Advertisment

ಸೋತಲ್ಲೇ ಗೆದ್ದಳು, ಬಿದ್ದಲ್ಲೇ ಎದ್ದಳು‌.. ಶಾ‘ಕಾರಿ ರಿಚರ್ಡ್ಸನ್ ಲೈಫ್​ ಜರ್ನಿಯೇ ಥ್ರಿಲಿಂಗ್ ಸ್ಟೋರಿ; ತಪ್ಪದೇ ಓದಿ!

author-image
Veena Gangani
Updated On
ಸೋತಲ್ಲೇ ಗೆದ್ದಳು, ಬಿದ್ದಲ್ಲೇ ಎದ್ದಳು‌.. ಶಾ‘ಕಾರಿ ರಿಚರ್ಡ್ಸನ್ ಲೈಫ್​ ಜರ್ನಿಯೇ ಥ್ರಿಲಿಂಗ್ ಸ್ಟೋರಿ; ತಪ್ಪದೇ ಓದಿ!
Advertisment
  • ಬ್ಯಾನ್​​ ಜಂಜಾಟದಲ್ಲಿ ಸಿಲುಕಿ ಒದ್ದಾಡಿದ್ದ ಓಟಗಾರ್ತಿ ರಿಚರ್ಡ್ ಸನ್
  • 2023ರ ಅಥ್ಲೆಟಿಕ್ ವರ್ಲ್ಡ್ ಚಾಂಪಿಯನ್ ಶಿಪ್​ನಲ್ಲೂ ಶಾ ಕಾರಿ ರೆಕಾರ್ಡ್​​
  • ನನಗೆ ಗರ್ಲ್ ಫ್ರೆಂಡ್ ಇದ್ದಾಳೆ ಅಂತ ಅಚ್ಚರಿ ಮೂಡಿಸಿದ್ದ ಅಥ್ಲೆಟ್‌

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 100 ಮೀಟರ್ ಓಟದಲ್ಲಿ ಇದೊಂದು ಹುಡುಗಿ ಚಿನ್ನ ಗೆದ್ದೇ ಗೆಲ್ತಾಳೆ ಅಂತ ಪ್ರತಿಯೊಬ್ಬರು ಅಂದುಕೊಂಡಿದ್ದರು. ಆದ್ರೆ ಬೆಂಗಳೂರಿಗಿಂತ ಬಹಳ ಚಿಕ್ಕದಾಗಿರೋ ದೇಶದಿಂದ ಬಂದ ಆಟಗಾರ್ತಿ ಈಕೆಯನ್ನ ಸೋಲಿಸಿದ್ದಳು. ಹೀಗಾಗಿ ಈಕೆ ಚಿನ್ನದ ಬದಲಿಗೆ ಬೆಳ್ಳಿ ಪದಕ ಮುಡಿಗೇರಿಸಿಕೊಂಡಳು. ಆದ್ರೆ ಚಿನ್ನ ಗೆದ್ದವಳಿಗಿಂತ ಬೆಳ್ಳಿ ಗೆದ್ದವಳ ಲೈಫ್​ ಸ್ಟೋರಿಯೇ ಎಲ್ಲರನ್ನು ಹೆಚ್ಚು ಕಾಡ್ತಿದೆ. ಕಾರಣ ಈಕೆ ಜೀವನದಲ್ಲಿ ಆಗಿದ್ದ ಮ್ಯಾಸಿವ್​ ಏರಿಳಿತ! ಈಕೆಯ ನಿರ್ಧಾರಗಳು.

Advertisment

publive-image

ಇದನ್ನೂ ಓದಿ:‘ನಾನು ಸೋತಿದ್ದೇನೆ, ಆದರೆ..’ ನೋವಿನಲ್ಲೇ ಕುಸ್ತಿಗೆ ವಿದಾಯ.. ಫೋಗಟ್ ಭಾವುಕ ಪೋಸ್ಟ್​ನಲ್ಲಿ ಏನಿದೆ..?

