ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳೋ ಹೆಣ್ಮಕ್ಕಳಿಗೆ ಸ್ಪೂರ್ತಿಯಾದ ಲಕ್ಷ್ಮೀ ನಿವಾಸದ ಚೆಲುವೆ; ಏನದು?

author-image
Veena Gangani
Updated On
ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳೋ ಹೆಣ್ಮಕ್ಕಳಿಗೆ ಸ್ಪೂರ್ತಿಯಾದ ಲಕ್ಷ್ಮೀ ನಿವಾಸದ ಚೆಲುವೆ; ಏನದು?
Advertisment
  • ವೆಂಕಿ ಹಾಗೂ ಚೆಲ್ವಿ ಜೋಡಿಗೆ ವೀಕ್ಷಕರಂತೂ ಫುಲ್​ ಫಿದಾ ಆಗಿಬಿಟ್ಟಿದ್ದಾರೆ
  • ವೆಂಕಿ ಜೊತೆಗೆ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದಾಳೆ ಈ ಚುಲುವೆ
  • ಲಕ್ಷ್ಮೀ ನಿವಾಸ ಸೀರಿಯಲ್​ ಮೂಲಕ ಫೇಮಸ್ ಆಗಿದ್ದಾರೆ ನಟಿ ಅಶ್ವಿನಿ

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ವೆಂಕಿ ಪಾತ್ರ ವೀಕ್ಷಕರಿಗೆ ತುಂಬಾನೇ ಹತ್ತಿರವಾಗಿದೆ. ವೆಂಕಿಗೆ ಮಾತು ಬರೆದಿದ್ರೂ ಮನೆಯ ಜವಾಬ್ದಾರಿಗಳನ್ನ ತುಂಬಾ ಚನ್ನಾಗಿ ನಿರ್ವಹಿಸುತ್ತಿದ್ದಾನೆ. ಯಾರೇ ಎಷ್ಟೇ ಚುಚ್ಚು ಮಾತನಾಡಿದ್ರು ಸಿಹಿಸಿಕೊಂಡು ಕುಟುಂಬದ ಒಗ್ಗಟ್ಟಿಗೆ ಸದಾ ಹಂಬಲಿಸುತ್ತಿರುತ್ತಾನೆ.

ಇದನ್ನೂ ಓದಿ:ಫ್ಯಾನ್ಸ್​ ಊಹಿಸಿದ್ದು ನಿಜವಾಗಿದೆ.. ಕನ್ನಡ ರಾಜ್ಯೋತ್ಸವ ದಿನವೇ ಗುಡ್​ನ್ಯೂಸ್​ ಕೊಟ್ಟ ಹರಿಪ್ರಿಯಾ ವಸಿಷ್ಠ ಜೋಡಿ

publive-image

ಇತ್ತಿಚೀಗೆ ವೆಂಕಿ ಮದುವೆ ಆಗಿ ಚೆಲ್ವಿ ಅನ್ನೋ ಸುಂದರಿನ ಮನೆ ತುಂಬಿಸಿಕೊಂಡಿದ್ದಾನೆ. ವೆಂಕಿ-ಚೆಲ್ವಿ ಜೋಡಿಗೆ ವೀಕ್ಷಕರು ಫಿದಾ ಆಗಿದ್ದಾರೆ. ಇವತ್ತು ನಾವು ಚೆಲ್ವಿ ಪಾತ್ರದ ಬಗ್ಗೆ ಒಂದಿಷ್ಟು ಇಂಟ್ರಸ್ಟಿಂಗ್​ ವಿಚಾರಗಳನ್ನು ಹೊತ್ತು ತಂದಿದ್ದೇವೆ. ಚೆಲ್ವಿ ಪಾತ್ರ ಮಾಡ್ತಿರೋದು ಅಶ್ವಿನ್​ ಆರ್ ಮೂರ್ತಿ​. ಒಬ್ಬಳೆ ಮಗಳಾಗಿರೋ ಅಶ್ವಿನಿ ತಾಯಿಯ ಜೊತೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

publive-image

ಚಿಕ್ಕ ವಯಸ್ಸಿನಿಂದ ಅಭಿನಯದ ಬಗ್ಗೆ ಆಸಕ್ತಿ ಹೊಂದಿದ್ದ ಅಶ್ವಿನಿ ಅವ್ರು ಲಕ್ಷಣ, ಅಮೃತಧಾರೆ, ಮರಳಿ ಮನಸ್ಸಾಗಿದೆ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ನಟನೆಯ ಜೊತೆ ಸ್ವಂತ ಬಿಸಿನೆಸ್ ಮಾಡಬೇಕು ಅಂತ ಕನಸು ಕಂಡಿದ್ದ ಚಲುವೆ ರಾಜರಾಜೇಶ್ವರಿ ನಗರದಲ್ಲಿ ಬ್ಯೂಟಿ ಸಲೋನ್​ ಹಾಗೂ ಕಾಸ್ಟ್ಯೂಮ್​ ಬಾಡಿಗೆಗೆ ಕೊಡೋ ವಸ್ತ್ರ ವಿಲ್ಲಾ ಬೈ ಅಶ್ವಿನಿ ಎಂಬ ಶಾಪ್​ನ ಒಡತಿಯಾಗಿದ್ದಾರೆ.

publive-image

ಸ್ವಾಲಂಬಿಯಾಗಿ ಬದುಕು ಕಟ್ಟಿಕೊಳ್ಳೋ ಅದೆಷ್ಟೋ ಹೆಣ್ಮಕ್ಕಳಿಗೆ ಸ್ಪೂರ್ತಿಯಾಗಿದ್ದಾ ಲಕ್ಷ್ಮೀ ನಿವಾಸದ ಈ ಚಲುವೆ. ಸೀರಿಯಲ್​ನಲ್ಲಿ ಡೀ ಗ್ಲಾಮರ್​ ಆಗಿ ಕಾಣಿಸಿಕೊಳ್ಳುವ ಅಶ್ವಿನಿ ಅವ್ರು ಮಾಡ್ರನ್​ ಲುಕ್​ನಲ್ಲೂ ಮುದ್ದಾಗಿಯೇ ಕಾಣ್ತಾರೆ. ಇತ್ತಿಚೀಗೆ ಅವ್ರು ಮಾಡಿಸಿದ ಒಂದಿಷ್ಟು ಫೋಟೋಸೂಟ್​ ಇಲ್ಲಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment