ಆರೋಗ್ಯ ರಕ್ಷಣೆಯಲ್ಲಿ AI ಆವಿಷ್ಕಾರ.. 14ನೇ LHIF ಆವೃತ್ತಿಗೆ ಕ್ಷಣಗಣನೆ; ನೀವೂ ಭಾಗವಹಿಸಿ!

author-image
admin
Updated On
ನಾಳೆ 14ನೇ LHIF: ಆರೋಗ್ಯ ರಕ್ಷಣೆಯಲ್ಲಿ AI ಆವಿಷ್ಕಾರದ ವಿಶೇಷ ಕಾರ್ಯಕ್ರಮ; ನೀವೂ ಭಾಗವಹಿಸಿ!
Advertisment
  • ಆಮ್ಜೆನ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕರಿಂದ ಮಾಹಿತಿ
  • ಆರೋಗ್ಯ ರಕ್ಷಣಾ ಪರಿವರ್ತನೆಯಲ್ಲಿ AI ಪಾತ್ರದ ಬಗ್ಗೆ ಚರ್ಚೆ
  • ಏ.16ರಂದು ಬೆಂಗಳೂರಿನ ಲೀಲಾ ಪ್ಯಾಲೇಸ್‌ನಲ್ಲಿ ಕಾರ್ಯಕ್ರಮ

ಬೆಂಗಳೂರು: ಜೀವ ವಿಜ್ಞಾನ ಮತ್ತು ಆರೋಗ್ಯ ರಕ್ಷಣಾ ನಾವೀನ್ಯತೆ ವೇದಿಕೆ (LHIF) ತನ್ನ 14ನೇ ಆವೃತ್ತಿಯ ಕಾರ್ಯಕ್ರಮಕ್ಕೆ ಸಜ್ಜಾಗಿದೆ. ಈ ಬಾರಿ AI Disrupt: Transforming Diagnosis, Discovery and Delivery ಶೀರ್ಷಿಕೆಯಲ್ಲಿ ಇದೇ ಬುಧವಾರ ಅಂದ್ರೆ ಏಪ್ರಿಲ್ 16ರಂದು ಬೆಂಗಳೂರಿನ ಲೀಲಾ ಪ್ಯಾಲೇಸ್‌ನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ನ್ಯೂಸ್ ಫಸ್ಟ್ ಚಾನೆಲ್‌ ಈ ಕಾರ್ಯಕ್ರಮದ ಮೀಡಿಯಾ ಪಾರ್ಟನರ್ ಆಗಿದೆ.

LHIF 14ನೇ ಆವೃತ್ತಿಯನ್ನು MeitY-NASSCOM ಸೆಂಟರ್ ಆಫ್ ಎಕ್ಸಲೆನ್ಸ್‌ನಿಂದ ಆಯೋಜಿಸಲಾಗಿದೆ. ಈ ವಿಶೇಷ ಕಾರ್ಯಕ್ರಮಕ್ಕೆ ಆರೋಗ್ಯ ಕ್ಷೇತ್ರದ ದಿಗ್ಗಜರು, ನುರಿತ ತಜ್ಞರು, ನೀತಿ ನಿರೂಪಕರು ಭಾಗಿಯಾಗಲಿದ್ದಾರೆ. ಈ ಸಂದರ್ಭದಲ್ಲಿ artificial intelligence (ಕೃತಕ ಬುದ್ಧಿಮತ್ತೆ) ಇಂದ ಆರೋಗ್ಯ ರಕ್ಷಣಾ ಕ್ಷೇತ್ರದಲ್ಲಿ ಆಗಿರುವ ಮಹತ್ತರ ಬದಲಾವಣೆಯ ಬಗ್ಗೆ ಬೆಳಕು ಚೆಲ್ಲಲಾಗುತ್ತಿದೆ.

publive-image

ಕಾರ್ಯಕ್ರಮದ ವೇದಿಕೆಯಲ್ಲಿ ಆಮ್ಗೆನ್ ಇಂಡಿಯಾ ಕಂಪನಿಯ ಎಂಡಿ ನವೀನ್ ಗುಳ್ಳಪಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ನವೀನ್ ಗುಳ್ಳಪಲ್ಲಿ ಅವರು ಹೆಲ್ತ್‌ಕೇರ್ ಕ್ಷೇತ್ರ ಹಾಗೂ ನಾವೀನ್ಯತೆಯಲ್ಲಿ ಬಹಳಷ್ಟು ಪರಿಣತಿ ಪಡೆದವರಾಗಿದ್ದಾರೆ. ಕಾರ್ಯಕ್ರಮದಲ್ಲಿ ಅವರು ಪ್ರಸ್ತುತ ಪ್ರವೃತ್ತಿಗಳ ಒಳನೋಟ ಮತ್ತು AIನ ಭವಿಷ್ಯದ ನಿರ್ದೇಶನ ಹೇಗಿರುತ್ತೆ ಅನ್ನೋದರ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಮಿನರಲ್ ವಾಟರ್ ಕುಡಿಯುವವರೇ ಎಚ್ಚರ.. ರಾಜ್ಯದ ಪ್ರತಿಯೊಬ್ಬರು ಓದಲೇಬೇಕಾದ ಸ್ಟೋರಿ! 

LHIF 14ನೇ ಆವೃತ್ತಿಯು ಪ್ರಮುಖವಾಗಿ AI ನೇತೃತ್ವದ ರೋಗನಿರ್ಣಯ ಮತ್ತು AI-ಚಾಲಿತ ವಿತರಣಾ ವ್ಯವಸ್ಥೆಗಳ ಮೂಲಕ ರೋಗಿಗಳ ಆರೈಕೆಯ ಕೇಂದ್ರೀಕೃತವಾಗಿದೆ. ಜೊತೆಗೆ ಮೆಡಿಕಲ್ ಸಾಧನಗಳಲ್ಲಿ AI ಪಾತ್ರ, LLMs/VLMs ಪ್ರವೇಶಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಗುತ್ತದೆ.

ಈ ಕಾರ್ಯಕ್ರಮದಲ್ಲಿ AI ಸ್ಟಾರ್ಟ್‌ಅಪ್‌ಗಳು, ಶ್ರೀ. ತಾಶಿ ಗ್ಯಾಲ್ಸನ್ ಮತ್ತು ಡಾ. ಸಂಗೀತಾ ರೆಡ್ಡಿ ಅವರ ಭಾಷಣಗಳು ಇರಲಿದೆ. ಇದೇ ವೇಳೆ ಡಿಜಿಟಲ್ ಪ್ರಾವಿಣ್ಯತೆ ಪಡೆದವರಿಗೆ ಪ್ರಶಸ್ತಿ ಪ್ರದಾನ ಕೂಡ ಮಾಡಲಾಗುತ್ತದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿhttps://www.coe-iot.com/AIdisrupt/ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment