/newsfirstlive-kannada/media/post_attachments/wp-content/uploads/2025/04/RCB-3.jpg)
ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟೀದಾರ್ರನ್ನೇ ನಂಬಿಕೊಂಡಿರುವ ಆರ್ಸಿಬಿಗೆ, ದೇವದತ್ ಪಡಿಕ್ಕಲ್, ಲಿಯಾಮ್ ಲಿವಿಂಗ್ ಸ್ಟೋನ್ ಪರೋಕ್ಷ ವಿಲನ್ ಆಗ್ತಿದ್ದಾರೆ. ಒಂದು ಪಂದ್ಯದಲ್ಲಿ ಸಿಡಿದಿದ್ದು ಬಿಟ್ರೆ, ಇವರ ಆಟ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ. ಇನ್ನು ಫಿನಿಷರ್ ಜಿತೇಶ್ ಶರ್ಮಾ ಅಂತೂ ಆರ್ಸಿಬಿಯನ್ನೇ ಫಿನಿಷ್ ಮಾಡ್ತಿದ್ರೆ, ಕೃನಾಲ್, ದಿನ ಕಳೆದಂತೆ ರೆಡ್ ಆರ್ಮಿಗೆ ಕಂಟಕವಾಗ್ತಿದ್ದಾರೆ.
ಇದನ್ನೂ ಓದಿ: ಆರ್ಸಿಬಿಗೆ ಇಂದಿನಿಂದ ಸೆಕೆಂಡ್ ಇನ್ನಿಂಗ್ಸ್.. ಇನ್ನೂ ಎಷ್ಟು ಪಂದ್ಯ ಬಾಕಿ ಇದೆ..?
ಆರ್ಸಿಬಿಗೆ ಕಂಟಕ ಯಾರು?
3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಪಡಿಕ್ಕಲ್, 6 ಪಂದ್ಯಗಳಿಂದ 140ರ ಬ್ಯಾಟಿಂಗ್ ಸ್ಟ್ರೈಕ್ರೇಟ್ನಲ್ಲಿ 119 ರನ್ ಗಳಿಸಿದ್ರೆ, ಫಿನಿಷರ್ ಎಂದು ಕರೆಸಿಕೊಳ್ಳುವ ಜಿತೇಶ್ ಶರ್ಮಾ 7 ಪಂದ್ಯಗಳಿಂದ 90 ರನ್ ಗಳಿಸಿದ್ದಾರೆ. 140.62ರ ಬ್ಯಾಟಿಂಗ್ ಸ್ಟ್ರೈಕ್ರೇಟ್ ಹೊಂದಿದ್ದಾರೆ. ಲಿಯಾಮ್ ಲಿವಿಂಗ್ಸ್ಟೋನ್ 7 ಪಂದ್ಯಗಳಿಂದ 127.94ರ ಬ್ಯಾಟಿಂಗ್ ಸ್ಟ್ರೈಕ್ರೇಟ್ನಲ್ಲಿ 87 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್ನಂತೆ ಬ್ಯಾಟ್ ಬೀಸಿರುವ ಆಲ್ರೌಂಡರ್ ಕೃನಾಲ್, 85.71 ಸ್ಟ್ರೈಕ್ರೇಟ್ನಲ್ಲಿ 24 ರನ್ ಕಲೆಹಾಕಿದ್ದಾರೆ.
ಐಪಿಎಲ್ ಟ್ರೋಫಿ ಗೆಲ್ಲೋದು ಅಸಾಧ್ಯ
ಎಂದಿಗಿಂತಲೂ ಆರ್ಸಿಬಿ ಬಲಿಷ್ಠವಾಗಿ ಕಾಣ್ತಿದೆ. ಒಗ್ಗಟ್ಟಿನ ಆಟವಾಡುವಲ್ಲಿ ಆರ್ಸಿಬಿ ಫೇಲ್ಯೂರ್ ಆಗಿದೆ. ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟಿದಾರ್ರನ್ನೇ ಹೆಚ್ಚು ನಂಬಿಕೊಂಡಿರುವ ಆರ್ಸಿಬಿಗೆ, ಉಳಿದವರು ಕೈಕೊಡ್ತಿದ್ದಾರೆ. ಇದು ಸಹಜವಾಗಿಯೇ ಆರ್ಸಿಬಿ ತಂಡದ ವೀಕ್ನೆಸ್ನ ಎತ್ತಿ ತೋರಿಸ್ತಿದೆ. ಹೀಗಾಗಿ ಇದನ್ನು ಆರ್ಸಿಬಿ ಸರಿಪಡಿಸಿಕೊಳ್ಳಬೇಕಿದೆ.
ಇದನ್ನೂ ಓದಿ: ಆರ್ಸಿಬಿಗೆ ಬಿಗ್ ಶಾಕ್ ನೀಡಿದ ಲಕ್ನೋ ಸೂಪರ್ ಜೈಂಟ್ಸ್.. ಆಗಿದ್ದೇನು..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್