Advertisment

ಹೆಚ್ಚು ನಿರೀಕ್ಷೆ ಬೇಡ.. ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗಲಿದೆ -ರಾಶಿ ಭವಿಷ್ಯ

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು. ಕಾರ್ತಿಕ ಮಾಸ, ಶುಕ್ಲಪಕ್ಷ, ಪಂಚಮಿ ತಿಥಿ, ಜ್ಯೇಷ್ಠ ನಕ್ಷತ್ರ. ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

author-image
Ganesh Kerekuli
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಮೇಷ 

  • ನಾನು ಹೇಳಿದ್ದೇ ನಡೆಯಬೇಕು ಅನ್ನೋದನ್ನ ದೂರಮಾಡಿ, ಜಯ ಇದೆ
  • ಸಾಯಂಕಾಲದ ಹೊತ್ತಿಗೆ ಎಲ್ಲವೂ ಸಮಾಧಾನಕರ
  • ಬೇರೆಯವರಿಂದ ಹೆಚ್ಚು ನಿರೀಕ್ಷೆ ಬೇಡ
  • ಹಣದ ವಿಚಾರಕ್ಕೆ ಅಣ್ಣತಮ್ಮಂದಿರಲ್ಲಿ ಜಗಳ ಆಗಬಹುದು
  • ಶತ್ರುಗಳಿಂದ ಪರೋಕ್ಷ ತೊಂದರೆ ಆಗಬಹುದು
  • ಸಮಾಜದಲ್ಲ್ಲಿ ನೌಕರಿಯಲ್ಲಿ ಪ್ರಶಂಸೆ ಸಿಗಲಿದೆ
  • ಮುನೇಶ್ವರನ ಪ್ರಾರ್ಥಿಸಿ

ವೃಷಭ

  • ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ಸಿಗಲಿದೆ
  • ರಿಯಲ್​ ಎಸ್ಟೇಟ್​ನವರಿಗೆ ಅನುಕೂಲವಿದೆ
  • ವೃತ್ತಿಯಲ್ಲಿ ಸಮಾಧಾನ ಸಿಗುವ ದಿನ
  • ಒತ್ತಡಕ್ಕೆ ಮಣಿದು ಬಂಧುತ್ವದಲ್ಲಿ ಭಿನ್ನಾಭಿಪ್ರಾಯ
  • ಅನೇಕ ಅನುಮಾನಗಳಿಗೆ ಸರಿಯಾದ ಉತ್ತರ ಸಿಗುವಂತಹದ್ದು
  • ವ್ಯಾಪಾರದಲ್ಲಿ ಆರ್ಥಿಕ ಲಾಭ ಸಿಗಲಿದೆ
  • ಯೋಗನರಸಿಂಹನ ಆರಾಧನೆ ಮಾಡಿ

ಮಿಥುನ 

  • ಅಪರಿಚಿತರ ಒಡನಾಟ ಬೇಡ
  • ರಸ್ತೆ ಅಪಘಾತ ಸಂಭವಿಸಬಹುದು
  • ಶತ್ರುಗಳು ನಿಮ್ಮ ವಿರುದ್ಧ ತಿರುಗಿ ಬೀಳಬಹುದು
  • ವಿದ್ಯಾರ್ಥಿಗಳಲ್ಲಿ ನಿರ್ಲಕ್ಷದಿಂದ ತೊಂದರೆಯಾಗಬಹುದು
  • ಆರ್ಥಿಕ ಸ್ಥಿತಿ ದುರ್ಬಲವಾಗುತ್ತದೆ
  • ಪ್ರೇಮಿಗಳಿಗೆ ಪರಸ್ಪರ ಜಗಳ ಆಗಬಹುದು
  • ದುರ್ಗಾರಾಧನೆ ಮಾಡಿ
Advertisment

ಕಟಕ 

  • ಕೆಲಸದ ನಿಮಿತ್ತ ಚರ್ಚೆ ನಡೆಸಬಹುದು
  • ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಗಮನಿಸಿ
  • ಪ್ರಯಾಣಕ್ಕೆ ಈ ದಿನ ಚೆನ್ನಾಗಿದೆ
  • ಕಳೆದ ಹಣ ಮತ್ತೆ ಸಿಗಬಹುದು
  • ಕುಟುಂಬದವರ ಜೊತೆ ಪ್ರವಾಸಕ್ಕೆ ಅವಕಾಶವಿದೆ
  • ಇಂದು ಪ್ರೇಮಿಗಳಿಗೆ ಶುಭವಿದೆ
  • ಶ್ರೀರಾಮನನ್ನು ಆರಾಧಿಸಿ