24 ವರ್ಷದ ಶಾ ಕ್ಯಾರಿ ರಿಚರ್ಡ್ಸನ್. ಒಲಿಂಪಿಕ್ಸ್​​ನಲ್ಲಿ ನೂರು ಮೀಟರ್​ ಓಟದಲ್ಲಿ ಬೆಳ್ಳಿ ಗೆದ್ದಿದ್ದಾಳೆ. ಆದ್ರೆ ಸೋಶಿಯಲ್​ ಮೀಡಿಯಾದಲ್ಲಿ ಈಕೆಯ ಲುಕ್​, ಲೈಫ್​​ ಹಿಸ್ಟ್ರಿ ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ. ಈಕೆ ನೋಡೋಕೆ ಕೃಷ್ಣ ಸುಂದರಿ, ಉದ್ದುದ್ದ ಉಗುರು ಬೆಳೆಸ್ತಾಳೆ. ಹೇರ್​ ಕಲರ್​ ಮಾಡೋದ್​ ಅಂದ್ರೆ ಈಕೆಗೆ ಒಂಥರಾ ಕ್ರೇಜ್​​. ಬ್ಲೂ, ಪರ್ಪಲ್​​, ರೆಡ್​ ಹೀಗೆ ಬೇರೆ ಬೇರೆ ಬಣ್ಣಗಳ ಹೇರ್​ಸ್ಟೈಲ್​ನಲ್ಲಿ ಈಕೆ ಕಾಣಿಸಿಕೊಳ್ಳುತ್ತಾಳೆ. ಶಾ ಕ್ಯಾರಿ ಸಣ್ಣ ವಯಸ್ಸಿನ್ನಲ್ಲೇ ಹೆತ್ತವರಿಂದ ದೂರವಾಗಿದ್ಲು. ಅಜ್ಜಿ, ಚಿಕ್ಕಮ್ಮನ ಆಸರೆಯಲ್ಲಿ ಬೆಳೆದಿದ್ಲು. ಹೈಸ್ಕೂಲ್​ನಲ್ಲಿದ್ದಾಗ ಖಿನ್ನತೆಗೆ ಒಳಗಾಗಿ ಸೂಸೈಡ್​ ಅಟೆಂಪ್ಟ್​​ ಕೂಡ ಮಾಡಿದ್ದಳು. ಆದ್ರೆ, ಹೇಗೋ ಇವಳ ಅಜ್ಜಿ ಉಳಿಸಿಕೊಂಡಿದ್ದಳು.

publive-image

ಆ ವಯಸ್ಸಿನಲ್ಲೇ ಈಕೆಗೆ ಮನೋವೈದ್ಯರು ಟ್ರೀಟ್​ಮೆಂಟ್ ಕೂಡ​ ಕೊಟ್ಟಿದ್ದರು. ಹೀಗೆ ಸಣ್ಣ ವಯಸ್ಸಿನಲ್ಲೇ ಸಾಕಷ್ಟು ಏಳುಬೀಳುಗಳನ್ನ ಕಂಡಿದ್ದ ಈಕೆಗೆ ಕ್ರೀಡೆ​ ಮೇಲೆ ಸಿಕ್ಕಾಪಟ್ಟೆ ಆಸಕ್ತಿ ಇತ್ತು. ಹೀಗಾಗಿ ಒಲಿಂಪಿಕ್ಸ್ ಕ್ವಾಲಿಫೈ ರೌಡ್​​ ಆಡೋಕೆ ಪ್ರಿಪೇರ್​ ಆಗುತ್ತಿದ್ದಳು. ಆದ್ರೆ, ಈ ಟೈಮ್​ನಲ್ಲಿ ಈಕೆಗೆ ಒಂದು ಆಘಾತ ಎದುರಾಗುತ್ತೆ. ಅದೇನಪ್ಪಾ ಅಂದ್ರೆ ಅಲ್ಲಿಯವರೆಗೂ ತನ್ನ ತಾಯಿ ಇವಳಿಂದ ದೂರ ಆಗಿದ್ದಾಳೆ ಅನ್ಕೊಂಡಿದ್ದ ಶಾ ಕ್ಯಾರಿಗೆ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಯಿಂದ ತಾಯಿ ಇನ್ನಿಲ್ಲ ಅನ್ನೋದು ಗೊತ್ತಾಗುತ್ತೆ. ಅಂದ್ರೆ ಜರ್ನಲಿಸ್ಟ್​ ಕೇಳಿದ ಪ್ರಶ್ನೆಯಿಂದಲೇ ಅವಳಿಗೆ ಈ ವಿಚಾರ ಗೊತ್ತಾಗುತ್ತೆ. ಈ ವಿಚಾರ ಗೊತ್ತಾದ್ಮೇಲಂತೂ ರಿಚರ್ಡ್‌ಸನ್ ಡಿಪ್ರೆಶನ್​ಗೆ ಒಳಗಾಗಿದ್ದಳು. ತನ್ನೋಳಗಿದ್ದ ಆ ಸಿಟ್ಟು, ಹತಾಶೆ, ನೋವು ಅವಳನ್ನ ಗಾಂಜಾ ಸೇವಿಸುವಂತೆ ಮಾಡಿತ್ತು. ಆದ್ರೆ, ಇದೇ ಅವಳಿಗೆ ಮುಳುವಾಗಿತ್ತು. ಹೆಲ್ತ್​ ಟೆಸ್ಟ್​ ಮಾಡ್ದಾಗ ಗಾಂಜಾ ಸೇವಿಸಿರೋದು ಗೊತ್ತಾಗಿ ಒಲಿಂಪಿಕ್ಸ್​ನಲ್ಲಿ ಆಡೋ ಚಾನ್ಸ್​​ ಮಿಸ್​ ಆಗ್ಬಿಡುತ್ತೆ.

Advertisment

ಇದನ್ನೂ ಓದಿ: ಉಸೇನ್ ಬೋಲ್ಟ್​ ಅನ್ನೇ ಮೀರಿಸುತ್ತಾಳಾ ಶಾ ಕಾರಿ; ಇವಳು ಗುರಿ ಮುಟ್ಟೋ ಶೈಲಿಯೇ ಡಿಫರೆಂಟ್; ಏನದು?

publive-image

ಇಲ್ಲಿಂದ ಈಕೆಯ ಜರ್ನಿ ಮತ್ತೊಂದು ಹಂತಕ್ಕೆ ಕರೆದುಕಕೊಂಡು ಹೋಗುತ್ತೆ. ಅದೇನಪ್ಪಾ ಅಂದ್ರೆ 2019ರಲ್ಲಿ ಪಂದ್ಯಾವಳಿಯೊಂದರಲ್ಲಿ ಕೇವಲ 10.75 ಸೆಕೆಂಡ್​ಗಳಲ್ಲಿ 100 ಮೀಟರ್ ಓಡಿ ರೆಕಾರ್ಡ್​​ ಬ್ರೇಕ್​ ಮಾಡ್ತಾಳೆ. ಮಹಿಳೆಯರ ಪಂದ್ಯಾವಳಿಯ 100 ಮೀಟರ್ ಓಟದ ಇತಿಹಾಸದಲ್ಲಿ ಹತ್ತು ಅತಿವೇಗದ ಓಟಗಳಲ್ಲಿ ಈ ಓಟವೂ ಒಂದಾಗಿ ಬೀಡುತ್ತೆ. ಆದ್ರೆ, ಗಾಂಜಾ ಅಡಿಕ್ಟ್​ ಆಗಿದ್ರಿಂದ ಬ್ಯಾನ್​ ಆಗಿದ್ದಳು. ಆದ್ರೆ ಇವಳ ಬೆಂಬಲಿಗರು ಈಕೆ ಕೈ ಬಿಡಲಿಲ್ಲ. ಎಷ್ಟರ ಮಟ್ಟಿಗೆ ಬೆಂಬಲ ಸಿಗುತ್ತೆ ಅಂದ್ರೆ ಕೊನೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸಹ ಈಕೆಯ ಪರವಾಗಿ ಮಾತಾಡಿದ್ರು.

