/newsfirstlive-kannada/media/media_files/2025/10/03/shreyanka-patil-5-2025-10-03-10-38-08.jpg)
/newsfirstlive-kannada/media/media_files/2025/10/03/shreyanka-patil-6-2025-10-03-10-39-44.jpg)
ಟೀಂ ಇಂಡಿಯಾ ಆಟಗಾರ್ತಿ, ಆರ್ಸಿಬಿ ಸ್ಟಾರ್ ಶ್ರೇಯಾಂಕ ಪಾಟೀಲ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಇರ್ತಾರೆ. ಅಂತೆಯೇ ನಿನ್ನೆ ಕಪ್ಪು ಬಣ್ಣದ ಡ್ರೆಸ್ನಲ್ಲಿ ಕೆಲವು ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದು, ಟ್ರೆಂಡಿಂಗ್ನಲ್ಲಿದೆ.
/newsfirstlive-kannada/media/media_files/2025/10/03/shreyanka-patil-2025-10-03-10-40-21.jpg)
ಕಪ್ಪು ಬಣ್ಣದ ಡ್ರೆಸ್ನೊಂದಿಗೆ ತೆಗೆಸಿಕೊಂಡಿರುವ ಫೋಟೋ ಶೇರ್ ಮಾಡಿರುವ ಅವರು Black is beautiful ಎಂದು ಬರೆದು ಲವ್ ಸಿಂಬಲ್ ಹಾಕಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
/newsfirstlive-kannada/media/media_files/2025/10/03/shreyanka-patil-3-2025-10-03-10-40-38.jpg)
ಪ್ರಸ್ತುತ ಮಹಿಳೆಯರ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಬ್ಯುಸಿ ಆಗಿದೆ. ಶ್ರೇಯಾಂಕ ಪಾಟೀಲ್ ಟೀಂ ಇಂಡಿಯಾದ ಭಾಗವಾಗಿಲ್ಲ. ಸದ್ಯ ಫ್ರೀ ಆಗಿರುವ ಶ್ರೇಯಾಂಕ ಪಾಟೀಲ್, ದಸರಾ ಸಂಭ್ರಮದಲ್ಲಿ ಫುಲ್ ಹ್ಯಾಪಿ ಆಗಿದ್ದಾರೆ.
/newsfirstlive-kannada/media/media_files/2025/10/03/shreyanka-patil-2-2025-10-03-10-40-58.jpg)
ಇತ್ತೀಚೆಗೆ ಶ್ರೇಯಾಂಕ ಪಾಟೀಲ್ WCPL 2025ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಶ್ರೇಯಾಂಕಾ ಪಾಟೀಲ್ ಆಡಿದ ತಂಡವು ಚಾಂಪಿಯನ್ ಆಗಿದೆ. ಬಾರ್ಬಡೋಸ್ ರಾಯಲ್ಸ್ ತಂಡವು ಗಯಾನಾ ಅಮೆಜಾನ್ ವಾರಿಯರ್ಸ್ ತಂಡವನ್ನು ಮೂರು ವಿಕೆಟ್ಗಳಿಂದ ಸೋಲಿಸಿ ಟ್ರೋಫಿಗೆ ಮುತ್ತಿಟ್ಟಿದೆ. ಈ ತಂಡದಲ್ಲಿ ಶ್ರೇಯಾಂಕ ಪಾಟೀಲ್ ಇದ್ದರು ಅನ್ನೋದು ವಿಶೇಷ.
/newsfirstlive-kannada/media/media_files/2025/09/04/shreyanka-patil-4-2025-09-04-15-28-39.jpg)
ಶ್ರೇಯಾಂಕಾ ಪಾಟೀಲ್.. ಆರ್ಸಿಬಿ ಅಭಿಮಾನಿಗಳ ಪಾಲಿನ ನೆಚ್ಚಿನ ಟಗರುಪುಟ್ಟಿ. ಕ್ರಿಕೆಟ್ ಲೋಕಕ್ಕೆ ಕಾಲಿಟ್ಟ ಕೆಲವೇ ವರ್ಷಗಳಲ್ಲಿ ವಿಶ್ವ ಪ್ರಸಿದ್ಧಿ ಪಡೆದ ಆಲ್ರೌಂಡರ್. ಆನ್ಫೀಲ್ಡ್ನಲ್ಲಿ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮೂರರಲ್ಲೂ ಸಾಲಿಡ್ ಪರ್ಫಾಮೆನ್ಸ್ ನೀಡಿ ಶ್ರೇಯಾಂಕಾ ಮಿಂಚಿದ್ದಾರೆ.
/newsfirstlive-kannada/media/post_attachments/wp-content/uploads/2024/08/SHREYANKA-PATIL.jpg)
ಆನ್ಫೀಲ್ಡ್ ಆಟಕ್ಕಿಂತ ಶ್ರೇಯಾಂಕಾ ಆಫ್ ದ ಫೀಲ್ಡ್ ಆ್ಯಕ್ಟಿವಿಟಿಗೆ ಫಿದಾ ಆದ ಫ್ಯಾನ್ಸ್ ಹೆಚ್ಚಿದ್ದಾರೆ. ಅದ್ರಲ್ಲೂ, ಕನ್ನಡತಿಯ ಡಾನ್ಸ್ಗೆ ಕಳೆದೇಹೋದ ಅಭಿಮಾನಿಗಳಿದ್ದಾರೆ. ಶ್ರೇಯಾಂಕಾ ಪಾಟೀಲ್ ಯಾವುದೇ ಡಾನ್ಸ್ ವಿಡಿಯೋ ಅಪ್ಲೋಡ್ ಮಾಡಲಿ.. ಮಿಲಿಯನ್ಗಟ್ಟಲೇ ವೀವ್ಸ್ ಪಕ್ಕಾ.