/newsfirstlive-kannada/media/media_files/2025/08/28/kohli-and-anushka-sharma-2-2025-08-28-16-36-21.jpg)
/newsfirstlive-kannada/media/media_files/2025/08/28/rohit-dhoni-yuvaraj-singh-2025-08-28-16-40-03.jpg)
ಕ್ರಿಕೆಟರ್ಸ್.. ಇವರ ಆಟವೇ ಅಲ್ಲ. ಲೈಫ್ ಸ್ಟ್ರೈಲ್, ಇವರ ಸಕ್ಸಸ್ಫುಲ್ ಸ್ಟೋರಿಗಳ ಕುರಿತು ಕೇಳುವುದೇ ಸಖತ್ ಇಂಟ್ರೆಸ್ಟಿಂಗ್ ಕಥೆ. ಈ ಸಕ್ಸಸ್ಫುಲ್ ಕ್ರಿಕೆಟರ್ಗಳ ಪರ್ಸನಲ್ ಲೈಫ್ನಲ್ಲಿ ಎಲ್ಲರಿಗೂ ಕ್ಯೂರಿಯಾಸಿಟಿ ಹುಟ್ಟಿಸುತ್ತೆ. ಈ ಪೈಕಿ ಲಿಟ್ಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಲವ್ ಸ್ಟೋರಿಯೂ ಒಂದು. ಮ್ಯಾಚ್ ನೋಡೋಕೆ ಬಂದಿದ್ದ ಅಭಿಮಾನಿಯನ್ನೇ ಗವಾಸ್ಕರ್ ಲವ್ ಮಾಡಿ, ಮದುವೆ ಆಗಿದ್ದು ನಿಜಕ್ಕೂ ನೆಕ್ಸ್ಟ್ ಲೆವೆಲ್.
/newsfirstlive-kannada/media/media_files/2025/08/28/sunil-gavaskar-and-marshneil-2025-08-28-16-40-20.jpg)
ಗವಾಸ್ಕರ್ ಲವ್ ಸ್ಟೋರಿ..
ಸುನಿಲ್ ಗವಾಸ್ಕರ್ ಅಂದ್ರೆ ನೆನಪಾಗೋದು ಸಿರೀಯಸ್ ನೆಸ್. ಕ್ರಿಕೆಟ್ ನೋಡೋಕೆ ಅಂತನೇ ಮಾರ್ಷಲೀನ್ ಮೆಹ್ರೋತ್ರಾ ಆಗಮಿಸಿದ್ದರು. ಗವಾಸ್ಕರ್ ಫ್ಯಾನ್ ಆಗಿದ್ದ ಮಾರ್ಷಲೀನ್, ಆಟೋಗ್ರಾಫ್ ಪಡೆದುಕೊಂಡರು. ಆಟೋಗ್ರಾಫ್ ಕೊಟ್ಟಿದ್ದ ಗವಾಸ್ಕರ್, ಆಟೋಗ್ರಾಫ್ ಜೊತೆ ಮನಸ್ಸನ್ನ ಕೊಟ್ಟಿದ್ರು. ಕಾನ್ಪುರ ಮೂಲದ ಆಕೆ ದೆಹಲಿಯಲ್ಲಿ ವ್ಯಾಸಂಗ ಮಾಡ್ತಿದ್ರು. ಕಾನ್ಪುರದವರು ಎಂದು ತಿಳಿದಿದ್ದ ಗವಾಸ್ಕರ್, ಆಕೆಯ ಇಡೀ ಕುಟುಂಬವನ್ನೇ ಪಂದ್ಯಕ್ಕೆ ಆಹ್ವಾನಿಸಿ ಮದುವೆ ಪ್ರಪೋಸ್ ಮಾಡಿದರು.
/newsfirstlive-kannada/media/media_files/2025/08/28/sachin-and-anjali-2025-08-28-16-40-42.jpg)
ಟೀನೇಜ್ ಲವ್.. ಸಚಿನ್-ಅಂಜಲಿ..!
