/newsfirstlive-kannada/media/post_attachments/wp-content/uploads/2024/10/LG.jpg)
ಜನಪ್ರಿಯ ಲಕ್ಕಿ ಗೋಲ್ಡ್​ಸ್ಟಾರ್​(LG) ಕಂಪನಿ ಬಗ್ಗೆ ಬಹುತೇಕರಿಗೆ ತಿಳಿದಿದೆ. ಇದೀಗ ದಕ್ಷಿಣ ಕೊರಿಯಾ ಮೂಲದ ಈ ಕಂಪನಿ ವಿರಾಮದ ಬಳಿಕ ಮತ್ತೆ ಸ್ಮಾರ್ಟ್​ಫೋನ್​ ಉತ್ಪಾದಿಸಲು ಮುಂದಾಗಿದೆ. ಆ ಮೂಲಕ ಗ್ರಾಹಕರಿಗೆ ಹೊಸ ಸುದ್ದಿಯನ್ನು ತಂದಿದೆ.
ಎಲ್​ಜಿ ಕಂಪನಿ ರೋಲ್​ ಮಾಡಬಹುದಾದ ಸ್ಮಾರ್ಟ್​ಫೋನ್ ತರಲು ಮುಂದಾಗಿದೆ. ಅದಕ್ಕಾಗಿ ಪೇಟೆಂಟ್​ಗೆ ಅರ್ಜಿ ಸಲ್ಲಿಸಿದೆ. ಆ ಮೂಲಕ 2021ರ ಎಪ್ರಿಲ್​ನಲ್ಲಿ ನಿರ್ಗಮಿಸಿದ ಕ್ಷೇತ್ರವನ್ನು ಮರು ಪ್ರವೇಶಿಸುವ ಉದ್ದೇಶವನ್ನು ಹೊಂದಿದೆ.
ಹಿಂದೊಮ್ಮೆ ಎಲ್​ಜಿ ಜಾಗತಿಕವಾಗಿ ಪ್ರಮುಖ ಮೊಬೈಲ್​ ತಯಾರಕರಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ. ನವೀನ ವಿನ್ಯಾಸ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಂಡು ಪರಿಚಯಿಸಿತ್ತು. ಆದರೆ ಬದಲಾಗುತ್ತಿರುವ ಮಾರುಕಟ್ಟೆಯಲ್ಲಿ ಉಳಿದ ಸ್ಮಾರ್ಟ್​ಫೋನ್​ ಕಂಪನಿಗಳ ವಿರುದ್ಧ ಸ್ಪರ್ಧಿಸಲಾಗದೆ ಮೊಬೈಲ್​ ವಿಭಾಗವನ್ನು ಮುಚ್ಚಿತ್ತು.
ಸ್ಮಾರ್ಟ್​ಫೋನ್​ ತಯಾರಿಸಲು ಪೇಟೆಂಟ್​​ಗೆ ಅರ್ಜಿ
ಎಲ್​ಜಿ ಕಂಪನಿ ಗೃಹಉಪಯೋಗಿ ಎಲೆಕ್ಟ್ರಿಕ್​ ಸಾಧನಗಳನ್ನು ಉತ್ಪಾದಿಸುತ್ತಾ ಬಂದಿದೆ. ಅದರ ಜೊತೆಗೆ ಸ್ಮಾರ್ಟ್​ಫೋನ್​ ಡಿಸ್​​ಪ್ಲೇ ಮತ್ತು ಕ್ಯಾಮೆರಾ ಸಂವೇದಕವನ್ನು ಹಿಡಿದು ಸ್ಮಾರ್ಟ್​ಟಿವಿಗಳವರೆಗೆ ಎಲ್ಲವನ್ನೂ ಉತ್ಪಾದಿಸುತ್ತದೆ. ಇದೀಗ ರೋಲ್​ ಮಾಡಬಹುದಾದ ಸ್ಮಾರ್ಟ್​ಫೋನ್​ ತಯಾರಿಸಲು ಪೇಟೆಂಟ್​​ಗೆ ಅರ್ಜಿ ಸಲ್ಲಿಸಿದೆ.
ಈಗಾಗಲೇ ಸ್ಯಾಮ್​ಸಂಗ್​ ಮಡಚಬಹುದಾದ ಸ್ಮಾರ್ಟ್​ಫೋನನ್ನು ಪರಿಚಯಿಸಿದೆ. ಒಂದು ವೇಳೆ ಎಲ್​ಜಿ ಇಂತಹದ್ದೇ ಸ್ಮಾರ್ಟ್​ಫೋನ್​ ಪರಿಚಯಿಸಿದರೆ ಸ್ಯಾಮ್​ಸಂಗ್​ಗೆ ಪ್ರತಿಸ್ಪರ್ಧಿಯಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us