Advertisment

ಇವತ್ತು ಅಧಿಕ ಧನಲಾಭ.. ಹಣ ಉಳಿಸುವ ಪ್ಲಾನ್ ಮಾಡಿ -ಹೇಗಿದೆ ನಿಮ್ಮ ಭವಿಷ್ಯ?

ಹಣದ ಸಮಸ್ಯೆಗಳು ಬಗೆಹರಿಯುತ್ತವೆ. ನಿಮ್ಮ ವೃತ್ತಿಯಲ್ಲಿ ತಂತ್ರಗಾರಿಕೆ ಬಳಸಿ ಯಶಸ್ವಿಗಳಾಗುತ್ತೀರಿ. ತಾಯಿಯನ್ನು ಗೌರವಿಸಿ ಬೆಲೆ ಕೊಡಿ. ಕಾರ್ಯಚಟುವಟಿಕೆಗಳಲ್ಲಿ ಅರ್ಥಪೂರ್ಣ ಬದಲಾವಣೆ. ಸ್ನೇಹಿತರ ಬಂಧುಗಳ ಮಾತಿನಿಂದ ಪ್ರಭಾವಿತರಾಗುತ್ತೀರಿ. ವ್ಯವಹಾರದಲ್ಲಿ ಹಿಂದಿನ ಶ್ರಮ ಇಂದಿನ ಲಾಭ ಆಗಲಿದೆ.

author-image
Ganesh Kerekuli
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment
ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು, ಆಶ್ವಯುಜ ಮಾಸ, ಕೃಷ್ಣ ಪಕ್ಷ, ತೃತೀಯಾ ತಿಥಿ, ಭರಣಿ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ

RASHI_BHAVISHA_MESHA

 

  • ನೆರೆ ಹೊರೆಯವರಿಂದ ಕೆಲ ಸಹಾಯವು ಸಿಗಲಿದೆ
  • ಸಾಧನೆ ಮತ್ತು ಅನುಭವದ ಬಗ್ಗೆ ಹೆಮ್ಮೆ ತರಲಿದೆ
  • ಆರ್ಥಿಕವಾಗಿ ತೊಂದರೆ ಇಲ್ಲ ಹಣವನ್ನು ಉಳಿಸುವಿಕೆಯ ಬಗ್ಗೆ ಚಿಂತೆ ಮಾಡುತ್ತೀರಿ
  • ಆರೋಗ್ಯದ ವಿಚಾರದಲ್ಲಿ ಸಮಾಧಾನ ಇರುತ್ತದೆ
  • ಎಲ್ಲರೂ ನನ್ನ ಅಂಕೆ ಶಂಕೆಯಲ್ಲಿ ಇರಬೇಕೆಂಬುದು ನಿಮಗೆ ಹೆಚ್ಚಾಗಿ ಅನಿಸುತ್ತದೆ
  • ಸರಳವಾದ ಕೆಲಸಗಳು ಪ್ರಯಾಸವನ್ನುಂಟುಮಾಡಲಿದೆ, ದುರ್ಗಾರಾಧನೆ ಮಾಡಿ

  ವೃಷಭ

RASHI_BHAVISHA_VRSHABA

  • ಸಂಶೋಧನೆಗೆ ಆತ್ಮಾವಲೋಕನಕ್ಕೆ ಸುಸಮಯ 
  • ಸ್ನೇಹಿತರೊಂದಿಗೆ ಉತ್ತಮವಾದ ಸಮಯ ಕಳೆಯುತ್ತೀರಿ
  • ಹಳೆಯ ನೆನಪುಗಳು ಕಾಡುವುದರಿಂದ ಬೇಸರವಾಗಲಿದೆ
  • ಹಳೆಯ ಸಮಸ್ಯೆಗಳಿಗೆ ಮಂಗಳವಾಗುವ ದಿನ
  • ಈ ದಿನ ಉತ್ತಮವಾಗಿದೆ ಖರ್ಚನ್ನು ನಿಯಂತ್ರಿಸಿ 
  • ಮನೆಯಲ್ಲಿ ಒಂಟಿತನ ಕಾಡಲಿದೆ
  • ಸಾಲಿಗ್ರಾಮ ಮಹಾವಿಷ್ಣುವನ್ನು ಸ್ಮರಣೆ ಮಾಡಿ

ಮಿಥುನ

RASHI_BHAVISHA_MITHUNA

 

  • ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸಮಸ್ಯೆಯಾಗಬಹುದು
  • ದೈಹಿಕ ಮತ್ತು ಮಾನಸಿಕ ಒತ್ತಡ ಸಾಧ್ಯತೆ
  • ಅನಪೇಕ್ಷಿತ ಕೆಲಸಗಳು, ಪ್ರಯಾಣ ಎದುರಾಗಬಹುದು
  • ಧಾರ್ಮಿಕ ವಿಚಾರದಲ್ಲಿ ಯಾವುದೇ ರೀತಿಯ ತಾತ್ಸಾರ ಬೇಡ
  • ಕಾರ್ಯದ ಒತ್ತಡ ತುಂಬಾ ಹೆಚ್ಚಾಗಿರುವ ಸಾಧ್ಯತೆಯಿದೆ
  • ಯಾವುದೇ ರೀತಿಯ ಶುಭ ಕೆಲಸಗಳಿಗೆ ದಿನ ಚೆನ್ನಾಗಿಲ್ಲ
  • ಹನುಮಂತನನ್ನು ಆರಾಧನೆ ಮಾಡಿ  

ಕಟಕ 

RASHI_BHAVISHA_KATAKA

  • ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಫಲಿತಾಂಶ ಮನಸ್ಸಿಗೆ ಸಂತಸವನ್ನುಂಟು ಮಾಡುತ್ತದೆ
  • ಭವಿಷ್ಯದ ಬಗ್ಗೆ ಹಲವಾರು ಕನಸುಗಳನ್ನು ಕಾಣುತ್ತೀರಿ
  • ಧಾರ್ಮಿಕ ಕೆಲಸಗಳಲ್ಲಿ ಆಸಕ್ತಿ ಬರುವಂತಹದ್ದು
  • ಹಣಕಾಸಿನ ನಮಸ್ಯೆ ಬಗೆಹರಿಯಲಿದೆ
  • ಮಾನಸಿಕವಾಗಿ ತುಂಬಾ ಸಂತೋಷವಾಗಿರುತ್ತೀರಿ
  • ನಿಮ್ಮ ಪ್ರಾಮಾಣಿಕ ಪ್ರಯತ್ನದಿಂದ ಮಾತ್ರ ಈ ಯಶಸ್ಸನ್ನು ಕಾಣಲು ಸಾಧ್ಯ 
  • ಮಕ್ಕಳ ಚಟುವಟಿಕೆಯಿಂದ ನಿಮಗೆ ಸಿಹಿ ಸುದ್ದಿ  ಸಿಗಲಿದೆ
  • ಮಹಾವಿಷ್ಣುವಿನ ಸ್ಮರಣೆ ಮಾಡಿ  

ಸಿಂಹ 

RASHI_BHAVISHA_SIMHA

  • ಉತ್ತಮವಾದ ಆಹಾರ ಸೇವಿಸುತ್ತೀರಿ ಉತ್ತಮವಾದ ಮಾತು ಆಡುತ್ತೀರಿ
  • ತುಂಬಾ ಮಾನಸಿಕ, ಆರ್ಥಿಕ, ಸಾಮಾಜಿಕ ಶಕ್ತಿ ಬರುತ್ತದೆ
  • ಬೇರೆಯವರ ಭೇಟಿಯೂ ಉತ್ತಮ ಫಲ ಕೊಡಬಹುದು 
  • ಹಳೆಯ ಸಮಸ್ಯೆಗಳು ಇತ್ಯರ್ಥವಾಗಲಿದೆ
  • ನಿಮ್ಮ ತಾರ್ಕಿಕ ನಿಲುವಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ
  • ಹಣದ ಖರ್ಚಿನಿಂದ ಬೇಸರವನ್ನುಂಟು ಮಾಡಲಿದೆ
  • ನ್ಯಾಯಾಲಯದ ವಿಚಾರದಲ್ಲಿ ಯಶಸ್ಸು ಸಿಗಲಿದೆ                                                 
  • ಈಶ್ವರನ ಆರಾಧನೆ ಮಾಡಿ

