗೆ ವಾಸ ಮಾಡಲು ಭಯ ಆಗ್ತಿದೆ. ಕೂಡಲೇ ಚಿರತೆಯನ್ನು ಹಿಡಿಯಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಚಳಿಗಾಲದ ಅಧಿವೇಶನದಲ್ಲಿ ಇಬ್ಬರು ಮಾಜಿ ಶಾಸಕರಿಗೆ ಆಸನ ಮೀಸಲು.. ಹೀಗ್ಯಾಕೆ ಆಯ್ತು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment