ಏ..! ನಿಮ್ಮ ವಯಸ್ಸು ಎಷ್ಟು..? ಹಾಗಿದ್ದರೆ ಪ್ರತಿದಿನ ನೀವು ಎಷ್ಟು ಹೆಜ್ಜೆ ನಡೆಯಬೇಕು ಗೊತ್ತೇ..?

author-image
Ganesh
Updated On
ಏ..! ನಿಮ್ಮ ವಯಸ್ಸು ಎಷ್ಟು..? ಹಾಗಿದ್ದರೆ ಪ್ರತಿದಿನ ನೀವು ಎಷ್ಟು ಹೆಜ್ಜೆ ನಡೆಯಬೇಕು ಗೊತ್ತೇ..?
Advertisment
  • ನಿತ್ಯ ವಾಕಿಂಗ್ ಮಾಡಿ, ಲೈಫ್ ಲೈಟ್ ಆಗಿರುತ್ತೆ..!
  • ವಾಕಿಂಗ್ ಮಾಡೋದ್ರಿಂದ ಆರೋಗ್ಯ ಸಮಸ್ಯೆಗೆ ಕತ್ತರಿ
  • ಒಂದು ದಿನದಲ್ಲಿ ಮಕ್ಕಳು ಎಷ್ಟು ಗಂಟೆ ಆಡಬೇಕು?

ಇತ್ತೀಚಿನ ದಿನಗಳಲ್ಲಿ ದೈಹಿಕ ಚಟುವಟಿಕೆಗಳು ಸಂಪೂರ್ಣವಾಗಿ ಕಡಿಮೆಯಾಗಿವೆ. ವ್ಯಾಯಾಮ ಮಾಡುವವರೂ ಗಣನೀಯವಾಗಿ ಕಡಿಮೆ ಮಾಡಿದ್ದಾರೆ. ಗಂಟೆಗಟ್ಟಲೇ ಟಿವಿ ಮುಂದೆ ಕುಳಿತು ಸ್ಮಾರ್ಟ್‌ಫೋನ್‌ಗಳೊಂದಿಗೆ ಕಿತ್ತಾಡುತ್ತಾ ಅನೇಕರು ಸಮಸ್ಯೆಗಳನ್ನು ಎದುರಿಸ್ತಿದ್ದಾರೆ. ನಮ್ಮಲ್ಲಿರುವ ಎಲ್ಲಾ ಸಮಸ್ಯೆಗಳಿಗೂ ಸರಿಯಾದ ಮದ್ದು ವಾಕಿಂಗ್ ಎನ್ನುತ್ತಾರೆ ತಜ್ಞರು.

ಆರೋಗ್ಯ ಸರಿಯಾಗಿ ಇರಬೇಕು ಎಂದರೆ ನಿತ್ಯ ವಾಕಿಂಗ್ ಮಾಡಬೇಕು. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ಪ್ರಕಾರ.. ಬಹುತೇಕ ಎಲ್ಲರೂ ದಿನಕ್ಕೆ ಕನಿಷ್ಠ 3 ಕಿಲೋ ಮೀಟರ್ ನಡೆಯಬೇಕು. ಕನಿಷ್ಠ 30 ನಿಮಿಷ ನಡೆಯಬೇಕು ಎನ್ನುತ್ತಾರೆ ತಜ್ಞರು.
ವಿಶೇಷವಾಗಿ ಯುವಜನರು ಪ್ರತಿದಿನ ವ್ಯಾಯಾಮ ಮಾಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಆದರೆ ಒಬ್ಬ ವ್ಯಕ್ತಿಯು ಎಷ್ಟು ದೂರ ನಡೆಯಬೇಕು ಅನ್ನೋದು ಅವರ ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ.

publive-image

60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಆರೋಗ್ಯವಾಗಿರಲು ಪ್ರತಿದಿನ 8,000 ರಿಂದ 10,000 ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು. 60 ವರ್ಷ ಮೇಲ್ಪಟ್ಟವರು ದಿನಕ್ಕೆ 6,000 ರಿಂದ 8,000 ಹೆಜ್ಜೆಗಳನ್ನು ನಡೆಯಬೇಕು ಎಂದು ಹಾರ್ವರ್ಡ್ ವೈದ್ಯಕೀಯ ಸಂಶೋಧಕರು ತಿಳಿಸಿದ್ದಾರೆ. ಪ್ರತಿನಿತ್ಯ ಬೆಳಗ್ಗೆ ಅಥವಾ ಸಂಜೆ ಕನಿಷ್ಠ 4 ರಿಂದ 5 ಕಿಲೋಮೀಟರ್ ಗಳವರೆಗೆ ಚುರುಕಾಗಿ ನಡೆದರೆ ಬಹಳಷ್ಟು ಒಳ್ಳೆಯದಾಗುತ್ತದೆ. 6 ರಿಂದ 17 ವರ್ಷ ವಯಸ್ಸಿನ ಮಕ್ಕಳು ದಿನಕ್ಕೆ ಕನಿಷ್ಠ 60 ನಿಮಿಷಗಳ ಕಾಲ ಆಟವಾಡಬೇಕು ಮತ್ತು ಓಡಬೇಕು ಎಂದಿದ್ದಾರೆ.

ಇದನ್ನೂ ಓದಿ:ಬಿಗ್​ಬಿ ಫಿಟ್ನೆಸ್​ ಗುಟ್ಟು! ಈ ಪದಾರ್ಥಗಳನ್ನ ತಿನ್ನೋದೇ ಇಲ್ಲ, ಎಷ್ಟು ಗಂಟೆ ನಿದ್ದೆ ಮಾಡ್ತಾರೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment