/newsfirstlive-kannada/media/post_attachments/wp-content/uploads/2025/04/Liam-Livingstone.jpg)
ಚಿನ್ನಸ್ವಾಮಿಯಲ್ಲಿ ಪಂಜಾಬ್ ಎದುರು ಆರ್​ಸಿಬಿ ಸೋಲುಂಡಿದೆ ನಿಜ. ಆದರೆ ಅವೇ ಕಂಡೀಷನ್ಸ್​ನಲ್ಲಿ ಆರ್​ಸಿಬಿ ಬಾಯ್ಸ್ ಅದ್ಭುತ ಆಟವಾಡಿದ್ದಾರೆ. ಸೋಲಿಲ್ಲದ ಸರದಾರರಾಗಿ ಮುನ್ನುಗ್ಗುತ್ತಿರುವ ಆರ್​ಸಿಬಿ, ಇವತ್ತು ಗೆಲ್ಲೋ ಹಾಟ್ ಫೇವರಿಟ್ ಆಗಿಯೇ ಕಾಣ್ತಿದೆ.
ಆದರೂ ಚಂಡಿಗಡದಲ್ಲಿ ಗೆದ್ದೇ ಬೀಡ್ತೀವಿ ಅನ್ನೋ ನಿರೀಕ್ಷೆ ಇಟ್ಟುಕೊಳ್ಳುವಂತೆಯೂ ಇಲ್ಲ. ಯಾಕಂದ್ರೆ ಇದೇ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಕೊಲ್ಕತ್ತಾ ನೈಟ್​ ರೈಡರ್ಸ್ ತಂಡಗಳನ್ನು ಬಗ್ಗು ಬಡಿದಿರುವ ಪಂಜಾಬ್​ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ.
ಇದನ್ನೂ ಓದಿ: ಆರ್​ಸಿಬಿಗೆ ಬಿಗ್ ಶಾಕ್ ನೀಡಿದ ಲಕ್ನೋ ಸೂಪರ್ ಜೈಂಟ್ಸ್​.. ಆಗಿದ್ದೇನು..?
ಗೆಲುವಿನ ಬಗ್ಗೆ ದೊಡ್ಡ ಪ್ಲಾನ್ ಮಾಡಿರುವ ಆರ್​ಸಿಬಿ ಇವತ್ತು ಪ್ಲೇಯಿಂಗ್-11ನಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ. ಕಳೆದ ಪಂದ್ಯದಲ್ಲಿ ದೇವದತ್ತ ಪಡಿಕ್ಕಲ್​​ಗೆ ಕೊಕ್ ನೀಡಲಾಗಿತ್ತು. ಇವತ್ತಿನ ಪಂದ್ಯದಲ್ಲಿ ಲಿಯಾಮ್ ಲಿವಿಂಗ್​ಸ್ಟೋನ್​ಗೆ ಕೊಕ್ ನೀಡಲು ಆರ್​ಸಿಬಿ ಮ್ಯಾನೇಜ್ಮೆಂಟ್ ನಿರ್ಧರಿಸಿದೆ ಎನ್ನಲಾಗ್ತಿದೆ.
ಆಲ್​ರೌಂಡರ್ ಲಿವಿಂಗ್ ಸ್ಟೋನ್​ ಬದಲಿಗೆ ಜೇಕಬ್ ಬೆಥೆಲ್​ ಅಥವಾ ರೊಮರಿಯೋ ಶೆಫಾರ್ಡ್​ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಲಿವಿಂಗ್ ಸ್ಟೋನ್ ಗುಜರಾತ್​ ಎದುರಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದೇ ಕೊನೆ. ಆ ಬಳಿಕ ಸ್ಟೋನ್ ಬ್ಯಾಟ್​ನಿಂದ ಬಂದಿದ್ದು ಜಸ್ಟ್ ಎಂಟು ರನ್. ಪೆವಿಲಿಯನ್ ಪರೇಡ್​ ನಡೆಸಿದ ಲಿವಿಂಗ್ ಸ್ಟೋನ್, ಬೌಲಿಂಗ್​ನಲ್ಲೂ ತಂಡಕ್ಕೆ ಕಾಣಿಕೆ ನೀಡಿದ್ದು ಅಷ್ಟಕ್ಕಷ್ಟೇ. ಹೀಗಾಗಿ ಇಂದಿನ ಪಂದ್ಯದಲ್ಲಿ ಬೆಂಚ್ ಕಾಯೋದು ಪಕ್ಕಾ ಆಗಿದೆ.
ಇದನ್ನೂ ಓದಿ: RCB ಪಾಲಿಗೆ 4 ಬಿಗ್ ಸ್ಟಾರ್ ಕಂಟಕ​.. ಗೆಲುವಿನ ಕನಸಿಗೆ ನಮ್ಮವರೇ ವಿಲನ್​..!
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್