ಕನ್ಯಾ 

  • ದಾಂಪತ್ಯದಲ್ಲಿ ಪರಸ್ಪರ ಹೊಗಳುವಿಕೆ ಇರಲಿದೆ ಸಂತೋಷವಾಗಿರುತ್ತೀರಿ
  • ಧನಾತ್ಮಕ ಆತ್ಮವಿಶ್ವಾಸವಿರುತ್ತದೆ 
  • ಸ್ನೇಹಿತರಿಂದ ಬೇಸರವಾಗಲಿದೆ
  • ಹಿಂದೆ ಮಾಡಿದ ವ್ಯವಹಾರದಿಂದ ಲಾಭ ಕಾಣಲಿದೆ
  • ಸಕಾಲಕ್ಕೆ ನಿಮ್ಮ ಕೆಲಸಗಳಾಗಲಿದೆ
  • ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ
  • ಇಷ್ಟದೇವತಾ ಆರಾಧನೆ ಮಾಡಿ     

ತುಲಾ 

  • ವಿದ್ಯಾರ್ಥಿಗಳಿಗೆ ಮನಸ್ಸು ಬೇರೆ ಕಡೆ ಹೋಗುವಂತಹದ್ದು
  • ಅನಾರೋಗ್ಯ ಕಾಡಲಿದೆ
  • ಅಸಭ್ಯ ಮಾತುಗಳಿಂದ ಜನರು ದೂರವಾಗುತ್ತಾರೆ
  • ಕೆಲಸದಲ್ಲಿ ಅನೇಕ ಸವಾಲುಗಳು ಎದುರಾಗುತ್ತದೆ
  • ಏಕನಕ್ಷತ್ರದ ದಂಪತಿಗಳಿಗೆ ದೀರ್ಘಕಾಲದ ದಾಂಪತ್ಯ ಸಮಸ್ಯೆ ಕಾಡುವಂತಹದ್ದು
  • ಈ ರಾಶಿಯ ಪ್ರೇಮಿಗಳಿಗೆ ಶುಭವಲ್ಲ
  • ಏಕನಕ್ಷತ್ರ ಶಾಂತಿ ಮಾಡಿಸಬೇಕು

ವೃಶ್ಚಿಕ 

  • ಬೇರೆಯವರಿಗೆ ನಿಮ್ಮನ್ನು ಹೋಲಿಕೆ ಮಾಡಬಾರದು
  • ಚಾಲ್ತಿಯಲ್ಲಿದ್ದ ಕೆಲಸ ಸ್ಥಗಿತವಾಗಬಹುದು
  • ಆತ್ಮವಿಶ್ವಾಸದ ಕೊರತೆಯೂ ಇರಬಹುದು
  • ಮಾನಸಿಕ ಸ್ಥಿಮಿತತೆ ಇರುವುದಿಲ್ಲ
  • ನಿರ್ಲಕ್ಷ್ಯದಿಂದ ಕೆಲಸದ ಗುಣಮಟ್ಟ ತಗ್ಗಬಹುದು
  • ಹಿರಿಯರ ಸಲಹೆ ಅಗತ್ಯವಿದೆ 
  • ಅಶ್ವತ್ಥ ಮರಕ್ಕೆ 12 ಬಾರಿ ಪ್ರದಕ್ಷಿಣೆ ಮಾಡಿ

ಧನುಸ್ಸು 

  • ತಂದೆಯವರೊಂದಿಗೆ ವ್ಯವಹಾರಿಕ ಚರ್ಚೆ ನಡೆಯಬಹುದು
  • ಆಧ್ಯಾತ್ಮಿಕವಾಗಿ ಚಿಂತನೆ ಮಾಡಿ  
  • ದಾಂಪತ್ಯದಲ್ಲಿ ಸ್ವಲ್ಪ ವಾದ-ವಿವಾದ ಸಾಧ್ಯತೆ
  • ನಿಮ್ಮ ಕಾರ್ಯಕ್ಷೇತ್ರದಲ್ಲಿ ಲಾಭದ ಸೂಚನೆಯಿದೆ
  • ವಿಚಾರಗಳು, ಸಂದರ್ಭಗಳು ಕಾಲ ಕ್ರಮೇಣ ನಿಮ್ಮ ಪರವಾಗಿ ಆಗಬಹುದು
  • ಉದಾರತೆ, ದಾನಶೀಲತೆ ನಿಮ್ಮ ಗೌರವವನ್ನು ಹೆಚ್ಚು ಮಾಡಬಹುದು
  • ಮಹಾಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿ

ಮಕರ 

  • ಹಣ ಮತ್ತು ದಾಖಲಾತಿ ನಷ್ಟವಾಗುವ ಸಾಧ್ಯತೆ ಇದೆ
  • ರಿಯಲ್ ಎಸ್ಟೇಟ್ ನವರಿಗೆ ಎಚ್ಚರಿಕೆಯ ಸೂಚನೆಗಳು ಕಾಣುತ್ತವೆ
  • ಸರ್ಕಾರಿ ಕೆಲಸಕ್ಕೆ ಹೋಗಿ ವಾಪಸ್ಸು ಬರುವ ಸಾಧ್ಯತೆಯಿಂದಾಗಿ ಬೇಸರವಾಗಲಿದೆ
  • ತಾಯಿಯವರ ಆರೋಗ್ಯದಲ್ಲಿ ವ್ಯತ್ಯಯವಾಗಲಿದೆ ಎಚ್ಚರಿಕೆವಹಿಸಿ
  • ಅಧಿಕಾರ, ಅಹಂಭಾವ ಜೀವಕ್ಕೆ ಕುತ್ತು ತರಬಹುದು 
  • ಶೀತ ಸಂಬಂಧವಾದ ಕಾಯಿಲೆ ಇರುವವರಿಗೆ ಸ್ವಲ್ಪ ತೊಂದರೆ ಇದೆ
  • ಇಂದ್ರಾಕ್ಷೀ ದೇವಿಯ ಆರಾಧನೆ ಮಾಡಿ

ಕುಂಭ 

  • ಮಕ್ಕಳ ಬಗ್ಗೆ ಚಿಂತಿಸಬೇಕಾಗಬಹುದು, ನಿಮ್ಮ ಗೌರವಕ್ಕೆ ಧಕ್ಕೆ ತರಬಹುದು
  • ಸಾಯಂಕಾಲ ಹೊತ್ತಿಗೆ ಮಾನಸಿಕ ಬೇಸರ ಕಾಡಬಹುದು
  • ಮನೆಯಲ್ಲಿ ಶಾಂತಿಯ ವಾತಾವರಣ ಇರಬಹುದು
  • ಕುಟುಂಬದವರೊಂದಿಗೆ ಸಮಯ ಕಳೆಯಲು ಅವಕಾಶ ಕಡಿಮೆ ಸಾಧ್ಯತೆ
  • ಕಾರ್ಯಕ್ರಮಗಳ ಮಧ್ಯೆಯೂ ಕೂಡ ಸಾಮಾಜ ಸೇವೆ ಮಾಡುವ ಅವಕಾಶ ಸಿಗಬಹುದು
  • ಪ್ರಭಾವಿ ವ್ಯಕ್ತಿಗಳ ಪರಿಚಯ ಅಥವಾ ಸಂಪರ್ಕವಾಗುವ ದಿನ
  • ದುರ್ಗಾಸಪ್ತಶತಿ  ಪಾರಾಯಣ ಮಾಡಿ

ಮೀನ

  • ಜನ ಮನೆಯವರಿಗೆ ಹುಡುಕಿಕೊಂಡು ಸಹಾಯಕ್ಕಾಗಿ ಬರಬಹುದು
  • ಸಾಮಾಜಿಕವಾದ ಸ್ಥಾನ ಮಾನ ಹೆಚ್ಚಾಗಲಿದೆ
  • ಇಂದು ಕುಟುಂಬದ ಬಗ್ಗೆ ಜವಾಬ್ದಾರಿ ತೋರಿಸಬೇಕು
  • ಜನರಿಗೆ ನಿಮ್ಮಿಂದ ನಿರೀಕ್ಷೆಗಳು ಈಡೇರಬಹುದು
  • ಹಣದ ಲಾಭ ಕೂಡ ಇರುವ ದಿನ
  • ವ್ಯವಹಾರದಲ್ಲಿ ಗಟ್ಟಿಯಾದ ನಿರ್ಧಾರ ಮಾಡಬಹುದು
  •  ಕುಲದೇವತೆಯನ್ನ ಪ್ರಾರ್ಥನೆ ಮಾಡಿ    

ಇದನ್ನೂ ಓದಿ: ಜೊಹೊ ಮೇಲ್‌ಗೆ ಶಿಫ್ಟ್ ಆದ ಕೇಂದ್ರ ಸಚಿವ ಅಮಿತ್ ಶಾ : ಡೋನಾಲ್ಡ್ ಟ್ರಂಪ್ ನಡೆ ಫಾಲೋ ಮಾಡಿದ ಶಾ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ           

Rashi Bhavishya
Advertisment
Advertisment
Advertisment