Advertisment

ಸಾಕು ಮತ್ತು ಕಾಡು ಪ್ರಾಣಿಗಳಿಂದ ದೂರವಿರಿ.. ಇವತ್ತು ತುಂಬಾನೇ ಡೇಂಜರ್..!

ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು. ಭಾದ್ರಪದ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಪುಷ್ಯಾ ನಕ್ಷತ್ರ. ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

author-image
Ganesh Kerekuli
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಮೇಷ 

Advertisment
  • ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಗ್ಗೆ ಚಿಂತಿಸಿ ಆಯಾಸ ಆಗುತ್ತೀರಿ
  • ಕಣ್ಣು ಮತ್ತು ಕಿವಿಗೆ ಹಾನಿಯಾಗುವ ಸೂಚನೆಗಳಿವೆ ಎಚ್ಚರಿಕೆ
  • ಮಾನಸಿಕವಾಗಿ ಮತ್ತು ಕೆಲಸದ ಒತ್ತಡಗಳಿಂದ ತೊಂದರೆಯಾಗುವ ಸಾಧ್ಯತೆಯಿದೆ
  • ಸಮಸ್ಯೆಗಳಿದ್ದರೂ ಸಂಬಂಧಿಕರ ಮನೆಗೆ ಭೇಟಿ ನೀಡುವ ಅನಿವಾರ್ಯತೆ ಇದೆ
  • ನಿದ್ದೆ ಮತ್ತು ಆಹಾರದ ವ್ಯತ್ಯಾಸದಿಂದ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರಾಗಬಹುದು
  • ಇಷ್ಟ ದೇವತೆಯನ್ನು ಸ್ಮರಣೆ ಮಾಡಿ

ವೃಷಭ 

  • ಆದಾಯದ ಮೂಲಗಳು ನಿಮ್ಮಲಿಗೆ ಹುಡುಕಿಕೊಂಡು ಬರಬಹುದು
  • ಪ್ರೀತಿ ಪಾತ್ರರ ಜೊತೆಯಲ್ಲಿ ಕಾಲ ಕಳೆಯಲು ಹೋಗಿ ಅವಮಾನವಾಗಬಹುದು
  • ತಾಯಿಗೆ ಹೃದಯ ಸಂಬಂಧಿ ತೊಂದರೆ ಕಾಣಬಹುದು, ತಾತ್ಸಾರ ಮಾಡಬೇಡಿ
  • ನಿಮ್ಮ ಮರೆವಿನಿಂದ ನಿಮ್ಮೆಲ್ಲಾ ಕಾರ್ಯಗಳು ಅಸ್ತವ್ಯಸ್ತವಾಗಬಹುದು
  • ಬಹಳ ಸಂತೋಷವಾಗಿ ಈ ದಿನ ಕಳೆಯುತ್ತೀರಿ
  • ತ್ರ್ಯಂಬಕರುದ್ರ ಮಂತ್ರ ಜಪ ಮಾಡಿ

ಮಿಥುನ

  • ಕಟ್ಟಡ ಸಾಮಾಗ್ರಿಗಳನ್ನು ಮಾರಾಟ ಮಾಡುವವರಿಗೆ ಶುಭವಿದೆ
  • ನೀವು ಕೂಡ ಹೊಸ ಆಸ್ತಿ ಖರೀದಿಯ ಚಿಂತನೆ ಮಾಡಬಹುದು
  • ವ್ಯಾಪಾರದಲ್ಲಿ ಅತಿ ಬೇಡಿಕೆ ಅವಕಾಶಗಳು ನಿಮ್ಮದಾಗುವ ಸಾಧ್ಯತೆಯಿದೆ
  • ಜಾಹೀರಾತುದಾರರಿಗೆ ಹಿನ್ನಡೆ  ನಷ್ಟ ಆಗುವ ಸಾಧ್ಯತೆಯಿದೆ
  • ಸಾಮಾಜಿಕ ಮಾಧ್ಯಮಗಳಲ್ಲಿ ನಿಮ್ಮನ್ನು ಗುರುತಿಸಿಕೊಂಡಿರುವುದು ತೊಂದರೆಯಾಗಬಹುದು
  • ಮಹಾದೇವನನ್ನು ಬಿಲ್ವ ಪತ್ರೆಯಿಂದ ಅರ್ಚಿಸಿ