ಸಿಂಹ 

  • ನಿಮ್ಮ ಬೇಜವಾಬ್ದಾರಿ ನಿಮಗೆ ಮಾರಕ
  • ಖಾಸಗಿ ಕ್ಷೇತ್ರದವರ ಆದಾಯ ಹೆಚ್ಚಾಗುತ್ತದೆ
  • ಕಾನೂನು ವಿಚಾರಗಳು ನಿಮ್ಮ ಪರವಾಗುತ್ತದೆ
  • ದಿನದ ಆರಂಭ ನಿಧಾನಗತಿಯಲ್ಲಿ ಸಾಗುತ್ತದೆ
  • ಮಾಡಬೇಕಿದ್ದ ಕೆಲಸದಿಂದ ಹಿಂದೆ ಸರಿಯಬಾರದು
  • ಕಾಲಿನ ಸಮಸ್ಯೆ ಕಾಣಬಹುದು
  • ವಿಷ್ಣುಸಹಸ್ರನಾಮ ಪಠಿಸಿ

ಕನ್ಯಾ

  • ಸ್ನೇಹಿತರ ಸಹಾಯ ಸಹಕಾರ ಸಿಗಲಿದೆ
  • ಮಕ್ಕಳ ತಪ್ಪುಗಳ ಬಗ್ಗೆ ನಿರ್ಲಕ್ಷ್ಯ ಬೇಡ
  • ಪ್ರೇಮಿಗಳಿಗೆ ತೊಂದರೆಯಾಗಬಹುದು ಎಚ್ಚರಿಕೆ ವಹಿಸಿ
  • ಆರೋಗ್ಯದಲ್ಲಿ ಸುಧಾರಣೆ ಕಾಣ್ತೀರಿ
  • ನಿಮ್ಮ ಕೆಲಸದಲ್ಲಿ ಜನರು ತಪ್ಪನ್ನು ಗುರುತಿಸಿ ಹೇಳಬಹುದು
  • ಶಿವಾರಾಧನೆ ಮಾಡಿ
Advertisment

ತುಲಾ 

  • ವ್ಯಾಪಾರದಲ್ಲಿ ಅನರ್ಥದಿಂದ ಸ್ವಲ್ಪ ನಷ್ಟ ಗಲಾಟೆ ಆಗಬಹುದು
  • ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿದ್ರೆ ಒಳ್ಳೆಯದು
  • ಸಮಯಕ್ಕೆ ಯಾವುದೋ ಸಹಾಯ ನಿಮ್ಮ ಪರವಾಗುತ್ತದೆ
  • ಬೇರೆಯವರ ವಿಚಾರದಲ್ಲಿ ಪ್ರತಿಕ್ರಿಯಿಸಬೇಡಿ
  • ನಿಮ್ಮ ಕಾರ್ಯವನ್ನು ಪ್ರಶಂಸಿಸಲಾಗುತ್ತದೆ
  • ಕೆಲಸಗಳು ಸಕಾಲದಲ್ಲಿ ಪೂರ್ಣವಾಗುವುದಿಲ್ಲ
  • ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆ ಮಾಡಿ

ವೃಶ್ಚಿಕ

  • ಕುಟುಂಬದಲ್ಲಿ ಎಲ್ಲರೂ ಭಾವನಾತ್ಮಕವಾಗಿ ವ್ಯವಹರಿಸಬಹುದು
  • ಇಂದು ನಿಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಿ
  • ವ್ಯಾಪಾರ ವಿಸ್ತರಣೆಗೆ ಹೆಚ್ಚು ಅವಕಾಶ ಇರಲಿದೆ
  • ಪೂರ್ವ ನಿಯೋಜಿತ ಕೆಲಸಗಳಲ್ಲಿ ಅನುಕೂಲ
  • ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗುವ ಸಾಧ್ಯತೆ
  • ಕಾನೂನು ವಿಚಾರದಲ್ಲಿ ಜಯ ಸಿಗಲಿದೆ
  • ಸೂರ್ಯನಾರಾಯಣನ ಆರಾಧನೆ ಮಾಡಿ

