/newsfirstlive-kannada/media/media_files/2025/08/27/avneet-kaur-and-kohli-2025-08-27-22-14-58.jpg)
/newsfirstlive-kannada/media/media_files/2025/08/27/avneet-kaur-2025-08-27-22-15-35.jpg)
ಕ್ರಿಕೆಟ್ನಿಂದ ಆಟಗಾರರಿಗೆ ಕ್ರೇಜ್, ಫ್ಯಾನ್ ಫಾಲೋಯಿಂಗ್ ಸಿಗುತ್ತೆ. ಆಟಗಾರರ ಜೀವನ ಬದಲಾಗೋದು ನಾವ್ ನೋಡಿದ್ದೇವೆ. ಸ್ಟಾರ್ ಕ್ರಿಕೆಟಿಗರಿಂದ ಇತರರ ಬದುಕೇ ಬದಲಾದ ಹಲವು ಕಥೆಗಳಿವೆ. ಕೊಹ್ಲಿ ಮಾಡಿದ ಒಂದು ಮಿಸ್ಟೇಕ್ ಯುವ ನಟಿಯ ಬದುಕನ್ನೇ ಬದಲಾಯಿಸಿದೆ.
/newsfirstlive-kannada/media/media_files/2025/08/27/avneet-kaur-and-kohli-1-2025-08-27-22-15-52.jpg)
ಕೊಹ್ಲಿ ಫಾಲೋವರ್ಸ್ ಬಗ್ಗೆ ಹೇಳೋದೆ ಬೇಡ. ಕೊಹ್ಲಿಯ ಖ್ಯಾತಿ ಭಾರತ ಮಾತ್ರವಲ್ಲ. ದೇಶ ವಿದೇಶಕ್ಕೂ ಹರಡಿದೆ. ಕೊಹ್ಲಿಯ ಕ್ರಿಕೆಟ್ ಮಾತ್ರವಲ್ಲ. ಕೊಹ್ಲಿಯ ಉಡುಗೆ ತೊಡುಗೆ, ಫಿಟ್ನೆಸ್ ರೂಟಿನ್, ಸ್ಟೈಲ್ ಎಲ್ಲವನ್ನೂ ಅನುಕರಿಸೋ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಇನ್ಸ್ಸ್ಟಾಗ್ರಾಂನಲ್ಲೂ ಅಷ್ಟೇ.. ಕೊಹ್ಲಿ ಹಾಕೋ ಪೋಸ್ಟ್ಗಳು, ಲೈಕ್ಸ್, ಕಮೆಂಟ್ಸ್ ಎಲ್ಲವನ್ನ ಫ್ಯಾನ್ಸ್ ಗಮನಿಸ್ತಾರೆ. ಸಾಮಾನ್ಯವಾಗಿ ಕೊಹ್ಲಿ ಯಾರ ಪೋಸ್ಟ್ ಅನ್ನೋ ಲೈಕ್ ಮಾಡಲ್ಲ. ಅವತ್ತು ಏನಾಗಿತ್ತೋ ಏನೋ, ಬಾಲಿವುಡ್ ಬ್ಯೂಟಿಯ ಬೋಲ್ಡ್ ಫೋಟೋಗೆ ಕೊಹ್ಲಿ ಲೈಕ್ ಮಾಡಿದ್ರು.