ಕಟಕ

Advertisment
  • ಪ್ರಯಾಣ ಅಥವಾ ಪ್ರವಾಸದಿಂದ ಪ್ರಯಾಸವಾಗುವ ಸಾಧ್ಯತೆ ಇದೆ
  • ಸಾಕು ಪ್ರಾಣಿಗಳು ಅಥವಾ ಕಾಡು ಪ್ರಾಣಿಗಳಿಂದ ದೂರವಿರಿ
  • ಮನಸ್ಸಿಗೆ ಬಂದಂತೆ ವರ್ತಿಸಿದ್ರೆ ಅನಾಹುತವಾಗಬಹುದು ಎಚ್ಚರ
  • ಮಕ್ಕಳ ಮಾತು ಈ ದಿನ ನಿಮ್ಮ ಶುಭಫಲ ನೀಡಬಹುದು ತಾತ್ಸಾರ ಮಾಡಬೇಡಿ
  • ಕುಟುಂಬದವರ ಸಹಮತದಿಂದ ನೀವು ಪಾರಾಗಬಹುದು
  • ಚಾಮುಂಡೇಶ್ವರಿಯನ್ನು ಕೆಂಪು ಹೂವಿನಿಂದ ಆರ್ಚಿಸಿ

ಸಿಂಹ 

  • ನಿಮಗಿಂತ ಬಲಶಾಲಿಗಳೊಂದಿಗೆ ಸ್ಪರ್ಧೆ ವಾಗ್ವಾದಗಳು ಬೇಡ
  • ನಿಮ್ಮ ಕೋಪ ನಿಮ್ಮ ಹಿಡಿತದಲ್ಲಿರಲಿ
  • ಸಿಟ್ಟಿಗೆ ಯಾವುದೇ ಕಾರಣಕ್ಕೂ ಬುದ್ಧಿ ಕೊಡಬಾರದು
  • ಪ್ರಕೃತ ನಿಮ್ಮ ಆರೋಗ್ಯ ಚೆನ್ನಾಗಿದೆ ಹಾಗೆ ಮುಂದುವರಿಸಿಕೊಂಡು ಹೋಗಿ
  • ಆಯಸ್ಸು ಮತ್ತು ಆರೋಗ್ಯದ ಬಗ್ಗೆ ಪ್ರಶ್ನೆ ಮಾಡಬಾರದು
  • ರಾಜಕಾರಣಿಗಳ ಭಯದಿಂದ ರಾಜಿ ಮಾಡಿಕೊಳ್ಳುವ ಪರಿಸ್ಥಿತಿ ಬರಬಹುದು
  • ಈಶ್ವರನ ಆರಾಧನೆ ಮಾಡಿ

ಕನ್ಯಾ 

  • ಪ್ರೇಮ ಸಂಬಂಧ ವಿಚಾರದಲ್ಲಿ ಜಗಳ ವಿರಸ ಸಾಧ್ಯತೆ
  • ಹೊಸ ಸಂಬಂಧಗಳಲ್ಲಿ ನಿಮ್ಮ ಗೌರವ ಕಾಪಾಡಿಕೊಳ್ಳಬೇಕು
  • ಬಂಧುತ್ವದಲ್ಲಿ ಬಿರುಕು ವಿನಾಕಾರಣ ಜಗಳ ಆಗಬಹುದು
  • ಕಹಿ ಮಾತುಗಳಿಂದ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು
  • ಕೆಲಸದ ಜಾಗದಲ್ಲಿ, ವೃತ್ತಿಯಲ್ಲಿ ಋಣಾತ್ಮಕ ವಾತಾವರಣ ಮಾನಸಿಕ ಬೇಸರ ಸಾ
  • ಮಾತೆ ಸೀತೆಯನ್ನು ಆರಾಧನೆ ಮಾಡಿ

ತುಲಾ 

Advertisment
  • ಪೋಷಕರಿಗೆ ದುಃಖದಾಯಕವಾದ ದಿನ, ದೊಡ್ಡವರ ವಿಚಾರದಲ್ಲಿ ಕಾಳಜಿ ವಹಿಸಿ
  • ಅತಿಯಾದ ಉತ್ಸಾಹ, ಆತುರದಿಂದ ಮಾಡಿದ ಕೆಲಸಗಳಿಂದ ನಷ್ಟ ಸಾಧ್ಯತೆ
  • ಶಾರೀರಿಕವಾಗಿ ಸುಖವಿರುವುದಿಲ್ಲ, ನರದೌರ್ಬಲ್ಯ ಕಾಡಬಹುದು
  • ಸಂಬಂಧಿಕರಿಂದ ಧನಲಾಭ ದ್ರವ್ಯಲಾಭ ಯೋಗವಿದೆ
  • ವಾಹನ ಚಾಲನೆಯಲ್ಲಿ ತುಂಬಾ ಎಚ್ಚರಿಕೆ ಇರಲಿ
  • ನಿಮ್ಮದಲ್ಲದ ತಪ್ಪಿಗೆ ನೀವು ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಿದೆ
  • ಈಶ್ವರನ ಆರಾಧನೆ ಮಾಡಿ ಗೋವಿಗೆ ಅಕ್ಕಿಬೆಲ್ಲ ಕೊಡಿ

ವೃಶ್ಚಿಕ

  • ರಾಜಕಾರಣಿಗಳು ತಮ್ಮ ಹೇಳಿಕೆಗಳಿಂದ ಸಂಕಷ್ಟಕ್ಕೆ ಸಿಲುಕಬಹುದು ಎಚ್ಚರಿಕೆಯಿರಲಿ
  • ಪ್ರಯಾಣ-ಪ್ರವಾಸದ ಬಗ್ಗೆ ಚರ್ಚೆ ನಡೆದು ಕೊನೆಗೆ ಬೇಡವೆಂದು ಬೇಸರವಾಗಬಹುದು
  • ಮಕ್ಕಳಿಗೆ ಉಸಿರಾಟದ ಅಥವಾ ಶ್ವಾಸಕೋಶದ ಸಮಸ್ಯೆ ಕಾಣಬಹುದು‘
  • ಹೆಚ್ಚು ಹೆಚ್ಚು ಖರ್ಚಿನ ಪಟ್ಟಿ ನೋಡಿ ನಿರಾಶೆಯಾಗಬಹುದು
  • ವಿದ್ಯಾರ್ಥಿಗಳು ತಮ್ಮ ಗುರಿಯನ್ನ ತಲುಪುವ ವಿಚಾರದಲ್ಲಿ ಹೆಚ್ಚು ಗಮನಹರಿಸಿ
  • ಅಶ್ವಿನಿ ದೇವತೆಗಳನ್ನು ಆರಾಧಿಸಿ

ಧನುಸ್​

  • ಪತಿ-ಪತ್ನಿಯರ ಮಧ್ಯೆ ವಿರಸ ದೂರವಾಗಿ ಅನ್ಯೋನ್ಯತೆಯಿಂದ ಇರುವ ಸಮಯ
  • ಹಣ ಹೂಡಿಕೆಗೆ ಮಾತುಕತೆ ನಡೆಯಬಹುದು
  • ಹೊಸ ವಾಹನ ಖರೀದಿ ಮಾಡುವ ಸಾಧ್ಯತೆಯಿದೆ
  • ಮಕ್ಕಳು ಬಿದ್ದು ಗಾಯ ಮಾಡಿಕೊಳ್ಳುವ ಸಾಧ್ಯತೆಯಿದೆ ಗಮನವಿರಲಿ
  • ಕೆಲಸಗಾರರಿಂದ ತೊಂದರೆಯಾಗಬಹುದು
  • ಮನೆಯಲ್ಲಿ ಕಳ್ಳತನದ ಹೆದರಿಕೆ ಕಾಡಬಹುದು ಎಚ್ಚರಿಕೆವಹಿಸಿ
  • ಸುಖವಿದ್ದರೂ ಅನುಭವಿಸುವ ಯೋಗವಿರುವುದಿಲ್ಲ
  • ಮಾನಸಿಕ ಕಿರಿಕಿರಿಯೊಂದಿಗೆ ದಿನ ಮುಕ್ತಾಯವಾಗುತ್ತದೆ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥಿಸಿ

ಮಕರ

Advertisment
  • ಸಮಾಜದಲ್ಲಿ ಹೆಸರು ಕೆಡುವಂತಹ ಸಂದರ್ಭಗಳೇ ಹೆಚ್ಚಾಗಿವೆ ಜಾಗ್ರತೆಯಿರಲಿ
  • ಅತಿಯಾದ ನಂಬಿಕೆ ವಿಶ್ವಾಸ ನಿಮಗೆ ತೊಂದರೆ ಮಾಡಬಹುದು
  • ಕೋರ್ಟ್ ಕಚೇರಿಯ ಹಳೆಯ ಕೇಸ್​ಗಳು ಹಿನ್ನಡೆಯಾಗುವ ಸಾಧ್ಯತೆಯಿದೆ
  • ನಿಮ್ಮ ಅಭಿವೃದ್ಧಿಯನ್ನು, ಬೆಳವಣಿಗೆಯನ್ನ ಸಹಿಸದವರು ನಿಮ್ಮ ವಿರುದ್ಧ ನಿಲ್ಲುತ್ತಾರೆ ಎಚ್ಚರ
  • ಪರೀಕ್ಷಾ ಫಲಿತಾಂಶಗಳು ನಿಮ್ಮ ಪರವಾಗಿ ಬರಲಿದೆ
  • ಶ್ರೀರಾಮನ ಪ್ರಾರ್ಥನೆ ಮಾಡಿ

ಕುಂಭ 

  • ಷೇರು ಮಾರುಕಟ್ಟೆಯಲ್ಲಿ ವಹಿವಾಟು ಕುಸಿತ ಸಾಧ್ಯತೆ
  • ಹೂಡಿಕೆ ಮುಂದೂಡಿದರೆ ಒಳ್ಳೆಯದು
  • ವೈದ್ಯರಿಗೆ ಬಿಡುವಿಲ್ಲದ ಕೆಲಸ ತುಂಬಾ ಆಯಾಸ ಆಗಬಹುದು
  • ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಿನ್ನಡೆ ಸಾಧ್ಯತೆ ಮಾನಸಿಕವಾಗಿ ಬೇಸರ
  • ನಿಮಗೆ ಸಂಬಂಧ ಪಡದೆಯಿರುವ ವಿಚಾರಗಳಿಂದ ದೂರವಿದ್ದರೆ ಒಳ್ಳೆಯದು
  • ಅನಗತ್ಯ ವಿಚಾರಗಳಿಗಾಗಿ ಚಿಂತಿಸಿ ಬೇಸರಗೊಳ್ಳುತ್ತೀರಿ
  • ಹೊಸ ಮನೆಯನ್ನು ಖರೀದಿ ಮಾಡುತ್ತೀರಿ
  • ಅಮೃತ ಮೃತ್ಯುಂಜಯನನ್ನು ಪ್ರಾರ್ಥಿಸಿ 

ಮೀನ 

  • ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪರಿಣಿತಿ ಇರುವವರಿಗೆ ಪುರಸ್ಕಾರ, ಗೌರವ ಸಿಗಬಹುದು
  • ಸ್ವಾಭಿಮಾನಕ್ಕೆ ಧಕ್ಕೆ ಬರುವ ಸಂದರ್ಭ ಏರ್ಪಡಬಹುದು
  • ಮನೆಯಲ್ಲಿರುವುದು ಕಷ್ಟಕರ ಕೆಲಸವಾಗಬಹುದು
  • ದೀರ್ಘಕಾಲದ ರೋಗಗಳು ಉಲ್ಬಣವಾಗುವ ಸೂಚನೆಯಿದೆ
  • ನಿಮ್ಮ ಸಂಶೋಧನೆ ಮತ್ತು ಸಾಧನೆ ಸಮಾಜದಲ್ಲಿ ಆಕರ್ಷಣೀಯವಾಗಿರುತ್ತದೆ
  • ಕೆಲಸದ ಒತ್ತಡದಿಂದಾಗಿ ಕಚೇರಿಯಲ್ಲಿ ಅನಿವಾರ್ಯವಾಗಿ ಇರಬೇಕಾಗಬಹುದು
  • ಪರಮೇಶ್ವರಿಯನ್ನು ಆರಾಧಿಸಿ 
Advertisment

ಇದನ್ನೂ ಓದಿ:ನಟಿ ಐಶ್ಟರ್ಯಾ ರೈ- ಅಭಿಷೇಕ್ ಬಚ್ಚನ್ ನಡುವೆ ಡಿವೋರ್ಸ್ ವಿಷಯ ಸತ್ಯವೋ, ಸುಳ್ಳೋ: ಆ್ಯಡ್ ಗುರು ಪ್ರಹ್ಲಾದ್ ಕಕ್ಕರ್ ಹೇಳಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment
Advertisment
Advertisment