ಧನುಸ್​

  • ದೇಹ ವಿಶ್ರಾಂತಿಯನ್ನು ಹೆಚ್ಚಾಗಿ ಬಯಸಬಹುದು
  • ಅಧಿಕಾರಿಗಳ ಕೃಪೆಗೆ ಒಳಗಾಗುತ್ತೀರಿ
  • ನೀವು ಆಡುವ ಮಾತು ಮಿತವಾಗಿರಲಿ
  • ವೃತ್ತಿ, ನೌಕರಿಯಲ್ಲಿ ಪೂರ್ಣ ಗಮನಹರಿಸುವುದಿಲ್ಲ
  • ಆಹಾರದಿಂದ  ಆರೋಗ್ಯದಲ್ಲಿ ವ್ಯತ್ಯಯ ಆಗಬಹುದು
  • ಇಂದು ಆಲಸ್ಯ ಬೇಡ
  • ಹಳೆಯ ಅನುಭವದಿಂದ ಪಾಠ ಕಲಿಯುತ್ತೀರಿ
  • ಇಂದ್ರಾಕ್ಷಿ ಸ್ತೋತ್ರ ಪಠಿಸಿ
Advertisment

ಮಕರ

  • ದೈವಾನುಗ್ರಹಕ್ಕೆ ಪಾತ್ರರಾಗುತ್ತೀರಿ
  • ಸಹೋದ್ಯೋಗಿಗಳು ಸಂತೋಷವಾಗಿರುವುದಿಲ್ಲ
  • ದಾಂಪತ್ಯದಲ್ಲಿ ವ್ಯೆಮನಸು ಉಪಶಮನವಾಗುತ್ತದೆ
  • ಸರ್ಕಾರಿ ಕೆಲಸಗಳು ಕಾರಣಾಂತರಗಳಿಂದ ವಿಳಂಬ
  • ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ
  • ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
  • ಕುಲದೇವರನ್ನು ಆರಾಧನೆ ಮಾಡಿ

ಕುಂಭ

  • ವಿರೋಧಿಗಳಿಗೆ ನಿಮ್ಮ ಶಕ್ತಿ ಸಾಮರ್ಥ್ಯದ ಅರಿವಾಗುತ್ತದೆ
  • ಬೇರೆಯವರ ಕೆಟ್ಟದೃಷ್ಟಿ ಬೀಳದಂತೆ ಕಾಪಾಡಿಕೊಳ್ಳಿ
  • ಇಂದು ನಿಮ್ಮ ಜೀವನ ಶೈಲಿ ಬದಲಾವಣೆಯಾಗಲಿದೆ
  • ಅಪೂರ್ಣ ಕೆಲಸ ಪೂರ್ಣಗೊಳಿಸುವಲ್ಲಿ ತಲ್ಲೀನರಾಗಿರುತ್ತೀರಿ
  • ವ್ಯಾಪಾರ ವ್ಯವಹಾರದ ಸಮಸ್ಯೆಗೆ ಪರಿಹಾರ ಸಿಗಲಿದೆ
  • ವಿದ್ಯಾರ್ಥಿಗಳಿಗೆ ಉತ್ತಮವಾದ ದಿನ
  • ಗಣಪತಿ ಆರಾಧನೆ ಮಾಡಿ

ಮೀನ

  • ಹಣ ಹೂಡಿಕೆ ಮಾಡುವುದರಿಂದ ಲಾಭವಿದೆ
  • ಆರ್ಥಿಕವಾಗಿ ಅನೂಕೂಲ ಕಾಣುವ ದಿನ
  • ಇಂದಿನ ಪರಿಸರ ಧನಾತ್ಮಕವಾಗಿರುತ್ತದೆ
  • ಕುಟುಂಬದವರ ಸಹಕಾರ ಸಹಾಯ ದೊರೆಯಲಿದೆ
  • ಇಂದು ಹೆಚ್ಚು ಖರ್ಚು ಖರ್ಚಾಗಬಹುದು
  • ಐಶ್ವರ್ಯ ಲಕ್ಮೀ ಆರಾಧನೆ ಮಾಡಿ
Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment
Advertisment
Advertisment