ಸಚಿನ್ 17ರ ಅರಿಯದಲ್ಲೇ ಶುರುವಾದ ಪ್ರೇಮಕಥೆ, ಸಕ್ಸಸ್ ಫುಲ್ ಲವ್ ಸ್ಟೋರಿಯಾಗಿ ಬದಲಾಗಿದ್ದೇ ರೋಚಕ. 1990ರಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಅಂಜಲಿ, ತಮ್ಮ ಅಮ್ಮನಿಗಾಗಿ ಕಾದಿದ್ದರು. ಇದೇ ವೇಳೆ ಇಂಗ್ಲೆಂಡ್ ಟೂರ್ ಮುಗಿಸಿ ತವರಿಗೆ ವಾಪಸ್ ಆಗಿದ್ದ ಗುಂಗುರು ಕೂದಲಿನ ಸಚಿನ್, ಅಂಜಲಿ ಕಣ್ಣಲ್ಲಿ ಬಿದ್ದಿದ್ದರು. ವಿಪರ್ಯಾಸ ಏನಂದ್ರೆ ಆಗ ಸಚಿನ್ ಯಾರು? ಏನ್ ಮಾಡ್ತಿದ್ದಾರೆ ಅನ್ನೋದೇ ಗೊತ್ತಿರಲಿಲ್ಲ. ಸ್ನೇಹಿತೆಯಿಂದ ಯಾರೆಂದು ತಿಳಿದ ಅಂಜಲಿ, ಸಚಿನ್ ಫೋನ್ ನಂಬರ್ ತೆಗೆದುಕೊಂಡು ಫೋನ್ ಮಾಡಿದ್ರು. ಏರ್ಪೋರ್ಟ್ ವಿಷ್ಯ ತಿಳಿಸಿದ್ರು. ಇಲ್ಲಿಂದ ಶುರುವಾದ ಪ್ರೀತಿ, ಪ್ರೇಮ ವಿವಾಹಕ್ಕೆ ದಾರಿ ಮಾಡಿಕೊಡ್ತು. ಇಂಟ್ರೆಸ್ಟಿಂಗ್ ಅಂದ್ರೆ ಅಂಜಲಿಗಿಂತ 6 ವರ್ಷ ಸಚಿನ್ ಸಣ್ಣವರಾಗಿದ್ರೂ, ಸಕ್ಸಸ್ ಫುಲ್ ಕಪಲ್ಸ್ ಆಗಿದ್ದು ನಿಜಕ್ಕೂ ಗ್ರೇಟ್.
/newsfirstlive-kannada/media/media_files/2025/08/28/ms-dhoni-and-saakshi-2025-08-28-16-41-02.jpg)
ಗವಾಸ್ಕರ್-ಮಾರ್ಷಲೀನ್, ಧೋನಿ-ಸಾಕ್ಷಿ ಲವ್ ಸ್ಟೋರಿಗೆ ಸಾಮ್ಯತೆ
ಸುನಿಲ್ ಗವಾಸ್ಕರ್ ಲವ್ ಸ್ಟೋರಿಗೂ ಧೋನಿ ಲವ್ ಸ್ಟೋರಿಗೂ ಸಾಮ್ಯತೆ ಇದೆ. ಧೋನಿ, ಸಾಕ್ಷಿ ಸಿಂಗ್ ಲವ್ ಸ್ಟೋರಿ ವಿಭಿನ್ನವಾಗಿದ್ರೂ. ಅಡಿಪಾಯ ಒಂದೆ.. ಯಾಕಂದ್ರೆ, ಆಗಷ್ಟೇ ಹೋಟೆಲ್ ಮ್ಯಾನೇಜ್ಮೆಂಟ್ ಮುಗಿಸಿದ್ದ ಸಾಕ್ಷಿ ಸಿಂಗ್, ಕೋಲ್ಕತ್ತಾದ ತಾಜ್ ಬೆಂಗಾಲ್ ಹೋಟೆಲ್ನಲ್ಲಿ ರಿಸಪ್ಷೆನ್ ಆಗಿ ಕೆಲಸಕ್ಕೆ ಸೇರಿದ್ರು. ಇದೇ ಹೋಟೆಲ್ನಲ್ಲಿ ಧೋನಿಯನ್ನ ಮೊದಲು ಭೇಟಿಯಾಗಿ ಆಟೋಗ್ರಾಫ್ ಪಡೆದಿದ್ರು. ಸಾಕ್ಷಿ ಸೌಂದರ್ಯ ಕ್ಲೀನ್ ಬೋಲ್ಡ್ ಆಗಿದ್ದ ಮಾಹಿ, ಹೋಟೆಲ್ ಮ್ಯಾನೇಜರ್ನಿಂದ ಸಾಕ್ಷಿ ನಂಬರ್ ಪಡೆದು ಮಸೇಜ್ ಮಾಡಿದ್ರು. ಕೆಲ ದಿನಗಳ ಬಳಿಕ ಪ್ರೇಮ ನಿವೇದನೆ ಮಾಡಿದ ಧೋನಿಗೆ ಆರಂಭದಲ್ಲಿ ಸಾಕ್ಷಿ ನೋ ಎಂದಿದ್ರು. ಕೊನೆಗೆ ಯೆಸ್ ಎಂದ ಸಾಕ್ಷಿಯನ್ನ ಜುಲೈ 4, 2010ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟುರು.
/newsfirstlive-kannada/media/media_files/2025/08/28/kohli-and-anushka-sharma-2025-08-28-16-41-47.jpg)
ಜಾಹೀರಾತಿನಿಂದ ಶುರುವಾದ ಸ್ನೇಹ ದಾಂಪತ್ಯದಲ್ಲಿ ಅಂತ್ಯ..!
ವಿರಾಟ್ ಕೊಹ್ಲಿ ಅನುಷ್ಕಾ ಶರ್ಮ.. ಇವರ ಸ್ನೇಹ, ಪ್ರೀತಿ, ಬ್ರೇಕಪ್.. ನಂತರ ಲವ್ ಸಕ್ಸಸ್. ಸದ್ಯ ಟೀಮ್ ಇಂಡಿಯಾದ ಸ್ಟಾರ್ ಆ್ಯಂಡ್ ಕ್ಯೂಟ್ ಕಪಲ್ಸ್. ಆದ್ರೆ, ಇವರಿಬ್ಬರ ಲವ್ವೆ ವೇದಿಕೆಯಾಗಿದ್ದು 2013ರ ಶಾಂಪೂ ಜಾಹೀರಾತು. ಮೊದಲ ಬಾರಿಗೆ ಜಾಹೀರಾತಿನ ಶೂಟ್ನಲ್ಲಿ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಭೇಟಿಯಾಗಿದ್ದರು. ಅನುಷ್ಕಾಳನ್ನ ಮೊದಲ ಸಲ ಭೇಟಿಯಾಗಿದ್ದ ವಿರಾಟ್ ನರ್ವಸ್ ಆಗಿದ್ದರು. ನರ್ವಸ್ ಆಗಿದ್ದ ವಿರಾಟ್ನ ಕೂಲ್ ಮಾಡಲು ಅನುಷ್ಕಾ ಜೋಕ್ ಹೇಳಿದ್ರು. ಆ ಜೋಕ್ನಿಂದ ಉತ್ತಮ ಸ್ನೇಹಿತರಾದವರು, ಇವತ್ತು ಕ್ಯೂಟ್ ಕಪಲ್ಸ್ ಆಗಿದ್ದಾರೆ.