publive-image

ರಿಚರ್ಡ್ ಸನ್ ಈ ಬ್ಯಾನ್​​ ಜಂಜಾಟದಲ್ಲಿ ಸಿಲುಕಿ ಒದ್ದಾಡ್ತಿದ್ಲು. ಆದ್ರೆ ಬಳಿಕ, ಹೌದು ಗಾಂಜಾ ಸೇವಿಸಿದ್ದೆ ಅನ್ನೋದನ್ನ ಒಪ್ಕೊಂಡಿದ್ದಳು. ಮತ್ತೆ ಒಂದು ತಿಂಗಳು ಬ್ಯಾನ್​ ಆಗಿದ್ಲು, ಆದ್ರೆ ತನ್ನ ಸ್ತೈರ್ಯವನ್ನ ಈಕೆ ಬಿಡಲಿಲ್ಲ. 2023ರ ಅಥ್ಲೆಟಿಕ್ ವರ್ಲ್ಡ್ ಚಾಂಪಿಯನ್ ಶಿಪ್​ನಲ್ಲಿ ನೂರು ಮೀಟರ್ ಓಟದಲ್ಲಿ ಚಿನ್ನ ಗೆದ್ದಳು. ಅದೇ ಪಂದ್ಯಾವಳಿಯಲ್ಲಿ ರಿಲೇಯಲ್ಲೂ ಚಿನ್ನ ಗೆದ್ದಳು. 200 ಮೀಟರ್ ಓಟದಲ್ಲಿ ಕಂಚು ಗೆದ್ದಳು. ಇನ್ನೆಲ್ಲಾ ಸರಿ ಆಗ್ತಿದೆ ಅನ್ನೋ ಅಷ್ಟರಲ್ಲಿ ಮತ್ತೊಂದು ವಿಚಾರ ಚರ್ಚೆಗೆ ಕಾರಣವಾಯ್ತು. ಇದ್ದಕ್ಕಿದ್ದಂತೆ ಅವಳು ನನಗೆ ಗರ್ಲ್ ಫ್ರೆಂಡ್ ಇದ್ದಾಳೆ ಅಂತ ಬಹಿರಂಗ ಪಡಿಸಿದ್ಲು. ಆಗ್ಲೇ ನೋಡಿ ಆಕೆ ಬೈಸೆಕ್ಷುಯಲ್ ಅನ್ನೋದು ಜಗ್ಗತ್ತಿಗೆ ಗೊತ್ತಾಗೋದು. ಇದಾದ ಮೇಲೆ ತನ್ನ ಸಮುದಾಯದ ಜನಾಂಗದ ಪರವಾಗಿ ಧ್ವನಿ ಎತ್ತೊ ಕೆಲಸವನ್ನ ಈಕೆ ಮಾಡೋಕೆ ಶುರುಮಾಡಿದ್ದಳು. ವರ್ಣ ತಾರತಮ್ಯದ ಬಗ್ಗೆಯೂ ಈಕೆ ಧ್ವನಿ ಎತ್ತಿದ್ದಾಳೆ. ಹೋರಾಟಗಳಲ್ಲಿ ಭಾಗಿಯಾಗಿದ್ದಾಳೆ. ಒಟ್ಟಿನಲ್ಲಿ ಈಕೆಯ ಲೈಫ್​ ಜರ್ನಿಯೇ ಥ್ರಿಲಿಂಗ್​ ಆಗಿದ್ದು, ಕಥೆ ಕೇಳಿದವ್ರು ಶಹಬ್ಬಾಸ್‌​ ಅಂತಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment