Advertisment

ಅಲ್ಲಪ್ಪ ಸಿದ್ದರಾಮಯ್ಯ ಮುಂದಿನ 10 ತಿಂಗಳು CM ಆಗಿ ಮುಂದುವರಿ ನೋಡೋಣ -ಕುಮಾರಸ್ವಾಮಿ ಚಾಲೆಂಜ್..!

author-image
Ganesh
Updated On
EXCLUSIVE: ಮುನಿಸಿಕೊಂಡಿದ್ದ HDK ಮನವೊಲಿಸಿದ್ಯಾರು? ಬಿಜೆಪಿ ಪಾದಯಾತ್ರೆಯ ಸೀಕ್ರೆಟ್ ಮಾಹಿತಿ ಇಲ್ಲಿದೆ
Advertisment
  • ‘ಅಲ್ಲಪ್ಪ ಸಿದ್ದರಾಮಯ್ಯ ನಾನೇ 10 ವರ್ಷ ಸಿಎಂ ಅಂತೀರಲ್ಲ’
  • ಕನಕಪುರದಲ್ಲಿ ಬ್ಲಾಕ್ ಅಂಡ್ ವೈಟ್ ಟಿವಿ ಇಟ್ಕೊಂಡು ಸಂಪಾದಿಸಿದ್ದು ಅಲ್ವಾ?
  • ಈ ಪಾದಯಾತ್ರೆ ಮಾಡಿ ಸಿದ್ದರಾಮಯ್ಯರ ರಾಜೀನಾಮೆ ಕೊಡಿಸ್ತೇವೆ-ಅಶೋಕ್

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡ್ತಿರುವ ಮೈತ್ರಿ ನಾಯಕರು ತಮ್ಮ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಜಂಟಿಯಾಗಿ ಅಖಾಡಕ್ಕೆ ಇಳಿದಿದ್ದಾರೆ. ಕಾಂಗ್ರೆಸ್​​​ನ ಏಕಶಕ್ತಿಯ ದಮನಕ್ಕೆ ರಣಕಹಳೆ ಮೊಳಗಿಸಿರುವ ಮೈತ್ರಿ, ‘ಬೆಂಗಳೂರಿನಿಂದ ಮೈಸೂರು ಪಾದಯಾತ್ರೆ’ಗೆ ಚಾಲನೆ ನೀಡಿದೆ.

Advertisment

ಚಾಲನೆ ಬಳಿಕ ಮಾತನಾಡಿರುವ ಕೇಂದ್ರ ಸಚಿವ ಹೆಚ್.​ಡಿ.ಕುಮಾರಸ್ವಾಮಿ.. ಈ ಕೆಟ್ಟ ಕಾಂಗ್ರೆಸ್ ಸರ್ಕಾರವನ್ನು ನಡೆಸ್ತಿರೋದು ಸಿದ್ದರಾಮಯ್ಯ ಮಾತ್ರವಲ್ಲ. ಇಡೀ ಸರ್ಕಾರವನ್ನೇ ಕಿತ್ತು ಒಗೆಯಬೇಕು. ನಾವು ಕೆಂಪಮ್ಮ ದೇವಿಗೆ ಪೂಜೆ ಸಲ್ಲಿಸಿದ್ದೇವೆ‌. ಯಡಿಯೂರಪ್ಪರ ಮಾರ್ಗದರ್ಶನದಲ್ಲಿ ಹೋರಾಟ ಮಾಡ್ತಿದ್ದೇವೆ. ಕ್ರಿಯಾಶೀಲ ಯುವಕ ವಿಜಯೇಂದ್ರ ನೇತೃತ್ವದಲ್ಲಿ, ರಾಧಾಮೋಹನ್ ಅಗರ್‌ವಾಲ್ ಸೂಚನೆ ಮೇರೆಗೆ ಪಾದಯಾತ್ರೆ ಮಾಡ್ತಿದ್ದೇವೆ ಎಂದರು.

ಇದನ್ನೂ ಓದಿ:PSI ಪತ್ನಿಯ ಆರೋಪವನ್ನೂ ಪರಿಗಣಿಸ್ತೇನೆ, ಶೀಘ್ರದಲ್ಲೇ FIR -ಪರಶುರಾಮ್ ಸಾವಿನ ಬಗ್ಗೆ ಸರ್ಕಾರ ಹೇಳಿದ್ದೇನು..?

publive-image

ಕೇಂದ್ರಕ್ಕೆ ದಾಖಲೆ ಕೊಟ್ಟಿದ್ದೇನೆ
ನಮ್ಮ ಪ್ರತಿಭಟನೆಗೆ ಪರ್ಯಾಯವಾಗಿ ಅವರು (ಕಾಂಗ್ರೆಸ್) ನಿನ್ನೆಯಿಂದ ಹೋರಾಟ ಮಾಡ್ತಿದ್ದಾರೆ. ನನ್ನ ವಿರುದ್ಧ ವೈಯುಕ್ತಿಕವಾಗಿ ಮಾತನ್ನಾಡಿರುವ ವಿಚಾರಕ್ಕೆ ನಾನು ಅಲ್ಲಿಯೇ ಉತ್ತರಿಸುತ್ತೇನೆ. ಬಿಡದಿ, ರಾಮನಗರದಲ್ಲೇ ಉತ್ತರಿಸುತ್ತೇನೆ. ನಾನು ಜೈಲಿಗೆ ಹೋಗಲು ಸಿದ್ಧ ಅಂದಿದ್ದಾರೆ. ಹಣ, ಆಸ್ತಿ ಬಗ್ಗೆ ಮಾತನ್ನಾಡಿದ್ದಾರೆ. ನಾನು ಅವರ ಮಾಡಿರುವ ಅಕ್ರಮಗಳ ಅನೇಕ‌ ದಾಖಲಾತಿಗಳನ್ನು ಕೇಂದ್ರ ಸರ್ಕಾರಕ್ಕೆ ಕೊಟ್ಟಿದ್ದೇನೆ ಎಂದಿದ್ದಾರೆ.