/newsfirstlive-kannada/media/media_files/2025/08/28/kohli-and-anushka-sharma-1-2025-08-28-16-42-08.jpg)
ಮ್ಯಾನೇಜರ್ ರಿತಿಕಾ, ಮಿಸೆಸ್ ರಿತಿಕಾ ಆಗಿದ್ದೇ ರೋಚಕ..!
ಕೊಹ್ಲಿ ಅನುಷ್ಕಾಗಿಂತ ರೋಹಿತ್, ರಿತಿಕಾ ಲವ್ ಸ್ಟೋರಿ ಮತ್ತಷ್ಟು ಇಂಟ್ರೆಸ್ಟಿಂಗ್, 2008ರಲ್ಲಿ ಮೊದಲು ಬೇಟಿಯಾಗಿದ್ದರು. ಆರಂಭದಲ್ಲಿ ರೋಹಿತ್ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದ ರಿತಿಕಾ, ದಿನಗಳು ಕಳೆದಂತೆ ರೋಹಿತ್ ಶರ್ಮಾಗೆ ಉತ್ತಮ ಸ್ನೇಹಿತರಾದ್ರು. ಇಂಟ್ರೆಸ್ಟಿಂಗ್ ಅಂದ್ರೆ, ಲವ್ನಲ್ಲಿದ್ದರು, ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಲು ವರ್ಷಗಳೇ ಉರುಳಿತ್ತು. ಆದ್ರೆ, ಕೊನೆಗೆ ರೋಹಿತ್ ಶರ್ಮಾನೇ ಮೈದಾನವೊಂದರಲ್ಲಿ ಮಂಡಿಯೂರಿ ಲವ್ ಪ್ರಪೋಸ್ ಮಾಡಿದ್ರು, ಇದಕ್ಕೆ ರಿತಿಕಾನೂ ಗ್ರೀನ್ ಸಿಗ್ನಲ್ ನೀಡಿದ್ರು.
/newsfirstlive-kannada/media/media_files/2025/08/28/kohli-and-anushka-sharma-3-2025-08-28-16-42-41.jpg)
ಬ್ರಿಟಿಷ್ ರೂಪದರ್ಶಿ ಜೊತೆ ಯುವರಾಜ್ ಲವ್
ಯುವರಾಜ್ ಸಿಂಗ್.. ಟೀಮ್ ಇಂಡಿಯಾದ ಪ್ಲೇ ಬಾಯ್ ಅಂತಾನೇ ಫೇಮಸ್.ಬಾಲಿವುಡ್ ನಟಿಯರ ಜೊತೆಯೇ ಹೆಚ್ಚು ಸುದ್ದಿಯಲ್ಲಿ ಇರ್ತಿದ್ದ ಯುವರಾಜ್, ಬ್ರಿಟಿಷ್ ಮೂಲದ ಬಾಲಿವುಡ್ ನಟಿ ಹೇಜಲ್ ಕೀಚ್ರನ್ನ ಮದುವೆಯಾಗಿ ಸುಖ ಸಂಸಾರ ನಡೆಸ್ತಿದ್ದಾರೆ. ಆದ್ರೆ, ಇವರಿಬ್ಬರ ಲವ್ ಸ್ಟೋರಿಗೆ ವೇದಿಕೆಯಾಗಿದ್ದ ಸ್ನೇಹಿತರ ಬರ್ತ್ ಡೇ ಪಾರ್ಟಿ.. 2011ರಲ್ಲಿ ಮೊದಲು ಬೇಟಿಯಾಗಿದ್ದ ಇವರು, 3 ವರ್ಷಕ್ಕೂ ಹೆಚ್ಚು ಕಾಲ ಡೇಟಿಂಗ್ ನಡೆಸಿದರು. 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವ್ರೇ ಅಲ್ಲ.! ಇನ್ನು ಅನೇಕ ಲವ್ ಸ್ಟೋರಿಗಳು ಟೀಮ್ ಇಂಡಿಯಾದಲ್ಲಿ ಇವೆ.