/newsfirstlive-kannada/media/media_files/2025/08/27/avneet-kaur-and-kohli-2-2025-08-27-22-16-10.jpg)
ಬಾಲಿವುಡ್ ನಟಿ. ಲೈಕ್ ಎಂದಾಗಲೇ ನಿಮ್ಗೆ ಗೊತ್ತಾಗಿರುತ್ತೆ. ಇವರು ಹೇಳ್ತಿರೋದು ನಟಿ ಅವನೀತ್ ಕೌರ್ ಸ್ಟೋರಿ. ಅಂದು ಕಿಂಗ್ ಕೊಹ್ಲಿ ಅಚಾನಕ್ ಆಗಿ ಈಕೆಯ ಬೋಲ್ಡ್ ಫೋಟೋಗೆ ನೀಡಿದ್ರು. ಕೊಹ್ಲಿ ಲೈಕ್ ಮಾಡಿದ ಮೇಲೆ ಕೆಳಬೇಕಾ? ಅಂದಿನಿಂದ ಇವರೆಗೆ ಹಲವಾರು ಟ್ರೋಲ್ಗಳು, ಮೀಮ್ಸ್ಗಳು ಹರಿದಾಡ್ತಿವೆ. ಈ ನಡುವೆಯೇ ಬಾಲಿವುಡ್ ಬ್ಯೂಟಿ ಅವನೀತ್ ಕೌರ್, ಲವ್ ಇನ್ ವಿಯೆಟ್ನಾಂ ಸಿನಿಮಾ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಕೊಹ್ಲಿಯ ಲೈಕ್ ಕುರಿತು ಪ್ರತಿಕ್ರಿಯಿಸಿದ್ದಾರೆ.
/newsfirstlive-kannada/media/media_files/2025/08/27/avneet-kaur-and-kohli-3-2025-08-27-22-16-27.jpg)
ಅವನೀತ್ ಕೌರ್ಗೆ ಅದೃಷ್ಟ.!
ಕೊಹ್ಲಿ ಬೈ ಮಿಸ್ಟೇಕ್ನಿಂದ ಮಾಡಿದ ಆ ಒಂದು ಲೈಕ್ ಬೆಲೆ ಎಷ್ಟಿರಬಹುದು ಅಂತಾ ನೀವು ನಿಜಕ್ಕೂ ಊಹಿಸೋಕೂ ಆಗಲ್ಲ. ಅಂತಾ ಅದೃಷ್ಟ ಅವನೀತ್ ಕೌರ್ಗೆ ಖುಲಾಯಿಸಿದೆ. ಕೊಹ್ಲಿ ಲೈಕ್ ಮಾಡಿದ ಬೆನ್ನಲ್ಲೇ ಈ ಬಾಲಿವುಡ್ ನಟಿಯ ಫಾಲೋವರ್ಸ್ ಸಂಖ್ಯೆ ಸರ್ ಅಂತ ಏರಿದೆ. ನೀವು ನಂಬ್ತಿರೋ ಇಲ್ವೋ.. ತಮನ್ನಾ ಬಾಟಿಯಾ, ಜಾಹ್ನವಿ ಕಪೂರ್, ಅನನ್ಯಾ ಪಾಂಡೆ, ಪೂಜಾ ಹೆಗ್ಡೆ.. ಸಿನಿ ಅಂಗಳದಲ್ಲಿ ಸೌಂಡ್ ಮಾಡ್ತಿರೋ ಈ ಸ್ಟಾರ್ಗಳಿಗಿಂತ ಹೆಚ್ಚು ಫಾಲೋವರ್ಸ್ ಈಗ ಅವನೀತ್ ಕೌರ್ಗಿದ್ದಾರೆ. ಇನ್ಸ್ಸ್ಟಾ ಫಾಲೋವರ್ಗಳ ಸಂಖ್ಯೆ ಸದ್ಯ 31.6 ಮಿಲಿಯನ್ಗೇರಿದೆ. 1 ಮಿಲಿಯನ್ಗೂ ಅಧಿಕ ಫಾಲೋವರ್ಸ್ ಸಿಕ್ಕಿದ್ದಾರೆ.
/newsfirstlive-kannada/media/media_files/2025/08/27/avneet-kaur-and-kohli-4-2025-08-27-22-16-48.jpg)
12 ಬ್ರಾಂಡ್ಗಳ ಜೊತೆ ಅವನೀತ್ ಕೌರ್ ಡೀಲ್...!
ಕೊಹ್ಲಿಯ ಲೈಕ್-ಡಿಸ್ಲೈಕ್ ಕಾರಣಕ್ಕೆ ಸುದ್ದಿಯಾದ ಬಳಿಕ ಅವನೀತ್ ಕೌರ್ ಹಿಂದೆ ಜಾಹೀರಾತು ಕಂಪನಿಗಳು ಮುಗಿಬಿದ್ದಿವೆ. 12 ವಿವಿಧ ಜಾಹೀರಾತುಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಬ್ರ್ಯಾಂಡ್ವ್ಯಾಲ್ಯೂನಲ್ಲಿ ಗಣನೀಯ ಏರಿಕೆಯಾಗಿದೆ. ಶೇಖಡ 30ರಷ್ಟು ಬ್ರ್ಯಾಂಡ್ ವಾಲ್ಯೂ ಹೆಚ್ಚಾಗಿದೆ. ಈ ಹೊಸ ಒಪ್ಪಂದ, ಜಾಹೀರಾತುಗಳಿಂದ ಆದಾಯವೂ ದುಪ್ಪಾಟ್ಟಾಗಿದೆ.
/newsfirstlive-kannada/media/media_files/2025/08/27/avneet-kaur-and-kohli-5-2025-08-27-22-17-09.jpg)
ಕೌರ್ ಫುಲ್ ಕಾಸ್ಟ್ಲಿ..!
ಕೊಹ್ಲಿಯ ಲೈಕ್ ಕಾಂಟ್ರವರ್ಸಿಯಿಂದ ಅವನೀತ್ ಕೌರ್ಗೆ ಜನಪ್ರಿಯತೆ ಮಾತ್ರ ಸಿಕ್ಕಿಲ್ಲ. ಫಾಲೋವರ್ಗಳ ಸಂಖ್ಯೆ ಮಾತ್ರವೇ ಹೆಚ್ಚಾಗಿಲ್ಲ. ಆದಾಯವೂ ಹೆಚ್ಚಾಗಿದೆ. ಡಿಜಿಟಲ್ ಫ್ಲಾಟ್ಫಾರ್ಮ್ನಲ್ಲಿ ಮಾಡೋ ಜಾಹೀರಾತಿಗಳ ಪೋಸ್ಟ್ ಬೆಲೆಯೂ ಹೆಚ್ಚಾಗಿದೆ. ಒಂದು ಕಮರ್ಷಿಯಲ್ ಪೋಸ್ಟ್ಗೆ ಈಗ ಈಕೆ 2.6 ಲಕ್ಷ ಚಾರ್ಜ್ ಮಾಡ್ತಿದ್ದಾರಂತೆ. ಸಿನಿಮಾ ಕ್ಷೇತ್ರದಲ್ಲಿ ಮತ್ತಷ್ಟು ಅವಕಾಶಗಳ ಬಾಗಿಲು ತೆರೆಯುವ ಮುನ್ಸೂಚನೆ ಸಿಕ್ಕಿದೆಯಂತೆ.
/newsfirstlive-kannada/media/media_files/2025/08/27/avneet-kaur-and-kohli-2025-08-27-22-17-35.jpg)
ಕೊಹ್ಲಿ ಹೆಸರಿನಿಂದ ಸಿನಿಮಾಗೆ ಬಿಟ್ಟಿ ಪ್ರಮೋಷನ್
ಅವನೀತ್ ಕೌರ್ ನಟನೆಯ ಲವ್ ಇನ್ ವಿಯೆಟ್ನಾಂ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದೇ ಹೊತ್ತಿನಲ್ಲೇ ಟ್ರೈಲರ್ ಬಿಡುಗಡೆಯನ್ನು ಗೊಳಿಸಿದ್ದಾರೆ. ಟ್ರೈಲರ್ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿಯ ಲೈಕ್ ಬಗ್ಗೆ ಅವನೀತ್ ಕೌರ್, ಮೊದಲ ಬಾರಿ ತುಟಿಬಿಚ್ಚಿದ್ದಾರೆ. ಇದು ಲವ್ ಇನ್ ವಿಯೆಟ್ನಾಂ ಸಿನಿಮಾ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುವಂತೆ ಮಾಡಿದೆ. ಕೊಹ್ಲಿ ಹೆಸರಲ್ಲಿ ಬಿಟ್ಟಿ ಪ್ರಮೋಷನ್ ಸಿಕ್ಕಂತಾಗಿರುವುದು ಸುಳ್ಳಲ್ಲ.