Advertisment

ಕನಕಪುರದಲ್ಲಿ ಒಂದು ಬ್ಲಾಕ್ ಅಂಡ್ ವೈಟ್ ಟಿವಿ ಇಟ್ಟುಕೊಂಡು ಸಂಪಾದನೆ ಮಾಡಿದ್ದು ಅಲ್ವಾ? ಅಂದು ರಾಮಕೃಷ್ಣ ಹೆಗಡೆ ಕಾಲದಲ್ಲಿ ರಘುಪತಿ ಭಟ್ ಮೂಲಕ ಹಣ ಸಂಪಾದನೆ ಮಾಡಿದ್ದಾರೆ. ನಾವು 2006ರಲ್ಲಿ ಮಾಡಿದ್ದ ಸಮ್ಮಿಶ್ರ ಸರ್ಕಾರ ಸರಿಯಾಗಿದ್ರೆ 2008ರಲ್ಲಿ ನೀವು ಅಧಿಕಾರಕ್ಕೆ ಬರುತ್ತಿರಲಿಲ್ಲ. ಅಂದು ಬೇರೆ ವ್ಯವಸ್ಥೆ ಇತ್ತು. ನಾವು ಮಾಡಿದ ಯಡವಟ್ಟಿನಿಂದ ಅಂದು ಅಧಿಕಾರಕ್ಕೆ ಬಂದ್ರಿ. 2018ರಲ್ಲಿ ನೀವು ನಮ್ಮ ಮನೆಗೆ ಬಂದ್ರಿ. ನಾನು ಅರ್ಜಿ‌ ಹಿಡಿದುಕೊಂಡು ಬಂದಿರಲಿಲ್ಲ. ದೇವೇಗೌಡರನ್ನು ಪ್ರಧಾನಿ ಮಾಡಿದ್ದು ನೀವಲ್ಲ. ಅವರನ್ನು ಕೆಳಗೆ ಇಳಿಸಿದ್ದು ಏಕೆ? ಅಂದು ನಾವು ಮಾಡಿದ ಸರ್ಕಾರದಿಂದ ಎರಡು ಪಕ್ಷಗಳು ಬೆಳೆದಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಯಡಿಯೂರಪ್ಪ ಸಹಕರಿಸಿದ್ದಾರೆ. ಸಮ್ಮಿಶ್ರ ಸರ್ಕಾರ ಮಾಡಿ ಬಿಜೆಪಿ ಕೂಡ ಬೆಳೆದಿದೆ. ಅಲ್ಲಪ್ಪ ಸಿದ್ದರಾಮಯ್ಯರ ನಾನೇ 10 ವರ್ಷ ಸಿಎಂ ಅಂತೀರಲ್ಲ. ಮುಂದಿನ 10 ತಿಂಗಳು ಮುಂದುವರಿ ನೋಡೋಣ ಎಂದು ಚಾಲೆಂಜ್ ಹಾಕಿದ್ದಾರೆ.

ಇದನ್ನೂ ಓದಿ:ಪಿಎಸ್ಐ ಪರಶುರಾಮ ಸಾವು; ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ, ಮೃತ ಅಧಿಕಾರಿಯ ಪತ್ನಿಯೂ ಭಾಗಿ

Advertisment

publive-image

ರಾಜೀನಾಮೆ ಕೊಡಿಸ್ತೇವೆ
ವಿರೋಧ ಪಕ್ಷದ ನಾಯಕ ಆರ್​.ಅಶೋಕ್ ಮಾತನಾಡಿ.. ನೀವು ಅಕ್ರಮ ಮಾಡಿದ್ದೀರಿ. ಈಗ ರಾಜ್ಯಪಾಲರನ್ನು ಪ್ರಶ್ನಿಸುತ್ತಿದ್ದೀರಿ. ಅಂದು ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗೆ ದೂರು ಕೊಟ್ಟಿದ್ದೀರಿ‌. ನಿಮಗೆ ಕೆಂಗೇರಿಯಲ್ಲಿ ಜಮೀನು ಸ್ವಾಧೀನವಾದರೆ ಎಂಜಿ ರಸ್ತೆಯಲ್ಲಿ ಸೈಟು ಕೊಡಲು ಆಗುತ್ತದಾ? ಈ ಪಾದಯಾತ್ರೆ ಮಾಡಿ ಸಿದ್ದರಾಮಯ್ಯರ ರಾಜೀನಾಮೆ ಕೊಡಿಸ್ತೇವೆ ಎಂದಿದ್ದಾರೆ.

ಇದನ್ನೂ ಓದಿ:ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಕಪ್ಪು ಪಟ್ಟಿ ಧರಿಸಿದ್ದೇಕೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment