/newsfirstlive-kannada/media/media_files/2025/09/05/hardik-pandya-new-look-1-2025-09-05-17-57-47.jpg)
/newsfirstlive-kannada/media/media_files/2025/09/05/hardik-pandya-new-look-2025-09-05-17-58-03.jpg)
ಟಿ20 ಏಷ್ಯಾ ಕಪ್ ಟೂರ್ನಿ ಇದೇ ಸೆಪ್ಟೆಂಬರ್ 9 ರಿಂದ ಆರಂಭವಾಗಲಿದೆ. ಒಟ್ಟು 8 ತಂಡಗಳು ಇದರಲ್ಲಿ ಪಾಲ್ಗೊಳ್ಳಲಿದ್ದು ಹಾಂಗ್ ಕಾಂಗ್ ಹಾಗೂ ಅಫ್ಘಾನಿಸ್ತಾನ್ ನಡುವೆ ಮೊದಲ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್ ಆಗಿರುವ ಟೀಮ್ ಇಂಡಿಯಾ ಮತ್ತೊಮ್ಮೆ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಈ ಎಲ್ಲದರ ಮಧ್ಯೆ ಕ್ಯಾಪ್ಟನ್ ಸೂರ್ಯಕುಮಾರ್, ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ವಿಶೇಷ ಅಂದ್ರೆ ಹಾರ್ದಿಕ್ ಪಾಂಡ್ಯರ ಹೊಸ ಲುಕ್ ಎಲ್ಲರ ಗಮನ ಸೆಳೆದಿದೆ.
/newsfirstlive-kannada/media/media_files/2025/09/05/hardik-pandya-new-look-4-2025-09-05-17-58-25.jpg)
ಸೋಶಿಯಲ್ ಮಿಡಿಯಾದಲ್ಲಿ ಹಾರ್ದಿಕ್ ಪಾಂಡ್ಯರ ಹೊಸ ಲುಕ್ ಸಂಚಲ ಸೃಷ್ಟಿಸುತ್ತಿದೆ. ಸ್ವತಃ ಪಾಂಡ್ಯ ಅವರೇ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹೊಸ ಹೇರ್ಸ್ಟೈಲ್ನೊಂದಿಗಿನ ನ್ಯೂ ಲುಕ್ ಫೋಟೋ ಶೇರ್ ಮಾಡಿದ್ದಾರೆ. ಫೋಟೋ ಶೇರ್ ಮಾಡಿರೋ ಪಾಂಡ್ಯ New me ಅಂತಾ ಕ್ಯಾಪ್ಷನ್ ಹಾಕಿದ್ದಾರೆ.
/newsfirstlive-kannada/media/media_files/2025/09/05/hardik-pandya-new-look-3-2025-09-05-17-58-42.jpg)
ಹಾರ್ದಿಕ್ ಪಾಂಡ್ಯರ ಲೈಫ್ ಸ್ಟ್ರೈಲ್, ಫಿಟ್ನೆಸ್, ಫ್ಯಾಷನ್ ಯುವಕರಿಗೆ ಅಚ್ಚುಮೆಚ್ಚು. ಪ್ರತಿಷ್ಠಿತ ಕಂಪನಿಗಳ ಬಹುತೇಕ ಟಾರ್ಗೆಟ್ ಯುವಕರು. ಹೀಗಾಗಿ ಯುವಕರನ್ನೇ ಟಾರ್ಗೆಟ್ ಮಾಡುವ ಕಂಪನಿಗಳಿಗೆ ಹಾರ್ದಿಕ್ ಪಾಂಡ್ಯನೇ ಬೆಸ್ಟ್ ಚಾಯ್ಸ್. ಹಾರ್ದಿಕ್ ಪಾಂಡ್ಯ ರಾಯಭಾರಿ ಕಂಪನಿಗಳು ವೃದ್ಧಿ ಶೇಖಡ 25ರಷ್ಟಿದೆ.
/newsfirstlive-kannada/media/media_files/2025/09/05/hardik-pandya-new-look-2-2025-09-05-17-59-17.jpg)
ಹಲವು ಬ್ರಾಂಡ್ಗಳ ರಾಯಭಾರಿಯಾಗಿರುವ ಹಾರ್ದಿಕ್ ಪಾಂಡ್ಯ, ಇನ್ಸ್ಟಾದಲ್ಲಿ ಬ್ರ್ಯಾಂಡ್ ಪ್ರಮೋಷನ್ ಪೋಸ್ಟ್ಗೆ 80 ಲಕ್ಷಕ್ಕೂ ಅಧಿಕ ಚಾರ್ಜ್ ಮಾಡ್ತಾರೆ. ಪ್ರಮುಖವಾಗಿ ಆಟೋ ಮೊಬೈಲ್ಸ್, ಕಾರು, ಮೊಬೈಲ್ಸ್, ಹೆಲ್ತ್, ಫಿಟ್ನೆಸ್, ಇ-ಕಾಮರ್ಸ್, ವಿಡಿಯೋ ಗೇಮ್ಸ್ಗಳನ್ನ ಪ್ರಮೋಟ್ ಮಾಡುವ ಹಾರ್ದಿಕ್, ಇನ್ಸ್ಟಾ ಡಿಜಿಟಲ್ ಮಾರ್ಕೆಟಿಂಗ್ನಿಂದಲೇ 15 ಕೋಟಿಗೂ ಅಧಿಕ ಆದಾಯ ಗಳಿಸ್ತಾರೆ.
/newsfirstlive-kannada/media/media_files/2025/09/05/suryakumar_pandya-2025-09-05-09-35-14.jpg)
ಪ್ರತಿಷ್ಠಿತ ಕಂಪನಿಗಳ ರಾಯಭಾರಿಯಾಗಿರುವ ಹಾರ್ದಿಕ್, ಸದ್ಯ 20 ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಬ್ರ್ಯಾಂಡ್ಗಳ ಒಂದೊಂದು ಶೂಟ್ಗೆ ಬರೋಬ್ಬರಿ 2.5 ಕೋಟಿ ಚಾರ್ಜ್ ಮಾಡ್ತಾರಂತೆ. ವರ್ಷದಿಂದ ವರ್ಷಕ್ಕೆ ಖ್ಯಾತಿಯ ಜೊತೆಗೆ ಹಾರ್ದಿಕ್ ಆದಾಯವೂ ದುಪ್ಪಟ್ಟಾಗ್ತಿದೆ. 2022ರಲ್ಲಿ 34.8 ಮಿಲಿಯನ್ ಇದ್ದ ಬ್ರ್ಯಾಂಡ್ ವ್ಯಾಲ್ಯೂ, 2023ರಲ್ಲಿ 38.4 ಮಿಲಿಯನ್ಗೆ ಏರಿಕೆಯಾಗಿತ್ತು. 2024ರ ಅಂತ್ಯಕ್ಕೆ 40 ಮಿಲಿಯನ್ ಬ್ರ್ಯಾಂಡ್ ವಾಲ್ಯೂ ಹೊಂದಿದ್ದ ಹಾರ್ದಿಕ್, ಈ ವರ್ಷ ಮತ್ತಷ್ಟು ಗಳಿಸೋದು ಗ್ಯಾರಂಟಿ.