/newsfirstlive-kannada/media/post_attachments/wp-content/uploads/2025/04/Devdutt_Padikkal.jpg)
ಇವತ್ತು ಪಂಜಾಬ್ ವಿರುದ್ಧ ಆರ್​ಸಿಬಿ ಸೇಡು ತೀರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದೆ. ತವರಿನಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿದ ಆರ್​ಸಿಬಿಗೆ ಇಂದು ಗೆಲುವು ಅನಿವಾರ್ಯ. ಹೀಗಾಗಿ ತಂಡದಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ ಇದೆ.
ಲಿವಿಂಗ್​​ಸ್ಟೋನ್ ಔಟ್​​.. !
ಆಲ್​ರೌಂಡರ್ ಲಿಯಾಮ್ ಲಿವಿಂಗ್ ಸ್ಟೋನ್​ ಗುಜರಾತ್​ ಎದುರಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದೆ ಕೊನೆ. ಆ ಬಳಿಕ ಸ್ಟೋನ್ ಬ್ಯಾಟ್​ನಿಂದ ಬಂದಿದ್ದು ಜಸ್ಟ್ ಎಂಟು ರನ್. ಪೆವಿಲಿಯನ್ ಪರೇಡ್​ ನಡೆಸಿದ ಲಿವಿಂಗ್ ಸ್ಟೋನ್, ಬೌಲಿಂಗ್​ನಲ್ಲೂ ತಂಡಕ್ಕೆ ಕಾಣಿಕೆ ನೀಡಿದ್ದು ಅಷ್ಟಕ್ಕಷ್ಟೇ. ಹೀಗಾಗಿ ಲಿಯಾಮ್​ ಲಿವಿಂಗ್​ಸ್ಟೋನ್ ಬದಲಿಗೆ ಜೇಕಬ್ ಬೆಥೆಲ್​ ಅಥವಾ ರೊಮರಿಯೋ ಶೆಫಾರ್ಡ್​ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.
ಬ್ಯಾಟಿಂಗ್​ನಲ್ಲಿ ಕೃಪೆ ತೋರಯ್ಯಾ ಕೃನಾಲ್ ಪಾಂಡ್ಯ!
ಕೃನಾಲ್ ಪಾಂಡ್ಯ ಬೌಲಿಂಗ್ ಬಗ್ಗೆ ನೋ ಕಂಪ್ಲೆಂಟ್. ಆದರೆ ಬ್ಯಾಟಿಂಗ್​ನಲ್ಲಿ ತಂಡಕ್ಕೆ ಎಳ್ಳಷ್ಟು ಉಪಯೋಗವಾಗ್ತಿಲ್ಲ. ಮೊದಲಾರ್ಧದ ಪಂದ್ಯಗಳಿಂದ ಕೇವಲ 24 ರನ್​ ಗಳಿಸಿರುವ ಕೃನಾಲ್​ ಬದಲಿಗೆ ಅಬ್ಬರಿಸ್ತಿರುವ ಟಿಮ್​ ಡೇವಿಡ್​ಗೆ ಬಡ್ತಿ ನೀಡಬೇಕಾದ ಮನಸ್ಸು ಮಾಡಬೇಕಿದೆ. ಇಲ್ಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನಷ್ಟ.
ರಜತ್ ಪಟಿದಾರ್, ಜಿತೇಶ್ ಶರ್ಮಾ ಸಹ ಟ್ರ್ಯಾಕ್​​ಗೆ ಮರಳಬೇಕಿದೆ. ಇಲ್ಲ ರಾಯಲ್ ಚಾಲೆಂಜರ್ಸ್​ಗೆ ಸಂಕಷ್ಟ ತಪ್ಪಿದಿಲ್ಲ. ಒಟ್ನಲ್ಲಿ, ಆರ್​ಸಿಬಿಯ ಬೌಲಿಂಗ್ ಅಟ್ಯಾಕ್, ಸದ್ಯಕ್ಕೆ ಸಖತ್ ಆಗಿದೆ. ಅದೇ ಲಯ ಮುಂದುವರಿಸಿದ್ರೆ ಇವತ್ತು ಆರ್​ಸಿಬಿಗೆ ಸೂಪರ್ ಸಂಡೇ ಆಗೋದ್ರಲ್ಲಿ ಡೌಟೇ ಇಲ್ಲ.
ಇದನ್ನೂ ಓದಿ: ಅಭಿಮಾನಿಗಳೇ ಗೊಂದಲ ಬೇಡ.. ಇವತ್ತು ಎಷ್ಟು ಗಂಟೆಗೆ ಮ್ಯಾಚ್..? ಮಿಸ್​ ಮಾಡ್ಕೋಬೇಡಿ..!
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್