/newsfirstlive-kannada/media/post_attachments/wp-content/uploads/2024/04/PSI-5.jpg)
ದೊಡ್ಡಬಳ್ಳಾಪುರ ಟೌನ್ ಪಿಎಸ್ಐ ಜಗದೀಶ್ ಬರ್ಬರ ಹತ್ಯೆ ಪ್ರಕರಣದ ಇಬ್ಬರು ಅಪರಾಧಿಗಳಿಗೆ ಜಿಲ್ಲಾ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
ಅಪರಾಧಿ ಮಧುಗೆ 7 ವರ್ಷ ಜೈಲು ಶಿಕ್ಷೆ ಒಂದು ಲಕ್ಷ ದಂಡ ವಿಧಿಸಿದ್ರೆ, ಪ್ರಕರಣದ ಮುಖ್ಯ ಅಪರಾಧಿ ಹರೀಶ್ ಬಾಬುಗೆ ಜೀವಾವಧಿ ಶಿಕ್ಷೆ ಹಾಗೂ 3 ಲಕ್ಷ ದಂಡವನ್ನು ವಿಧಿಸಿ ಬೆಂಗಳೂರು ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಚೆಪಾಕ್ನಲ್ಲಿ ಧೋನಿ ಅಭಿಮಾನಿಗಳಿಗೆ ಚಮಕ್ ಕೊಟ್ಟ ರವಿಂದ್ರ ಜಡೇಜಾ -Video
2015ರಲ್ಲಿ ಪಿಎಸ್ಐ ಜಗದೀಶ್ ಕೊಲೆ ಪ್ರಕರಣ ರಾಜ್ಯಾದ್ಯಂತ ಭಾರೀ ಸದ್ದು ಮಾಡಿತ್ತು. ರಾಬರಿ ಕೇಸ್ ಸಂಬಂಧ ಮಧು ಹಾಗೂ ಹರೀಶ್ ಬಾಬುನನ್ನು ಹಿಡಿಯಲು ಪಿಎಸ್ಐ ಜಗದೀಶ್ ಬಂದಿದ್ದರು. ಈ ವೇಳೆ ಚರಂಡಿಯಲ್ಲಿ ಆಯತಪ್ಪಿ ಪಿಎಸ್ಐ ಜಗದೀಶ್ ಬಿದ್ದಿದ್ದರು. ಆಗ ಪಿಎಸ್ಐ ಜಗದೀಶ್ಗೆ ಚಾಕು ಇರಿದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಜಗದೀಶ್ ಸಾವನ್ನಪ್ಪಿದ್ದರು.
ಇದನ್ನೂ ಓದಿ: ಗನ್ ಇಟ್ಕೊಂಡು ಬಂದು CMಗೆ ಹಾರ ಹಾಕಿದ ಕೇಸ್; ಭದ್ರತಾ ವೈಫಲ್ಯ ಖಂಡಿಸಿದ ಕುಮಾರಸ್ವಾಮಿ, ಏನಂದ್ರು..?
ಈ ಸಂಬಂಧ ನೆಲಮಂಗಲ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿ ಚಾರ್ಜ್ ಶೀಟ್ ಸಲ್ಲಿಕೆಯಾಗಿತ್ತು. ಸುದೀರ್ಘ 8 ವರ್ಷಗಳ ವಿಚಾರಣೆ ಬಳಿಕ ಕೋರ್ಟ್ ತೀರ್ಪು ನೀಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯದ ನ್ಯಾಯಮೂರ್ತಿ ರಘುನಾಥ್ರಿಂದ ಮಹತ್ವದ ತೀರ್ಪು ನೀಡಿದೆ. ಮೀನಾಕುಮಾರಿ ಹಾಗೂ ಎಸ್ವಿ ಭಟ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